ಕನ್ನಡ ವಾರ್ತೆಗಳು

ಕೋಟ: ಅಪ್ರಾಪ್ತೆ ಲೈಂಗಿಕ ದೌರ್ಜನ್ಯ ಪ್ರಕರಣ: ಯುವತಿಯ ತನಿಖೆ ನಡೆಸಲು ಠಾಣೆಗೆ ಮನವಿ

Pinterest LinkedIn Tumblr

Kota_Pocso Case_Four Arrest

ಕುಂದಾಪುರ: ಕೋಟ ಸಮೀಪದ ಗ್ರಾಮವೊಂದರ ಅಪ್ರಾಪ್ತ ಯುವತಿಯ ಜತೆ ಪ್ರೀತಿಯ ನಾಟಕವಾಡಿ ಆಕೆಯ ಅಶ್ಲೀಲ ವೀಡಿಯೊವನ್ನು ಪಡೆದು ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೇ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ನಾಲ್ವರನ್ನು ಫೋಕ್ಸೋ ಕಾಯ್ದೆಯಡಿ ಶುಕ್ರವಾರ ಬಂಧಿಸಲಾಗಿತ್ತು. ಈ ನಡುವೆ ನೂರಾರು ಮಂದಿ ಸ್ಥಳೀಯರು ಶುಕ್ರವಾರ ರಾತ್ರಿ ಕೋಟ ಠಾಣೆಗೆ ಭೇಟಿ ನೀಡಿ ಯುವತಿಯ ತನಿಖೆ ನಡೆಸಬೇಕು ಎಂದು ಠಾಣಾಧಿಕಾರಿಗಳಿಗೆ ಮನವಿ ನೀಡಿದರು.

ಏನಿದು ಘಟನೆ?: ಪ್ರೀತಿಯ ನಾಟಕವಾಡಿದ ಗಣೇಶ್ ನನ್ನನ್ನು ಯಾವುದೋ ವಿಚಾರದಲಿ ಬೆದರಿಸಿ ಬಳಿಕ ಅಶ್ಲೀಲ ವಿಡಿಯೋ ಪಡೆದು ಅದನ್ನು ಎಲ್ಲರಿಗೂ ರವಾನಿಸಿದ್ದು ಅದನ್ನಿಟ್ಟುಕೊಂಡು ಕೆಲವರು ನನ್ನ ಬಳಿ  ಅಸಭ್ಯವಾಗಿ ವರ್ತಿಸಿ ನನ್ನನ್ನು ವಂಚಿಸಲು ಮುಂದಾಗಿದ್ದಾರೆಂದು ನೊಂದ ಕೋಟ ಸಮೀಪದ ಯುವತಿಯೋರ್ವಳು ಕೋಟ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳಾದ  ಕೋಟ ಪರಿಸರದ ಗಣೇಶ, ನಾಗರಾಜ್, ಶ್ರೀನಿವಾಸ, ಹರೀಶ್  ವಿರುದ್ದ ಪೋಸ್ಕೊ ಕಾಯ್ದೆ ಹಾಗೂ ಅತ್ಯಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿತ್ತು.

ಯುವತಿಯ ವಿರುದ್ಧವೇ ನಾಗರಿಕರ ಅಸಮಾಧಾನ: ಈ ಪ್ರಕರಣಕ್ಕೆ ಸಂಬಂಧಿಸಿ ನೂರಾರು ಮಂದಿ ಸ್ಥಳೀಯರು ಶುಕ್ರವಾರ ರಾತ್ರಿ ಕೋಟ ಠಾಣೆಗೆ ಭೇಟಿ ನೀಡಿ ಯುವತಿಯ ವಿರುದ್ಧವೇ ಠಾಣಾಧಿಕಾರಿಗಳಿಗೆ, ಈಕೆಯ ನಡವಳಿಕೆ ಕುರಿತು ಅನುಮಾನಗಳಿದ್ದು ಈಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನ ಮೂಲಕ ಮನವಿ ಸಲ್ಲಿಸಿದರು.

ಪೋಲಿಗಳಂತೆ ಅಲೆಯುತ್ತಿದ್ದ ಈ ನಾಲ್ವರು ಸದಾ ಹೆಣುಮಕ್ಕಳ ಚುಡಾವಣೆಯಲ್ಲಿ ಬ್ಯುಸಿಯಾಗಿರುತ್ತಿದ್ದರು. ಅಪ್ರಾಪ್ತೆಯೋರ್ವಳನ್ನು ನಂಬಿಸಿ, ವಂಚಿಸಿದ ಖದೀಮರು ಜೈಲು ಪಾಲಗಿರುವುದು ಈ ಭಾಗದ ಯುವತಿಯರ, ಮಹಿಳೆಯರ ಪಾಲಿಗೆ ಸಮಾಧಾನಕರ ಸಂಗತಿಯಾಗಿದೆ.

Write A Comment