ಮಂಗಳೂರು,ಜುಲೈ.09: ಕರ್ನಾಟಕ ರಾಜ್ಯ ದೇವಾಡಿಗರ ಸುಧಾರಕ ಸಂಘ (ರಿ.), ಮಂಗಳೂರು, ಉಪಸಂಘ – ಹಿರಿಯಡಕ ಇದರ 2014-15 ಸಾಲಿನ ಮಹಾಸಭೆಯು ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆಯೊಂದಿಗೆ ಸಂಘದ ಸಭಾಕಾರ್ಯಕ್ರಮದೊಂದಿಗೆ ಇತ್ತೀಚೆಗೆ ಜರುಗಿತು.
ಮಹಾಸಭೆಯ ಅಧ್ಯಕ್ಷಸ್ಥಾನವನ್ನು ಸಂಘದ ಅಧ್ಯಕ್ಷರಾದ ಶ್ರೀ ಗೋಪಾಲ್ ಸೇರಿಗಾರ್ ರವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಕೇಂದ್ರ ಸಂಘದ ವೀಕ್ಷಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಕೇಂದ್ರ ಸಂಘದ ಅಧ್ಯಕ್ಷ ಶ್ರೀ ವಾಮನ ಮರೋಳಿ, ಉಪಾಧ್ಯಕ್ಷರಾದ ಶ್ರೀ ರತ್ನಾಕರ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಶ್ರೀ ಎಂ ದೇವದಾಸ್, ಕೋಶಾಧಿಕಾರಿ ಶ್ರೀ ಸುರೇಶ್ ನಿಟಿಲಾಪುರ, ಮುಂಬೈ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಚ್ ಮೋಹನದಾಸ್, ಯುವಸಂಘಟನೆ ಅಧ್ಯಕ್ಷ ಶ್ರೀ ಸುರೇಶ್, ಮಹಿಳಾ ಸಂಘಟನಾ ಅಧ್ಯಕ್ಷೆ ಶ್ರೀಮತಿ ಲಲಿತಾ ಮುದ್ದಣ್ಣ ಇವರುಗಳು ಆಸೀನರಾಗಿದ್ದರು.
ಸಭೆಯಲ್ಲಿ ಕು|| ಶತ ಮತ್ತು ಕು|| ಕಾವ್ಯ ಪ್ರಾರ್ಥಿಸಿ, ಶ್ರೀ ದಿನೇಶ ಸೇರಿಗಾರ್ ಇವರು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಗೋಪಾಲ ಕೃಷ್ಣ ವಾರ್ಷಿಕ ವರದಿಯನ್ನು ಓದಿ, ಖಜಾಂಚಿ ಶ್ರೀ ಎಚ್ ರವಿರಾಜ್ 2014-15ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು.
ಪುಸ್ತಕ ವಿತರಣೆ: ನಂತರ ಮಕ್ಕಳನ್ನು ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಸುಮಾರು 300ಕ್ಕೂ ಮಿಕ್ಕಿ ಶಾಲಾಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಇತರ ಶೈಕ್ಷಣಿಕ ಪರಿಕರಗಳನ್ನು, ಎಸ ಎಸ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ ಹಿರಿಯಡಕ ಪರಿಸರದಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಲಾ ಎರಡು ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನವನ್ನು ನೀಡಲಾಯಿತು ವಿತರಿಸಲಾಯಿತು.
2015 -17 ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಶ್ರೀ ವಿನಯ ಕುಮಾರ್ ನಿರ್ವಹಿಸಿ, ಶ್ರೀಮತಿ ಆಶಾ ರಮೇಶ್ ಇವರು ವಂದಸಿದರು. ಶಿವ ಕುಮಾರ್ ಸೇರಿಗಾರ್, ರಾಘವೇಂದ್ರ ಜಿ, ರತ್ನಾಕರ ದೇವಾಡಿಗ ಕೊಪ್ಪಳ, ರಾಧೇಶ ಸೇರಿಗಾರ್, ಶಶಿಧರ ಇವರುಗಳು ಕಾರ್ಯಕ್ರಮಕ್ಕೆ ಸಹಕರಿಸಿದರು. ಸಭೆಯ ನಂತರ ಎಲ್ಲರು ಅನ್ನಪ್ರಸಾದವಾಗಿ ಸಹಭೊಜನದಲ್ಲಿ ಪಾಲ್ಗೊಂಡರು.

