ಕುಂದಾಪುರ: ಕಳೆದ ಶುಕ್ರವಾರ ಬೆಳಿಗ್ಗೆ ತಾಯಿಯೊಂದಿಗೆ ಶಾಲೆಗೆ ತೆರಳುವ ಸಂದರ್ಭ ಮನೆ ಸಮೀಪದ ಮರದ ಕಾಲುಸಂಕದ ಮೇಲೆ ನಡೆದು ಹೋಗುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿ ಹೋಗಿ ಎರಡು ದಿನಗಳ ಬಳಿಕ ಅಂದರೇ ಭಾನುವಾರ ಹೊಳೆಯಲ್ಲಿ ಶವವಾಗಿ ಸಿಕ್ಕ ಏಳು ವರ್ಷದ ಬಾಲಕಿ ವಿಸ್ಮಯಾ ದೇವಾಡಿಗ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ನಿಧಿಯಿಂದ 4 ಲಕ್ಷ ಪರಿಹಾರವನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಶನಿವಾರ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಈ ಬಡಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ಬೇಕಿದೆ. ವಿಸ್ಮಾಯಳ ಸಹೋದರಿಯ ಉನ್ನತ ವಿದ್ಯಾಭ್ಯಾಸ ಹಾಗೂ ಮನೆಯ ಆರ್ತೀಕ ಸಂಕಷ್ಟ ನೀಗಿಸುವ ಸಲುವಾಗಿ ಈ ಹಣ ಉಪಯೋಗವಾಗಬೇಕೆಂದರು.
ಈ ಸಂದರ್ಭ ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್, ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಅಷ್ಟಕ್ಕೂ ಅಂದು ನಡೆದಿದ್ದೇನು?: ಮಾರಣಕಟ್ಟೆ ಸನ್ಯಾಸಿಬೆಟ್ಟು ನಿವಾಸಿಗಳಾದ ಶೇಖರ ದೇವಾಡಿಗ ಮತ್ತು ಜಲಜಾ ದಂಪತಿಗಳ ಪುತ್ರಿಯಾಗಿದ್ದ ವಿಸ್ಮಯಾ (೭) ಈಕೆ ಮಾರಣಕಟ್ಟೆ ಕಿರಿಯ ಪ್ರಾಥಮಿಕ ಶಾಅಲೆಯಲ್ಲಿ 3 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಶುಕ್ರವಾರ ಬೆಳಿಗ್ಗೆ ಎಂದಿನಂತೆ ತನ್ನ ತಾಯಿಯೊಂದಿಗೆ ಮಾರಣಕಟ್ಟೆ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಹಿಂಭಾಗದಲ್ಲಿರುವ ಚಕ್ರಾ ನದಿ ದಾಟುವ ಮರದ ಕಾಲುಸಂಕದ ಮೇಲೆ ನಡೆದು ಸಾಗುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದ ವಿಸ್ಮಯಾ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಳು. ಈಕೆಯ ಹಿಂಭಾಗ ಬರುತ್ತಿದ್ದ ಭಾಸ್ಕರ್ ಎಂಬಾತ ನದಿಗೆ ದುಮುಕಿ ಈಕೆಯ ರಕ್ಷಣೆಗೆ ಮುಂದಾದರೂ ಕೂಡ ನೀರಿನ ಹರಿವು ಜಾಸ್ಥಿಯಿದ್ದ ಕಾರಣ ಅದು ವಿಫಲಗೊಂಡಿದ್ದು ಎರಡು ದಿನಗಳ ಬಳಿಕ ಅಂದರೇ ಭಾನುವಾರ ಬೆಳಿಗ್ಗೆ ಚಿತ್ತೂರು ಸಮೀಪದ ನ್ಯಾಗಳ ಮನೆ ಸೆತುವೆ ಬಳಿ ವಿಸ್ಮಯಾಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.











