ಕನ್ನಡ ವಾರ್ತೆಗಳು

ಕಾಶೀ ಮಠ ಸಂಸ್ಥಾನದ ಪಟ್ಟ ಶಿಷ್ಯ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವರ ಸನ್ನಿಧಾನಕ್ಕೆ  ಭೇಟಿ.

Pinterest LinkedIn Tumblr

Shrimad_Samyamindra_Thirtha_1

ಮಂಗಳೂರು ,ಜುಲೈ.11 : ಗೌಡ ಸಾರಸ್ವತ ಸಮಾಜದ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮಿಜಿಯವರ ಪಟ್ಟ ಶಿಷ್ಯರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶುಕ್ರವಾರದಂದು ತಿರುಪತಿಯ ಶ್ರೀ ವೆಂಕಟೇಶ್ವರ ದೇವರ ಸನ್ನಿಧಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ಈ ಸಂಧರ್ಭದಲ್ಲಿ ತಿರುಮಲ ತಿರುಪತಿ ದೇವಳದ ( ಟಿ . ಟಿ . ಡಿ ) ಯ DyEO ಶ್ರೀ ಚಿನ್ನಮಾಗರಿ ರಮಣ ಹಾಗೂ ಶ್ರೀ ದೇವಳದ ಪ್ರಧಾನ ಅರ್ಚಕರು ಮತ್ತು ಪದಾದಿಕಾರಿಗಳು ಶ್ರೀ ದೇವಳದ ಸಕಲ ಗೌರವಗಳೊಂದಿಗೆ ಶ್ರೀ ಗಳವರಿಗೆ ಸ್ವಾಗತಿಸಿದರು ಬಳಿಕ ದೇವರ ಗರ್ಭಗ್ರಹದಲ್ಲಿ ದೇವರ ದರ್ಶನ ಪಡೆದರು .

Shrimad_Samyamindra_Thirtha

ತಿರುಪತಿ ಶ್ರೀ ಕಾಶೀ ಮಠದ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿ ಕಾಪು ನಾರಾಯಣ ಶೆಣೈ , ನರೇಂದ್ರ ನಾಯಕ್ , ಮಂಗಳೂರು , ಪುತ್ತೂರು , ಕಾರ್ಕಳ , ಕುಂದಾಪುರ , ಕೋಟೇಶ್ವರ , ಬೆಂಗಳೂರು ದೇವಳಗಳ ಮೊಕ್ಥೆಸರರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು .

….ಮಂಜು ನಿರೇಶ್ವರಲ್ಯ

Write A Comment