ಕನ್ನಡ ವಾರ್ತೆಗಳು

ಬೀಜಾಡಿ ಗ್ರಾಮಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಗೊಂದಲ; ಚುನಾವಣಾ ಪ್ರಕ್ರಿಯೆಗೆ ಸದಸ್ಯರ ಬಹಿಷ್ಕಾರ

Pinterest LinkedIn Tumblr

ಕುಂದಾಪುರ: ಬೀಜಾಡಿ ಗ್ರಾ. ಪಂ. ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಆಯ್ಕೆಯ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಪಂಗಡದ ಅಧ್ಯಕ್ಷ ಸ್ಥಾನಕ್ಕೆ ಆ ಪಂಗಡದ ಚುನಾಯಿತ ಅಭ್ಯರ್ಥಿಗಳು ಇಲ್ಲದಿರುವುದರಿಂದ ಚುನಾವಣಾಧಿಕಾರಿಯು ಆ ಸ್ಥಾನಕ್ಕೆ ಸ್ಪರ್ದಿಸಿದ ಪರಿಶಿಷ್ಟ ಜಾತಿಯವರ ಹೆಸರನ್ನು ತಿರಸ್ಕರಿಸಿದ ಕಾರಣ ಚುನಾವಣೆಯ ಪ್ರಕ್ರಿಯೆಗೆ ಸರ್ವ ಗ್ರಾ. ಪಂ. ಸದಸ್ಯರು ಬಹಿಷ್ಕಾರ ಹಾಕಿದ ಘಟನೆ ನಡೆದಿದೆ.

Beejadi_Panchayt-Problem (1) Beejadi_Panchayt-Problem (2) Beejadi_Panchayt-Problem (3) Beejadi_Panchayt-Problem

ಬೀಜಾಡಿ ಗ್ರಾ. ಪಂ. ನ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಮೀಸಲಾಗಿಡಲಾಗಿತ್ತು. ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ (ಎಸ್.ಸಿ) ಮೀಸಲಾಗಿಡಲಾಗಿತ್ತು. ಈ ನಡುವೆ ಕುಂದಾಪುರ ತಹಶೀಲ್ದಾರರು ಪರಿಶಿಷ್ಟ ಪಂಗಡದ ಅಭ್ಯರ್ಥಿ ಅಧ್ಯಕ್ಷ ಸ್ಥಾನದಲ್ಲಿ ಇಲ್ಲದಿರುವುದರಿಂದ ಪರಿಶಿಷ್ಟ ಜಾತಿಯವರು ಆ ಸ್ಥಾನಕ್ಕೆ ಸ್ಪರ್ಧಿಸಬಹುದೆಂದು ಸೂಚಿಸಿದ್ದರು. ಅಂತೆಯೇ ಪರಿಶಿಷ್ಟ ಜಾತಿಯಿಂದ ಆಯ್ಕೆಯಾದ ೩ ಮಂದಿ ವಿಜೇತರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಆದರೆ ಚುನಾವಣಾಧಿಕಾರಿ ಎನ್.ಜಿ. ಭಟ್ ಅವರು ೩ ಸ್ಪರ್ಧಿಗಳ ನಾಮಪತ್ರವನ್ನು ತಿರಸ್ಕರಿಸಿದರು. ಕಾರಣ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಪರಿಶಿಷ್ಟ ಜಾತಿಯವರು ಸ್ಪರ್ಧಿಸುವಂತಿಲ್ಲ. ಈ ವಿದ್ಯಮಾನದಿಂದ ಸಿಟ್ಟುಗೊಂಡ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಪರಿಶಿಷ್ಟ ಜಾತಿಯ ವಿಜೇತರು ಸ್ಪರ್ಧೆಯಿಂದ ಹಿಂದೆ ಸರಿದರು. ಈ ಒಂದು ಪ್ರಕ್ರಿಯೆಯಿಂದ ಪಂಚಾಯತ್ ಆಡಳಿತ ಅತಂತ್ರವಾಗಿದ್ದು ಸದ್ಯಕ್ಕೆ ಬೀಜಾಡಿ ಗ್ರಾ. ಪಂ. ಆಡಳಿತವು ಆಡಳಿತಾಧಿಕಾರಿಗಳ ತೆಕ್ಕೆಗೆ ಸೇರಲಿದೆ.

ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾದುದ್ದು ಚುನಾವಣೆಯ ಮೀಸಲಾತಿ ನಿಗದಿ ಮಾಡುವಾಗ ಆಯಾಯ ಕ್ಷೇತ್ರದ ಜಾತಿ, ಪಂಗಡಗಳ ಬಗ್ಗೆ ಸರಿಯಾದ ಅರಿವಿಲ್ಲದೇ ಸ್ಥಾನವನ್ನು ನಿಗದಿಗೊಳಿಸಿದ್ದೇ ಕಾರಣವಾಗಿದೆ. ಬೀಜಾಡಿಯಲ್ಲಿ ಪರಿಶಿಷ್ಟ ಪಂಗಡದವರು ಇಲ್ಲದಿರುವ ಕಾರಣ ಆ ಸ್ಥಾನವನ್ನು ಅವರಿಗೆ ಮೀಸಲಾಗಿಟ್ಟಿರುವುದು ಅವೈಜ್ಞಾನಿಕವಾಗಿದೆ. ಈ ಎಲ್ಲಾ ವಿದ್ಯಮಾನಗಳಿಂದ ಸಿಟ್ಟಾದ ಬೀಜಾಡಿ ಗ್ರಾ. ಪಂ. ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಬಹಿಷ್ಕಾರ ಹಾಕಿದರು.

Write A Comment