ಕನ್ನಡ ವಾರ್ತೆಗಳು

ದೇರಳಕಟ್ಟೆ ಚೂರಿ ಇರಿತ ಪ್ರಕರಣ : ದುಷ್ಕರ್ಮಿಗಳ ಶೀಘ್ರ ಬಂಧನಕ್ಕೆ ಎಸ್ಸೆಸ್ಸೆಫ್ ಮಾಜಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಸ‌ಅದಿ ಅಗ್ರಹ

Pinterest LinkedIn Tumblr

Sssf_news_poto

ಮಂಗಳೂರು,ಜುಲೈ.20: ಇತ್ತೀಚೆಗೆ ನಡುಪದವಿನಲ್ಲಿ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾಗಿ ದೇರಳಕಟ್ಟೆಯ ಯೇನಪೋಯ ಅಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತಿರುವ ಎಸ್ಸೆಸ್ಸೆಫ್ ಪಟ್ಟೂರಿ ಕಲ್ಲರಕೋಡಿ ಶಾಖೆಯ ಕಾರ್ಯಕರ್ತ ಸಿರಾಜ್‌ನನ್ನು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸ‌ಅದಿ ಉರುಮಣೆ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಕೃತ್ಯವನ್ನು ಎಸ್ಸೆಸ್ಸೆಫ್ ದ.ಕ ಜಿಲ್ಲೆ, ಉಳ್ಳಾಲ ಡಿವಿಸನ್ ಮತ್ತು ಮಂಜನಾಡಿ ಸೆಕ್ಟರ್ ತೀವ್ರವಾಗಿ ಖಂಡಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ ಅವರು, ಕೃತ್ಯಕ್ಕೆ ಸಂಬಧಿಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೆಕು ಎಂದು ಅಗ್ರಹಿಸಿದ್ದಾರೆ.ಎಸ್ಸೆಸ್ಸೆಫ್ ಉಳ್ಳಾಲ ಡಿವಿಸನ್ ಅಧ್ಯಕ್ಷ ಉಮರ್ ಅಹ್ಸನಿ, ಕೋಶಧಿಕಾರಿ ಫಾರೂಕ್ ಸಖಾಫಿ, ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಸ್ಟರ್ ಮೊಂಟೆಪದವು, ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ ಮುಂತಾದವರು ಅವರ ಜತೆಗಿದ್ದರು.

Write A Comment