ಕನ್ನಡ ವಾರ್ತೆಗಳು

ಬಜ್ಪೆ ಕಾಲೇಜಿನಲ್ಲಿ ಪ್ರಾರ್ಥನೆ ವಿವಾದ ; ಕಾಲೇಜ್ ಪ್ರಾಂಶುಪಾಲರಿಂದ ವಿಧ್ಯಾರ್ಥಿ ಮೇಲೆ ದೌರ್ಜನ್ಯ ಆರೋಪ : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಪ್ರತಿಭಟನೆ

Pinterest LinkedIn Tumblr

Campus_Front_Protest_1

ಮಂಗಳೂರು : ನಗರದ ಹೊರವಲಯದ ಬಜ್ಪೆಯ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬ್ರದರ್ ಹೆಕ್ಟರ್ ಪಿಂಟೋ ಎಂಬವರು ಧ್ವಿತೀಯ ಪಿ ಯು ಸಿ ವಿಧ್ಯಾರ್ಥಿ ಮೇಲೆ ಹಲ್ಲೆ ಹಾಗು ದೌರ್ಜನ್ಯ ನಡೆಸಿದ್ದರೆ ಎಂದು ಆರೋಪಿಸಲಾಗಿದ್ದು, ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ವತಿಯಿಂದ ಕಾಲೇಜ್ ಮುಂಭಾಗದಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಯಿತು.

ಶುಕ್ರವಾರದ ಪ್ರಾರ್ಥನೆ ಮುಗಿಸಿ ಕಾಲೇಜ್ ಬಂದ ಸಿದ್ದೀಕ್ ಎಂಬ ವಿಧ್ಯಾರ್ಥಿಯನ್ನು ತನ್ನ ಕೋಣೆಯೊಳಗೆ ಕರೆದೊ ಹೋಗಿ ಪ್ರಾರ್ಥನೆ ಮಾಡಲು ಹೋಗಬಾರದು ಎಂದು ತಾಕೀತು ಮಾಡಿ ವಿಧ್ಯಾರ್ಥಿಯನ್ನು ಗೋಡೆಯ ಮೇಲೆ ತಳ್ಳಿ ಹಾಕಿ ಹಾಗು ಆತನ ತಲೆಯನ್ನು ತನ್ನ ಟೇಬಲ್ ಮೇಲೆ ಇತ್ತು ಹಲ್ಲೆ ಮಾಡಲಾಗಿದೆ. ಇರಿಂದಾಗಿ ವಿಧ್ಯಾರ್ಥಿ ತೀವ್ರ ಗಾಯಗೊಂಡಿದ್ದು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಆರೋಪಿಸಿದ್ದಾರೆ.

Campus_Front_Protest_2 Campus_Front_Protest_3 Campus_Front_Protest_4 Campus_Front_Protest_5 Campus_Front_Protest_6 Campus_Front_Protest_7

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರಾದ ಇರ್ಶಾದ್ ಬಜ್ಪೆ, ಮುಸ್ಲಿಂ ವಿಧ್ಯಾರ್ಥಿಗಳಿಗೆ ಪ್ರಾರ್ಥನೆ ಮಾಡದಂತೆ ಪ್ರಾಂಶುಪಾಲರು ತಡೆಯುತ್ತಾ ಪ್ರಾರ್ಥನೆ ಮಾಡಲು ಹೋದರೆ ಪರೀಕ್ಷೆಯಲ್ಲಿ ಫೈಲ್ ಮಾಡುವುದಾಗಿಯೂ ಹೇಳಿ ವಿಧ್ಯಾರ್ಥಿಗಳಿಗೆ ಮಾನಸಿಕ ಕಿರುಕುಳವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಾಂಶುಪಾಲರು ವಿಧ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತು ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಎಲ್ಲರೂ ಸೇರಿ ಅನ್ಯಾಕ್ಕೊಳಕ್ಕಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ ಎಂದರು .

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರಾದ ಇರ್ಶಾದ್ ಬಜ್ಪೆ , ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಇಸ್ಮಾ‌ಇಲ್ ಇಂಜಿನಿಯರ್ , ಗ್ರಾಮ ಪಂಚಾಯತ್ ಸದಸ್ಯರಾದ ನಜ್ಹೀರ್ ಬಜ್ಪೆ , ಅಲ್ – ಹುದಾ ಜುಮಾ ಮಸೀದಿ ಕೆ. ಪಿ ನಗರ ಇದರ ಉಪಾಧ್ಯಕ್ಷರಾದ ಮೊಹಮ್ಮದ್ ಮೋನು ಹಾಗೂ ಮತ್ತಿತ್ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು .

Write A Comment