ಕನ್ನಡ ವಾರ್ತೆಗಳು

ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆ: ರಾಕೇಶ್ ಕೊಣಾಜೆಗೆ ಬೆಳ್ಳಿ

Pinterest LinkedIn Tumblr

masthak_abhisheka_phot

ಮಂಗಳೂರು,ಜುಲೈ20 : ಪಶ್ಚಿಮ ಬಂಗಾಳದ ಕೊಲ್ಕೊತ್ತಾದಲ್ಲಿರುವ ಹರಪ್ರಸಾದ್ ಶಾಸ್ತ್ರಿ ಫೊಟೊಕ್ಲಬ್ ಏರ್ಪಡಿಸಿದ್ದ ವಿಬ್ಜ್ಯಾರ್ ಫೊಟೊ ಆರ್ಟ್ ಸರ್ಕಿಟ್ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪ್ರವಾಸಿ ಕ್ಷಣ ವಿಭಾಗದಲ್ಲಿ ಮಂಗಳೂರಿನ ಛಾಯಾಗ್ರಾಹಕ ರಾಕೇಶ್ ಕೊಣಾಜೆಯವರ “ಮಸ್ತಕಾಭಿಷೇಕ” ಶೀರ್ಷಿಕೆಯ ಚಿತ್ರವು ಬೆಳ್ಳಿಯ ಪದಕವನ್ನು ಪಡೆದುಕೊಂಡಿದೆ. ಈ ಚಿತ್ರವನ್ನು ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕ್ಲಿಕ್ ಮಾಡಲಾಗಿತ್ತು.

Write A Comment