ಕನ್ನಡ ವಾರ್ತೆಗಳು

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಇನ್ನೋವೇಶನ್ ಹಬ್‌ಗೆ ಪೂರ್ವ ಸಿದ್ದತೆ.

Pinterest LinkedIn Tumblr

pilikula_sciencecenter_open_9

ಮಂಗಳೂರು, ಜುಲೈ.07  : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳಲ್ಲಿನ ಸಂಶೋಧನಾ ಪ್ರವೃತ್ತಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ‘ಇನ್ನೋವೇಶನ್ ಹಬ್’ ಎಂಬ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪೂರ್ವ ತಯಾರಿ ನಡೆಯುತ್ತಿದೆ ಎಂದು ನಿಸರ್ಗಧಾಮ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಪ್ರಭಾಕರ ಶರ್ಮಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶರ್ಮಾ, ಯೋಜನೆಯ ಪೂರ್ವಭಾವಿಯಾಗಿ ಜು.13ರಂದು ಕೋಲ್ಕೊತಾದಲ್ಲಿ ನಡೆಯುವ ಸಮ್ಮೇಳನದಲ್ಲಿ ವಿಚಾರ ಮಂಡನೆ ನಡೆಯಲಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಸಂಶೋಧನೆ, ವೈಚಾರಿಕತೆ, ಸೃಜನ ಶೀಲತೆಯನ್ನು ಬೆಳೆಸುವ ಉದ್ದೇಶದೊಂದಿಗೆ ಯೋಜನೆ ಕಾರ್ಯಗತಗೊಳ್ಳಲಿದೆ. ಕರ್ನಾಟಕದಲ್ಲಿ ಪಿಲಿಕುಳ ನಿಸರ್ಗ ಧಾಮದ ವಿಜ್ಞಾನ ಕೇಂದ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ತಿಳಿಸಿದರು.

ಸರಕಾರದಿಂದ 1.80 ಕೋಟಿ ರೂ. ಅನುದಾನ ಯೋಜ ನೆಗೆ ಲಭ್ಯವಾಗಲಿದ್ದು, ನಾನಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಗಳು ಪಾಲ್ಗೊಂಡು ವೈಜ್ಞಾನಿಕ ವಿಷಯದ ಸಂಶೋಧನೆ ಕೈಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

Write A Comment