ಮಂಗಳೂರು , ಜುಲೈ.09 : ಕಟೀಲು ಸಮೀಪ ಖಾಸಗಿ ಬಸ್ಸೊಂದು ಮುಗುಚಿ ಬಿದ್ದ ಪರಿಣಾಮ 12 ಮಂದಿ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮುಕ್ಕದ ಶ್ರೀನಿವಾಸ್ ಆಸ್ಪತ್ರೆಗೆ ದಾಖಾಲಿಸಲಾಗಿದೆ, ಇತರರನ್ನು ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ಯೋಗಿತಾ ಗಂಜಿಮಠ, ಶ್ರೀಶ ಕುಮಾರ್ ಎಕ್ಕಾರು,ಪ್ರತಾಪ್ ಮಲ್ಲೂರು, ಯಶವಂತ ಮಲ್ಲೂರು, ಶಿವಪ್ರಸಾದ್ ಕಾವೂರು, ಪ್ರಶಾಂತ್ ನಾಯ್ಕ್ ಕಟೀಲು, ವೆಂಕಟೇಶ್ ಮಲ್ಲೂರು, ಹರಿಣಾಕ್ಷಿ ಸುಂಕದ ಕಟ್ಟೆ, ಅಂಜಲಿ ಬಜಪೆ , ರಾಧಿಕಾ ಗೀತಾ ಬಾಲಚಂದ್ರ ಎಂದು ಗುರುತಿಸಲಾಗಿದೆ.
ಕಟೀಲಿನಿಂದ ಕಿನ್ನಿಗೋಳಿಗೆ ತೆರಳುತ್ತಿದ್ದ ಬಸ್ ಮಳೆ ಬರುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದಿದೆ ಎನ್ನಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 30ಕ್ಕೂ ಹೆಚ್ಚು ಪ್ರಯಾಣಿಕರು ಬಸ್ ನಲ್ಲಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. .
ಆಸ್ಪತ್ರೆಗೆ ಸಚಿವರ ಭೇಟಿ :
ಸಚಿವ ಅಭಯಚಂದ್ರ ಜೈನ್ ಹಾಗೂ ಕಿನ್ನಿಗೋಳಿ ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಫಾ|ಜೆರೋಮ್ ಅವರು ಮುಕ್ಕ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳ ಆರೋಗ್ಯದ ಕುರಿತು ವಿಚಾರಿಸಿದರು.






