ಕನ್ನಡ ವಾರ್ತೆಗಳು

ಆಗಸ್ಟ್ 8ರಂದು ಮುಂಬೈನಲ್ಲಿ ಕ್ಷತ್ರಿಯ ಬಂಟ್ ಶ್ರೀ -2015, ದೇಹದಾರ್ಢ್ಯ ಸ್ಪರ್ಧೆ

Pinterest LinkedIn Tumblr

Bunt_shree_Press_1

ವರದಿ / ಚಿತ್ರ ; ಸತೀಶ್ ಕಾಪಿಕಾಡ್

ಮಂಗಳೂರು : ಬಂಟರ ಸಂಘ ಮುಂಬಯಿ ತನ್ನ ಪ್ರಾದೇಶಿಕ ಸಮಿತಿಗಳಲ್ಲೊಂದಾದ ಸಿಟಿ ಪ್ರಾದೇಶಿಕ ಸಮಿತಿಯೊಂದಿಗೆ ಹಾಗೂ ಭಾರತ ಸರಕಾರದ ಯುವ ಹಾಗೂ ಕ್ರೀಡಾ ಸಚಿವಾಲಯದ ಮಾನ್ಯತೆ ಹೊಂದಿರುವ ‘ಇಂಡಿಯನ್ ಬಾಡಿ ಬಿಲ್ಡರ್ರ್‍ಸ್ ಫೆಡರೇಶನ್’ ಸಹಭಾಗಿತ್ವದೊಂದಿಗೆ ಆಗಸ್ಟ್ 8ರಂದು ಅಪರಾಹ್ನ 3  ಗಂಟೆಗೆ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ‘ರಾಷ್ಟ್ರೀಯ ಬಂಟ್ ದೇಹದಾರ್ಢ್ಯ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ರಾಷ್ಟ್ರದಾದ್ಯಂತವಿರುವ ಬಂಟ ದೇಹದಾರ್ಢ್ಯ ಪಟುಗಳಿಗೆ ತಮ್ಮ ಪ್ರತಿಭೆಯನ್ನು ಮೆರೆಯಲು ಇದೊಂದು ವೇದಿಕೆಯಾಗಲಿದೆ ಎಂದು ಬಂಟರ ವಾಣಿಯ ಗೌರವ ಸಂಪಾದಕ ಶ್ರೀ ಆಶೋಕ್ ಪಕ್ಕಳ ತಿಳಿಸಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಕರ್ನಿಕೆ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಿಟಿ ರೀಜನ್ ಕಾರ್ಯಧ್ಯಕ್ಷ ದೊಡ್ಡಗುತ್ತು, ಭುಜಂಗ ಆರ್. ಶೆಟ್ಟಿ ಹಾಗೂ ಸಮಿತಿಯ ಸಮನ್ವಯಕ ಕೃಷ್ಣ ವಿ ಶೆಟ್ಟಿ, ನಲ್ಯಾಗುತ್ತು ಪ್ರಕಾಶ್ ಶೆಟ್ಟಿ ಕಾರ್ಯಾಧರ್ಶಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ಕರಣ್ ಶೆಟ್ಟಿ ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗ ಯುವ ವಿಭಾಗದ ನೇತೃತ್ವದಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದರು.

Bunt_shree_Press_2 Bunt_shree_Press_3

ಸ್ಪರ್ಧೆಯಲ್ಲಿ ಮೂರು ‘ಭಾರ’ ವಿಭಾಗಗಳಿದ್ದು ಅಂತಿಮ ಸುತ್ತಿನಲ್ಲಿ ವಿಜಯಯಾಗುವ ಸ್ಪರ್ಧಿಗೆ ‘ಕ್ಷತ್ರಿಯ ಬಂಟ್ ಶ್ರೀ- 2015’ ಬಿರುದು ನೀಡಿ ಪುರುಸ್ಕರಿಸಲಾಗುವುದು. ಜೊತೆಗೆ 1 ಲಕ್ಷ ನಗದು ಬಹುಮಾನ, ಸ್ಪರಣಿಕೆ ನೀಡಲಾಗುವುದು. ಹಾಗೂ ಎಲ್ಲಾ ವಿಭಾಗಳ ಐದು ವಿಜೇತರಿಗೆ ನಗದು ಬಹುಮಾನ, ಸ್ಪರಣಿಕೆ ನೀಡಲಾಗುವುದು. ರಾಷ್ಟ್ರದಾದ್ಯಂತವಿರುವ ಬಂಟ ದೇಹದಾರ್ಢ್ಯಾ ಪಟುಗಳು ತಮ್ಮ ಹೆಸರನ್ನು ನೋಂದಾಯಿಸ ಬಹುದು ಎಂದು ಅವರು ತಿಳಿಸಿದರು.

ಮುಂಬಯಿಯ ಹಿರಿಯ ಹಾಗೂ ಪ್ರತಿಷ್ಠತ ಸಂಸ್ಥೆ ಬಂಟರ ಸಂಘ ಮುಂಬಯಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಸಂಸ್ಥೆಯಾಗಿದೆ. ಸಂಘವು ಒಂಭತ್ತು ಪ್ರಾದೇಶಿಕ ವಿಭಾಗಗಳ ಜೊತೆಗೆ ಮಹಿಳಾ ವಿಭಾಗ, ಯುವ ವಿಭಾಗಗಳನ್ನೊಳಗೊಂಡು ಮುಂಬಯಿಯಾದ್ಯಂತ ಸಂಘದ ಚಟುವಟಿಗಳನ್ನು ಹಬ್ಬಿಕೊಂಡು ಬಂಟ ಸಮುದಾಯದ ಅಸಹಾಯಕ ಕುಟುಂಬಗಳಿಗೆ ನೆರವಾಗುತ್ತುರುವುದಲ್ಲದೆ, ಸಮಾಜ ಬಾಂಧವರ ಸುಖ-ದು:ಖಗಳಲ್ಲಿ ಸದಾ ಪಾಲ್ಗೊಂಡು ಮಾನವೀಯತೆಯಿಂದ ಮೆರೆಯುತ್ತಿದೆ. ‘ಶಿಕ್ಷಣವೇ ನಮ್ಮ ಪ್ರಗತಿಗೆ ಆಧಾರ’ ಎನ್ನುವ ಧ್ಯೇಯ ಮಂತ್ರದೊಂದಿಗೆ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡುತ್ತಿದೆ ಎಂದು ಆಶೋಕ್ ಪಕ್ಕಳ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಅನಿಲ್ ಶೆಟ್ಟಿ ಏಳಿಂಜೆ, ನಲ್ಲ್ಯಗುತ್ತು ಪ್ರಕಾಶ್ ಶೆಟ್ಟಿ, ಯುವ ಘಟಕದ ಅಧ್ಯಕ್ಷ ಕರನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಹೆಚ್ಚಿನ ವಿವಾರಗಳಿಗಾಗಿ ಕರನ್ ಶೆಟ್ಟಿ – 09702479490,  ಮೊನಿಷ್ ರಾಜ್ ಶೆಟ್ಟಿ – 09820855753, ಪ್ರತೀಕ್ ಶೆಟ್ಟಿ  09819053379, ಪ್ರತೀಕ್ ಶೆಟ್ಟಿ – 09892086675 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Email Id : kshatriya.buntshree@gmail.com. Follow us on Facebook : Kshatriya Buntshree 2k15

Write A Comment