ಕನ್ನಡ ವಾರ್ತೆಗಳು

ಗೋಪಾಡಿ ಪಂಚಾಯತ್‌ಗೆ ಮಹಿಳೆಯರ ಸಾರಥ್ಯ; ಅಧ್ಯಕ್ಷಗಾದಿ ಅಲಂಕರಿಸಿದ ಬಿ.ಎ. ಪದವೀಧರೆ ಸರಸ್ವತಿ ಪುತ್ರನ್

Pinterest LinkedIn Tumblr

Gopadi Panchayt_ Ashyaksha_Aayke (1)

ಕುಂದಾಪುರ: ಈ ಬಾರೀ ನೂತನವಾಗಿ ಸೇರ್ಪಡೆಗೊಂಡ ಗೋಪಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಯನ್ನು ಇಬ್ಬರು ಮಹಿಳೆಯರೇ ಅಲಂಕರಿಸಿದ್ದಾರೆ. ಅದರಲ್ಲೂ ಬಿ.ಎ. ಪದವೀಧರೆ ಗೋಪಾಡಿ ಸರಸ್ವತಿ ಪುತ್ರನ್ ಅಧ್ಯಕ್ಷೆಗಾದಿ ಏರಿದ್ದಾರೆ. ಉಪಾಧ್ಯಕ್ಷರಾಗಿ ವೈಲೆಟ್ ಬೆರೆಟ್ಟೋ ಸ್ಥಾನ ಅಲಂಕರಿಸಿದ್ದಾರೆ.

ಗೋಪಾಡಿ ಪಂಚಾಯತ್ ನೂತನ ಅಧ್ಯಕ್ಷರಾದ ಸರಸ್ವತಿ ಪುತ್ರನ್ ಅವರು ಗೋಪಾಡಿಯ ಎರಡು ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿದ್ದವರು. ಇನ್ನೊಂದು ವಿಶೇಷವೆಂದರೇ ಬಿಜೆಪಿಯ ಅಭ್ಯರ್ಥಿಯಾಗಿದ್ದ ಇವರು ಪ್ರತಿಸ್ಪರ್ಧಿಯಾದ ಬಿಜೆಪಿಯ ಎದುರಾಳಿ ಅಭ್ಯರ್ಥಿಯನ್ನೇ ಪರಾಭವಗೊಳಿಸಿ ವಿಜಯಶಾಲಿಯಾಗಿದ್ದರು.

Gopadi Panchayt_ Ashyaksha_Aayke (16)

(ನೂತನ ಅಧ್ಯಕ್ಷೆ ಸರಸ್ವತಿ ಪುತ್ರನ್)

Gopadi Panchayt_ Ashyaksha_Aayke

(ಉಪಾಧ್ಯಕ್ಷೆ ವೈಲೆಟ್  ಬೆರೆಟ್ಟೋ)

Gopadi Panchayt_ Ashyaksha_Aayke (3) Gopadi Panchayt_ Ashyaksha_Aayke (4) Gopadi Panchayt_ Ashyaksha_Aayke (7) Gopadi Panchayt_ Ashyaksha_Aayke (5) Gopadi Panchayt_ Ashyaksha_Aayke (12) Gopadi Panchayt_ Ashyaksha_Aayke (11) Gopadi Panchayt_ Ashyaksha_Aayke (14) Gopadi Panchayt_ Ashyaksha_Aayke (15) Gopadi Panchayt_ Ashyaksha_Aayke (9) Gopadi Panchayt_ Ashyaksha_Aayke (10) Gopadi Panchayt_ Ashyaksha_Aayke (13) Gopadi Panchayt_ Ashyaksha_Aayke (8) Gopadi Panchayt_ Ashyaksha_Aayke (6) Gopadi Panchayt_ Ashyaksha_Aayke (2)

ಇತ್ತೀಚೆಗೆ ನಡೆದ ಮೀಸಲಾತಿ ಪ್ರಕ್ರಿಯೆಯಲ್ಲಿ ಗೋಪಾಡಿ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಅ) ಸ್ಥಾನ ಬಂದಿದ್ದು ಅದಕ್ಕೆ ಪುರುಷ ಅಥವಾ ಮಹಿಳೆ ಸ್ಪರ್ಧಿಸಬಹುದಿತ್ತು. ಸರಸ್ವತಿ ಪುತ್ರನ್ ವಿದ್ಯಾವಂತರಾಗಿದ್ದು ಅಭಿವೃದ್ಧಿ ಕಾರ್ಯದ ಆಪೇಕ್ಷೆ ಹಾಗೂ ಹೊಸತನವಿರಲಿ ಎಂಬ ಕಾರಣಕ್ಕೆ ಸರ್ವಾನುಮತದಿಂದ, ಪಕ್ಷಾತೀತವಾಗಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬೀಜಾಡಿ-ಗೋಪಾಡಿ ಪಂಚಾಯತಿಗೆ ಪಧವೀದರೆ ಅಧ್ಯಕ್ಷೆಯೋರ್ವರು ಗದ್ದುಗೆ ಏರಿದ್ದು ಹಲವು ನಿರೀಕ್ಷೆಗಳನ್ನು ಜನರು ನೂತನ ಅಧ್ಯಕ್ಷರ ಮೇಲಿಟ್ಟಿದ್ದಾರೆ.

ವಿವಿಧ ಸಂಘಸಂಸ್ಥೆಗಳಲ್ಲಿ ಈ ಹಿಂದೆ ಸಕ್ರೀಯರಾಗಿದ್ದ ಸರಸ್ವತಿ ಪುತ್ರನ್ ಅವರು ಸಮಾಜ ಸೇವಕರಾದ ಗೋಪಾಡಿಯ ಗಣೇಶ್ ಪುತ್ರನ್ ಅವರ ಧರ್ಮಪತ್ನಿಯಾಗಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಭಾಗದ ಕುಡಿಯುವ ನೀರು ಹಾಗೂ ಮೂಲಸೌಕರ್ಯಗಳ ಸಮಸ್ಯೆಗಳನ್ನು ಮೊದಲು ಸರಿಪಡಿಸುವ ಮೂಲಕ ಪಂಚಾಯತನ್ನು ಮಾದರಿಯನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದರು.

ಇನ್ನು ಉಪಾಧ್ಯಕ್ಷೆ ವೈಲೆಟ್ ಬೆರೆಟ್ಟೊ ಅವರು ಕಳೆದ ಅವಧಿಯಲ್ಲೂ ಬೀಜಾಡಿ-ಗೋಪಾಡಿ ಪಂಚಾಯತ್ ಉಪಾಧ್ಯಕ್ಷರಾಗಿದ್ದವರು.

Write A Comment