ಮಂಗಳೂರು, ಜುಲೈ,09 : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಫ್ ಇಂಡಿಯಾ ಅಂಗೀಕೃತ ಮದ್ರಸಗಳಲ್ಲಿ ಕಳೆದ ಜೂನ್ ತಿಂಗಳಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಕೂಳೂರು ಸಿರಾಜುಲ್ ಹುದಾ ಮದ್ರಸಕ್ಕೆ ಶೇ. 100 ಪಲಿತಾಂಶ ಬಂದಿದ್ದು, ಈ ಮದ್ರಸದ 5 ನೇ ತರಗತಿಯ ವಿದ್ಯಾರ್ಥಿ ಹಾಜರಾ ಫಾರಿಶ್ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.ಈಕೆ ಪಂಜಿಮೊಗರು ಮಹಮ್ಮದ್ ಸಾರಾ ದಂಪತಿಯ ಪುತ್ರಿಯಾಗಿದ್ದಾಳೆ.
ಇದೇ ಮದ್ರಸದ 7 ನೇ ತರಗತಿಯ ವಿದ್ಯಾರ್ಥಿಗಳಾದ ಶಿಹಾಬುದ್ದೀನ್ ಪ್ರಥಮ, ಅಸ್ವಾದ್‌ದ್ವಿತೀಯ, ಶಿಪಾನ ತೃತೀಯ ಮತ್ತು 5 ನೇ ತರಗತಿಯ ಹಾಜಿರಾ ಫಾರಿಶ್ ಪ್ರಥಮ, ಸಫಾ ಮರ್ವ ದ್ವಿತೀಯ, ಅಸ್ಮ ತೃತೀಯ ಸ್ಥಾನವನ್ನು ಮಂಗಳೂರು ರೇಂಜ್ ಮಟ್ಟದಲ್ಲಿ ಪಡೆದಿದ್ದಾರೆ.
