ಕನ್ನಡ ವಾರ್ತೆಗಳು

ಮಹಾನಗರ ಪಾಲಿಕೆಯಿಂದ ಬೀದಿಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ವಿತರಣೆ

Pinterest LinkedIn Tumblr

ಮಂಗಳೂರು : ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರಥಮ ಹಂತವಾಗಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 208 ಮಂದಿಗೆ ಗುರುತಿನ ಚೀಟಿಯನ್ನು ವಿತರಿಸಲಾಗಿದ್ದು, ಈ ಸಂಬಂಧ ಮಂಗಳವಾರ ಸಿಐಟಿಯು ಬೆಂಬಲಿತ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಸಂಭ್ರಮಾಚರಿಸಲಾಯಿತು.

ಸಿಐಟಿಯು ಕಚೇರಿ ಎದುರು ಸಿಹಿ ಹಂಚುವ ಮೂಲಕ ಬೀದಿ ಬದಿ ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸಿದರು. ಬೀದಿಬದಿ ವ್ಯಾಪಾರಸ್ಥರನ್ನು ಉದ್ದೇಶಿಸಿ ಮಾತನಾಡಿದ ಸುನೀಲ್ ಕುಮಾರ್ ಬಜಾಲ್, ದೀರ್ಘ ಕಾಲದ ಹೋರಾಟದ ಫಲವಾಗಿ ಅಂಗೀ ಕಾರಗೊಂಡ ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ರಕ್ಷಣಾ ಮಸೂದೆ 2013 ಬೀದಿಬದಿ ವ್ಯಾಪಾರಸ್ಥರ ಪಾಲಿ ಗಂತೂ ಸಂಜೀವಿನಿಯಾಗಿದೆ. ಅದರನ್ವಯ ಕೇಂದ್ರ ಸರಕಾರವು ಎಲ್ಲಾ ರಾಜ್ಯ ಸರಕಾರಗಳಿಗೆ ಮಸೂದೆ ಜಾರಿಗೊಳಿಸಲು ನಿರ್ದೇಶನ ನೀಡಿದೆ.

ರಾಜ್ಯ ಸರಕಾರವು ವಿಶೇಷ ನಿಯಮಾವಳಿಗಳನ್ನು ರೂಪಿಸಿ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದು, ಅದರ ಭಾಗವಾಗಿ 2014ರ ಜುಲೈನಲ್ಲಿ ಮಂಗಳೂರಿನಲ್ಲಿ ಸರ್ವೇ ಕಾರ್ಯ ನಡೆಸಲಾಗಿದೆ. ತಕ್ಷಣದಲ್ಲೇ ಗುರುತು ಚೀಟಿ ತಯಾರಾಗಿದ್ದರೂ ಬೀದಿಬದಿ ವ್ಯಾಪಾರಸ್ಥರಿಗೆ ನೀಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ತೀರಾ ವಿಳಂಬ ನೀತಿಯನ್ನು ಅನುಸರಿಸಿ ದಾಗ ತೀವ್ರ ರೀತಿಯ ಹೋರಾಟ ನಡೆಸಲಾಗಿದೆ. ಅದರ ಫಲವಾಗಿಯೇ ಇಂದು ಗುರುತು ಚೀಟಿ ದೊರಕಿದ್ದು, ಸರಕಾರದ ಯೋಜ ನೆಗಳು ಬೀದಿಬದಿ ವ್ಯಾಪಾರಸ್ಥರಿಗೆ ಸಿಗಬೇಕೆಂದು ಒತ್ತಾಯಿಸಿದರು.

ಜುಲೈನಲ್ಲಿ ನಡೆಸಲಾದ ಸಮೀಕ್ಷೆ ಸಂದರ್ಭ 1100ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಲಾಗಿತ್ತು. ಇದೀಗ ಜೂ. 25 ಮತ್ತು 26ರಂದು ನಡೆದ ಕಾರ್ಯಾಗಾರದಲ್ಲಿ 208 ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಹಸ್ತಾಂತರಿಸಲಾಗಿದೆ. ಮುಂದಿನ ಹಂತದಲ್ಲಿ 125 ಮಂದಿಗೆ ಗುರುತಿನ ಚೀಟಿ ಸಿದ್ಧಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಬೀದಿಬದಿ ವ್ಯಾಪಾರಸ್ಥರಿಗೂ ಗುರುತಿನ ಚೀಟಿ ವಿತರಣೆಯಾಗಲಿದೆ ಎಂದು ಸುನಿಲ್ ಕುಮಾರ್ ಬಜಾಲ್ ತಿಳಿಸಿದರು.

ಕಳೆದ ಐದು ವರ್ಷಗಳಿಂದ ಬೀದಿಬದಿ ವ್ಯಾಪಾರಸ್ಥರು ನಡೆಸುತ್ತಿರುವ ಹೋರಾಟದ ಫಲವಾಗಿ ಇದೀಗ ನಮ್ಮನ್ನು ಗುರುತಿಸುವ ಕಾರ್ಯ ನಡೆದಿದೆ. ಇದು ನಮ್ಮ ಹೋರಾಟಕ್ಕೆ ಸಂದ ಪ್ರತಿಫಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮುಹಮ್ಮದ್ ಮುಸ್ತ್ತಫ, ಸಂಘದ ಮುಖಂಡರಾದ ಶಿವಪ್ಪ, ಅಬ್ದುಲ್ ಮಾಲಿಕ್, ಅಣ್ಣಯ್ಯ ಕುಲಾಲ್, ಹಿತೇಶ್ ಪೂಜಾರಿ, ಝಾಕಿರ್ ಹುಸೈನ್, ಆದಂ ಬಜಾಲ್, ಮೇಬಲ್ ಡಿಸೋಜ, ಹೆಲೆನ್ ಮುಂತಾದವರು ಉಪಸ್ಥಿತರಿದ್ದರು.

Write A Comment