ಕನ್ನಡ ವಾರ್ತೆಗಳು

ಜೆಟ್ ಏರ್‌ವೇಸ್‌ನ ವಿಮಾನದಲ್ಲಿ ಮತ್ತೆ ಲಗೇಜ್‌ ಸಮಸ್ಯೆಯಲ್ಲಿ ಸಿಲುಕಿದ ಪ್ರಯಾಣಿಕರು

Pinterest LinkedIn Tumblr

Airport_laggeg_photo

ಮಂಗಳೂರು, ಜು. 16: ಜೆಟ್‌ಏರ್‌ವೇಸ್ ವಿಮಾನದಲ್ಲಿ ಲಗೇಜ್ ಸಮಸೈ ಮುಂದುವರಿದಿದ್ದು, ಇದೀಗ ಜೆಟ್‌ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅವರ ಜೊತೆಯಲ್ಲಿ ಲಗ್ಗೇಜ್ ಹಸ್ತಾಂತರಿಸದೆ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಅಬುಧಾಬಿಯಿಂದ ಆಗಮಿಸಿರುವ ಪ್ರಯಾಣಿಕರೋರ್ವರು ಸಂಸ್ಥೆಯ ವಿರುದ್ಧ ದೂರು ನೀಡಿದ್ದಾರೆ.

ಬುಧವಾರ ಮಧ್ಯಾಹ್ನ ಸುಮಾರು 2:30ಕ್ಕೆ ಅಬುಧಾಬಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೆಟ್‌ಏರ್‌ವೇಸ್ ವಿಮಾನದಲ್ಲಿ, ಪ್ರಯಾಣಿಕರ ಜೊತೆಯಲ್ಲಿ ಅವರ ಲಗೇಜ್‌ಗಳು ಬಾರದಿರುವುದರಿಂದ ತೀವ್ರ ಸಮಸ್ಯೆಯನ್ನು ಎದುರಿಸುವಂತಾಗಿದೆ. ವಿಶೇಷವಾಗಿ ಈದುಲ್ ಫಿತ್ರ್ ಹಬ್ಬಕ್ಕೆಂದು ಅಬುಧಾಬಿಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕರಿಗೆ ಅಬುಧಾಬಿಯಲ್ಲೇ ಸಂಸ್ಥೆಯ ಸಿಬ್ಬಂದಿ ವಿಮಾನವನ್ನು ಹತ್ತುವಾಗಲೇ ಲಗೇಜ್‌ಗಳನ್ನು ತಡೆಹಿಡಿದು, ಮರುದಿನ ಕಳುಹಿಸಿಕೊಡುವುದಾಗಿ ಹೇಳುತ್ತಾರೆ. ಆದರೆ ಕೆಲವೊಮ್ಮೆ ಎರಡು ದಿನಗಳು ಕಳೆದರೂ ಲಗೇಜ್ ಬರುವುದಿಲ್ಲ. ಹಬ್ಬದ ಬಟ್ಟೆಗಳ ಸಹಿತ ಅಗತ್ಯ ವಸ್ತುಗಳು ಕೆಲವರ ಲಗೇಜ್‌ಗಳಲ್ಲಿರುವುದರಿಂದ ಹಾಗೂ ಅವು ಸಕಾಲದಲ್ಲಿ ಕೈ ಸೇರದಿದ್ದರೆ ಪ್ರಯಾಣಿಕರು ತೊಂದರೆ ಎದುರಿಸಬೇಕಾಗುತ್ತದೆ ಎಂದು ಬುಧವಾರ ಅಬುಧಾಬಿಯಿಂದ ಜೆಟ್ ಏರ್‌ವೇಸ್ ಮೂಲಕ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕರು ತಿಳಿಸಿದ್ದಾರೆ.

ಅದೇ ವಿಮಾನದಲ್ಲಿ ಜೆಟ್ ಏರ್‌ವೇಸ್ ಮೂಲಕ ಅಬುಧಾಬಿಯಿಂದ ಮಂಗಳೂರಿಗೆ ಆಗಮಿಸಿದ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್‌ರ ಪ್ರಕಾರ, ಮಸ್ಕತ್ ಮತ್ತು ರಿಯಾದ್‌ನಿಂದ ಬರುವ ಪ್ರಯಾಣಿಕರಿಗೆ ಅಬುಧಾಬಿಯ ಈ ಜೆಟ್ ಏರ್‌ವೇಸ್ ಕನೆಕ್ಟಿಂಗ್ ವಿಮಾನವಾಗಿದ್ದು, ಮಸ್ಕತ್ ಹಾಗೂ ರಿಯಾದ್ ಪ್ರಯಾಣಿಕರಿಂದಲೇ ಈ ವಿಮಾನದಲ್ಲಿ ಲಗೇಜ್ ತುಂಬಿರುವ ಸಾಧ್ಯತೆಗಳಿವೆ. ಆದ್ದರಿಂದ ಅವರಿಗೆ ಮೊದಲ ಆದ್ಯತೆ ನೀಡುವ ಸಂಸ್ಥೆಯವರು ಅಬುಧಾಬಿಯಿಂದ ವಿಮಾನ ಹತ್ತುವ ಕೆಲವು ಪ್ರಯಾಣಿಕರಿಗೆ ಅವರ ಲಗೇಜ್‌ಗಳನ್ನು ತಡೆಹಿಡಿದು, ವಿಮಾನದಲ್ಲಿ ಲಗೇಜ್ ತುಂಬಿರುವುದರಿಂದ ನಿಮ್ಮ ಲಗೇಜ್‌ನ್ನು ಮಾರನೆ ದಿನ ಕಳುಹಿಸಿಕೊಂಡುವುದಾಗಿ ಹೇಳುತ್ತಾರೆ. ಆದರೆ ಮಾರನೆ ದಿನವೂ ಸಿಗದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಸಂಸ್ಥೆಯವರು ಲಗ್ಗೇಜ್ ಹಸ್ತಾಂತರಿಸುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಯಾಣಿಕರೊಂದಿಗೇ ಅವರ ಲಗೇಜ್‌ಗಳನ್ನು ಹಸ್ತಾಂತರಿಸಬೇಕೆಂದು ಅವರು ಸಂಸ್ಥೆಯನ್ನು ಕೋರಿದ್ದಾರೆ.

ಪ್ರಯಾಣಿಕರಿಗೆ ಲಗೇಜ್ ಹಸ್ತಾಂತರಿಸಿದ ಸಂಸ್ಥೆಯ ವಿರುದ್ಧ ಅಬುಧಾಬಿಯಲ್ಲಿ ದೂರನ್ನು ಸಲ್ಲಿಸಿರುವುದಾಗಿ ಮುಹಮ್ಮದ್ ಅಲಿ ತಿಳಿಸಿದ್ದಾರೆ.

ದುರಂತವೆಂದರೆ ಅಬುಧಾಬಿಯಿಂದ ಹ್ಯಾಂಡ್‌ಬ್ಯಾಗ್‌ನೊಂದಿಗೆ ಅದೇ ವಿಮಾನವನ್ನು ಹತ್ತಿದ ಕೇರಳದ ವ್ಯಕ್ತಿಯೋರ್ವನನ್ನು ತಡೆದ ಸಿಬ್ಬಂದಿ, ಆತನಿಂದ ಹ್ಯಾಂಡ್‌ಬ್ಯಾಗ್‌ನ್ನು ಪಡೆದು ಲಗ್ಗೇಜ್ ಒಟ್ಟಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ, ಆ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ತಪಾಸಣೆಗೊಳಪಟ್ಟಾಗ ಆತನ ಪಾಸ್‌ಪೋರ್ಟ್ ಹಾಂಡ್‌ಬ್ಯಾಗ್‌ನಲ್ಲಿ ಬಿಟ್ಟಿದ್ದ. ಆದ್ದರಿಂದ ವಿಮಾನ ನಿಲ್ದಾಣ ಪ್ರಾಧಿಕಾರದ ನಿಯಮದ ಪ್ರಕಾರ ಆತ ಪಾಸ್‌ಪೋರ್ಟ್‌ನ್ನು ಸಿಬ್ಬಂದಿಗಳಿಗೆ ತೋರಿಸಿಯೇ ಹೊರ ನಡೆಯಬೇಕು. ಜೆಟ್ ಏರ್‌ವೇಸ್ ಸಂಸ್ಥೆಯವರು ಪ್ರಯಾಣಿಕರನ್ನು ವಿಮಾನದಲ್ಲಿ ಹತ್ತಿಸಿಕೊಳ್ಳುವಾಗ ಲಗೇಜ್‌ಗಳನ್ನು ಪ್ರಮಾಣಿಕರ ಒಟ್ಟಿಗೇ ಕಳುಹಿಸಿಕೊಡಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

Write A Comment