ಕನ್ನಡ ವಾರ್ತೆಗಳು

ವಿದ್ಯಾರ್ಥಿನಿ ನಾಪತ್ತೆ

Pinterest LinkedIn Tumblr

Mood_student_aboscnd

ಮೂಡುಬಿದಿರೆ, ಜುಲೈ.27: ಹಾಸ್ಟೆಲ್ ಕೊಠಡಿ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿ ಯೋರ್ವಳು ಹಾಸ್ಟೆಲ್‌ನಿಂದ ನಾಪತ್ತೆ ಯಾಗಿರುವ ಪ್ರಕರಣ ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದೆ. ಮೂಲತಃ ಶ್ರೀಲಂಕಾ ನಿವಾಸಿಯಾಗಿರುವ ಸಟ್ಟಾಂಬಿರಲಗೆ ಡೊನ್ ನಿಮ್ನ ತರುಷಿ ಸೆಬಾಸ್ಟಿಯನ್ ನಾಪತ್ತೆಯಾದ ವಿದ್ಯಾರ್ಥಿನಿ. ಈಕೆ ಮೂಡುಬಿದಿರೆಯ ಕಾಲೇಜೊಂದರದಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿನಿಯಾಗಿದ್ದು, ಕಳೆದ ಜು. 17ರಂದು ತನ್ನ ಹಾಸ್ಟೆಲ್ ವಾಸ್ತವ್ಯದ ಕೊಠಡಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಳು.

ಕಳೆದ ಜು.25ರಂದು ಈಕೆ ಹಾಸ್ಟೆಲ್‌ನಿಂದ ಕಾಲೇಜಿಗೆ ಹೋಗದೆ ಮಂಗಳೂರು ಮೂಡುಬಿದಿರೆ ರಸ್ತೆಯಲ್ಲಿ ಹೋಗಿದ್ದು, ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಸುಮಾರು ಐದೂವರೆ ಅಡಿ ಎತ್ತರ ಗೋಧಿ ಮೈಬಣ್ಣ ಹೊಂದಿರುವ ಈಕೆ ಇಂಗ್ಲಿಷ್ ಮತ್ತು ಸಿಂಹಳ ಭಾಷೆ ಬಲ್ಲವಳಾಗಿದ್ದಾಳೆ. ಈ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ ಅಥವಾ ಆಯುಕ್ತರಿಗೆ ಮಾಹಿತಿ ನೀಡಿ ಸಹಕರಿಸುವಂತೆ ಕೋರಲಾಗಿದೆ.

Write A Comment