ಕನ್ನಡ ವಾರ್ತೆಗಳು

ಅಡಿಕೆಯಿಂದ ಚೀನಾದಲ್ಲಿ ವೌತ್ ಫ್ರೆಶ್ನರ್ ತಯಾರಿ – ಕರಾವಳಿಯ ಎಳೆಅಡಿಕೆಗೆ ಭಾರೀ ಬೇಡಿಕೆ : ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ

Pinterest LinkedIn Tumblr

Campco-Press_Meet_11

ಮಂಗಳೂರು, ಜು.7: ಚೀನಾದ ಕಿಂಗ್ ಆಫ್ ಟೇಸ್ಟ್ (ಕ್ಯೂ ವೆ ವಾಂಗ್) ಕಂಪೆನಿಗೆ ವೌತ್ ಫ್ರೆಶ್ನರ್ ತಯಾರಿಕೆಗಾಗಿ 32,000 ಕ್ವಿಂಟಾಲ್ ಪರಿಷ್ಕರಿಸಿದ ಎಳೆ ಅಡಿಕೆಗೆ ಕ್ಯಾಂಪ್ಕೋಗೆ ಬೇಡಿಕೆ ಬಂದಿದ್ದು, ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಪದ್ಮನಾಭ ಕೊಂಕೋಡಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಕಂಪೆನಿಯ ಪ್ರತಿನಿಧಿಗಳು ಈಗಾಗಲೇ ಕ್ಯಾಂಪ್ಕೋ ಸಂಸ್ಥೆಗೆ ಭೇಟಿ ನೀಡಿದ್ದು, ದ್ವಿತೀಯ ಸುತ್ತಿನ ಮಾತುಕತೆ ನಡೆದಿದೆ. ಚೀನಾದ ಪ್ರತಿನಿಧಿಗಳು ಎರಡು ವಾರಗಳ ಕಾಲ ಚೀನಾದ ಬಹು ಬೇಡಿಕೆಯ ಈ ವೌತ್ ಫ್ರೆಶ್ನರನ್ನು ಎಳೆ ಅಡಿಕೆಯಿಂದ ತಯಾರಿಸುವ ಬಗ್ಗೆ ತರಬೇತಿ ಒದಗಿಸಲಿದ್ದಾರೆ ಎಂದರು. ಪುತ್ತೂರು ಹಾಗೂ ಶಿವಮೊಗ್ಗದ ಕ್ಯಾಂಪ್ಕೋ ನೌಕರರಿಗೆ ಪರಿಷ್ಕರಣೆಯ ಬಗ್ಗೆ ತರಬೇತಿ ನೀಡಲಾಗುವುದು.

Campco-Press_Meet_22

Campco-Press_Meet_33

ಆರಂಭದಲ್ಲಿ ಪುತ್ತೂರಿನ ಕ್ಯಾಂಪ್ಕೋದ ಚಾಕಲೇಟ್ ತಯಾರಕ ಯಂತ್ರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ಈ ಉತ್ಪನ್ನವನ್ನು ತಯಾರಿಸಿ ಚೀನಾಕ್ಕೆ ಕಳುಹಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಯಶಸ್ಸು ದೊರಕಿದರೆ ಮುಂದೆ ದೊಡ್ಡ ಪ್ರಮಾಣದಲ್ಲಿ ಕ್ಯಾಂಪ್ಕೋದಿಂದ ಈ ಉತ್ಪನ್ನವನ್ನು ಉತ್ಪಾದಿಸುವ ಮೂಲಕ ಅಡಿಕೆ ಬೆಳೆಗಾರರಿಗೆ ನೆರವಾಗಲಿದೆ ಎಂದು ಅವರು ಹೇಳಿದರು.

ಎಳ ಅಡಿಕೆಯನ್ನು ತೆಗೆಯಲು ರೈತರು ಒಪ್ಪುವುದಿಲ್ಲ. ಹಾಗಾಗಿ ಈಗಾಗಲೇ ಕ್ಯಾಂಪ್ಕೋದಿಂದ ಕೆಲ ಅಡಿಕೆ ರೈತರ ಮನವೊಲಿಸಿ ಈ ಪ್ರಕ್ರಿಯೆಗೆ ಎಳೆಅಡಿಕೆಯನ್ನು ಉಪಯೋಗಿಸಲಾಗುತ್ತಿದೆ. ಎಳ ಅಡಿಕೆಗೆ ಕ್ವಿಂಟಾಲ್ ಒಂದಕ್ಕೆ ಪ್ರಸಕ್ತ ದರ ಸುಮಾರು 2,500 ರೂ.ನಿಂದ 3,000 ರೂ.ನಷ್ಟಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ಉಪ ಮಹಾ ಪ್ರಬಂಧಕ(ಅಡಿಕೆ ಮಾರುಕಟ್ಟೆ ವಿಭಾಗ) ಪ್ರಮೋದ್‌ಕುಮಾರ್ ಉಪಸ್ಥಿತರಿದ್ದರು.

Campco_news_photo_1 Campco_news_photo_2 Campco_news_photo_4

ಗುಟ್ಕಾಕ್ಕೆ ಪರ್ಯಾಯ

ಎಳೆಅಡಿಕೆ ಸಿಪ್ಪೆಯಿಂದ ತಯಾ ರಿಸುವಾಗ ಚೀನಾದ ಈ ವೌತ್‌ಫ್ರೆಶ್ನರ್ ಮುಂದೆ ಗುಟ್ಕಾಕ್ಕೆ ಪರ್ಯಾ ಯವಾಗಿ ಬಳಕೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಆರೋಗ್ಯಕ್ಕೆ ಹಾನಿ ಯಾಗುವ ಅಂಶಗಳು ಇಲ್ಲ ಎಂದು ಕಂಪೆನಿ ಹೇಳಿಕೊಂಡಿದ್ದು, ಈ ಬಗ್ಗೆ ಕ್ಯಾಂಪ್ಕೋದಿಂದಲೂ ಸಂಶೋಧನೆ ನಡೆಸಿ ಪರಿಶೀಲಿಸಲಾಗುವುದು. ಕೆಂಪಡಿಕೆಗೆ ಇದು ಪರ್ಯಾಯ ವೌಲ್ಯಾಧಾರಿತ ಉತ್ಪನ್ನವಾಗಿ ಬಳಕೆಯಾಗುವ ಮೂಲಕ ಅಡಿಕೆ ರೈತರಿಗೆ ಸಹಕಾರಿಯಾಗುವ ಸಾಧ್ಯತೆಗಳು ಕಂಡು ಬರುತ್ತಿವೆ ಎಂದು ಕೊಂಕೋಡಿ ತಿಳಿಸಿದರು.

ಚೀನಾದ ಹ್ಯೂನಾನ್ ಪ್ರಾಂತದಲ್ಲಿ 10 ಕಂಪೆನಿಗಳು ಈ ವೌತ್‌ಫ್ರೆಶ್ನರ್ ಉತ್ಪನ್ನಗಳನ್ನು ತಯಾರು ಮಾಡುತ್ತಿವೆ. ಆದರೆ ಚೀನಾದಲ್ಲಿ ಉತ್ಪಾದನೆಗಿಂತ ಬೇಡಿಕೆ ಹೆಚ್ಚಿ ರುವ ಹಿನ್ನೆಲೆಯಲ್ಲಿ ಕಂಪೆನಿಯು ಭಾರತದ ಕ್ಯಾಂಪ್ಕೋ ಸಂಸ್ಥೆಯನ್ನು ಸಂಪರ್ಕಿಸಿದೆ ಎಂದು ಅವರು ಹೇಳಿದರು.

Write A Comment