ಕನ್ನಡ ವಾರ್ತೆಗಳು

ಕಿಸಾನ್ ಕಾಲ್ ಸೆಂಟರ್‌ನಲ್ಲಿ ಪಶುಪಾಲನಾ ಮಾಹಿತಿ.

Pinterest LinkedIn Tumblr

kishna_call_center

ಮಂಗಳೂರು, ಜೂನ್. 30 : ಭಾರತ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ರೈತರಿಗೆ ಪಶುಪಾಲನಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕಿಸಾನ್ ಕಾಲ್‌ಸೆಂಟರ್ ಕಾರ್ಯ ನಿರ್ವಹಿಸುತ್ತಿದ್ದು, ಕಿಸಾನ್ ಕಾಲ್ ಸೆಂಟರ್‌ನ ಟೋಲ್ ಫ್ರೀ ದೂರವಾಣಿ ಸಂಖ್ಯೆ:1800-180-1551 ನ್ನು ಪಶು ಪಾಲಕರು ಉಪಯೋಗಿಸಿಕೊಳ್ಳಲು ಅನುವಾಗುವಂತೆ ಕಿಸಾನ್ ಕಾಲ್ ಸೆಂಟರ್‌ನಲ್ಲಿ ರೈತರ ಹೆಸರನ್ನು ನೋ೦ದಾಯಿಸಲು ಅವಕಾಶವಿದೆ.

ಕಿಸಾನ್ ಕಾಲ್ ಸೆಂಟರ್ ವತಿಯಿಂದ ರೈತರಿಗೆ ಎಸ್.ಎಂ.ಎಸ್ ಮುಖಾಂತರ ಅವಶ್ಯಕ ಮಾಹಿತಿಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ ರೈತರುಗಳ ದಾಖಲಾತಿ ಅವಶ್ಯಕವಾಗಿದ್ದು ರೈತರು ಕಿಸಾನ್ ಕಾಲ್ ಸೆಂಟರ್‌ನಲ್ಲಿ ಈ ಕೆಳಕಂಡಂತೆ ದಾಖಲಾತಿ ಮಾಡಬಹುದಾಗಿದೆ.ರೈತರು ವೆಬ್ ಪೋರ್ಟಲ್ ಮುಖಾಂತರ ದಾಖಲು ಮಾಡಿಕೊಳ್ಳುವುದು http://farmer.gov.in/Advs/ Webregistration/webreg.aspx ಇದಕ್ಕಾಗಿ ರೈತರಿಗೆ ಅಂತರ್ಜಾಲದ ಸೌಲಭ್ಯದ ಅವಶ್ಯಕತೆ ಇರುತ್ತದೆ.ರೈತರು ತಮ್ಮ ಹಳ್ಳಿಯ ಹತ್ತಿರ ಇರುವ ಸಾರ್ವಜನಿಕ ಸೇವಾ ಕೇಂದ್ರದ (ಸಿ.ಎಸ್.ಎಸ್) ಸಿಬ್ಬಂದಿಯನ್ನು ಉಪಯೋಗಿಸಿಕೊಂಡು ರೂ. 3/- ಗಳ ಶುಲ್ಕವನ್ನು ನೀಡಿ ದಾಖಲಾತಿ ಮಾಡಿಕೊಳ್ಳಬೇಕಾಗಿರುತ್ತದೆ.

ಇದಕ್ಕೆ ರೈತರ ಹೆಸರು, ದೂರವಾಣಿ ಸಂಖ್ಯೆ. ತಾಲ್ಲೂಕು. ಜಿಲ್ಲೆ ಹಾಗೂ ರಾಜ್ಯದ ಹೆಸರಿನ ಅವಶ್ಯಕತೆ ಇರುತ್ತದೆ. ರೈತರು ಮೊಬೈಲ್ ದೂರವಾಣಿ ಸಂಖ್ಯೆ 9212357123 ಅಥವಾ 51969 ಗೆ ಎಸ್.ಎಂ.ಎಸ್. ಮುಖಾಂತರ ಮಾಹಿತಿಯನ್ನು ದಾಖಲಾತಿ ಮಾಡಿಕೊಳ್ಳಬಹುದಾಗಿದೆ.ರೈತರು ಕಾಲ್ ಸೆಂಟರ್‌ನ ಟೋಲ್ ಫ್ರೀ ಸಂಖ್ಯೆ: 1800-180-1551 ಗೆ ಕರೆ ಮಾಡಿದ್ದಲ್ಲಿ ಕಿಸಾನ್ ಕಾಲ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯು ರೈತರಿಂದ ಮಾಹಿತಿಯನ್ನು ಪಡೆದು ದಾಖಲಾತಿಯನ್ನು ಮಾಡಬಹುದಾಗಿದೆ.

ರಾಜ್ಯ/ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ ಒಟ್ಟಾರೆಯಾಗಿ ರೈತರ ಮಾಹಿತಿಯನ್ನು www.farmer.gov.in ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ >Kisan SMS=> Bulk Registration ಗೆ ಆಯಾ ಇಲಾಖೆಯವರು ರೈತರ ದಾಖಲಾತಿ ಮಾಡಬಹುದಾಗಿರುತ್ತದೆಯೆಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರ ತಿಳಿಸಿದ್ದಾರೆ.

Write A Comment