ಕನ್ನಡ ವಾರ್ತೆಗಳು

ಹೆಚ್.ಐ.ವಿ. ಸೋಂಕಿತ 412 ಫಲಾನುಭವಿಗಳಿಗೆ ರೂ.24.55 ಲಕ್ಷ ವಿತರಣೆ .

Pinterest LinkedIn Tumblr

Dc_Ibrahim_Pics

ಮಂಗಳೂರು, ಜೂನ್.30: ಜಿಲ್ಲೆಯಲ್ಲಿ ಇರುವ ನೊಂದಾಯಿತ ಹೆಚ್.ಐ.ವಿ.ಸೋಂಕಿತರರ ಮತ್ತು ಅವರ ಮಕ್ಕಳ ಪೋಷಣೆಗೆ ಸರ್ಕಾರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನ ಮಾಡುತ್ತಿದೆ, ಈ ದಿಸೆಯಲ್ಲಿ ಎ.ಆರ್.ಟಿ.ಯಲ್ಲಿ ನೊಂದಾಯಿಸಿರುವ ಫಲಾನುಭವಿಗಳಿಗೆ 2015 ರ ಮಾರ್ಚ್ ವರೆಗೆ ಒಟ್ಟು 412 ಜನರಿಗೆ ರೂ.24 ,55,700 ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಅವರು ಇಂದು ತಮ್ಮ ಕಛೇರಿಯಲ್ಲಿ ಹೆಚ್.ಐ.ವಿ./ಏಡ್ಸ್ ಸೋಂಕಿತ ಮಕ್ಕಳು ಹಾಗೂ ಇಂತಹ ಕಾಯಿಲೆಯಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಪಾಲನೆ ನಿಮಿತ್ತ ವಿಶೇಷಪಾಲನಾ ಯೋಜನೆಯ ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಕಷ್ಟದಲ್ಲಿರುವ ಮತ್ತು ತೊಂದರೆಗೊಳಗಾದ ಮಕ್ಕಳಿಗೆ ದಿನದ 24 ಗಂಟೆಗಳ ಉಚಿತ ಮತ್ತು ತುರ್ತು ಸೇವೆಯನ್ನು ನೀಡುವ ಯೋಜನೆ ಮಕ್ಕಳ ಸಹಾಯವಾಣಿ.

ಈ ಸಹಾಯವಾಣಿಯ ಉಚಿತ ದೂರವಾಣಿ ಸಂಖ್ಯೆ 1098 ಕ್ಕೆ ಸ್ವತ: ಮಕ್ಕಳು ಅಥವಾ ಇತರರು ಮಾಹಿತಿ ನೀಡಬಹುದು .ಮಕ್ಕಳನ್ನು ರಕ್ಷಿಸಿ ಆಯಾ ಸಂದರ್ಭಕ್ಕೆ ತಕ್ಕಂತೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಿ ಮಕ್ಕಳ ಪೋಷಕರನ್ನು ಪತ್ತೆ ಮಾಡಲು ಸಹಾಯವಾಣಿಯು ಸಹಕರಿಸುತ್ತದೆ.
ಎ.ಆರ್.ಟಿ ಕೇಂದ್ರದಲ್ಲಿ 563 ಮಕ್ಕಳು ನೊಂದಾಯಿಸಿದ್ದು ಇವರಲ್ಲಿ 291 ಮಕ್ಕಳು ಸೋಂಕಿತರಾಗಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಉಸ್ಮಾನ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ||ರಾಮಕೃಷ್ಣರಾವ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಲ್ಟರ್ ಡಿ` ಮೆಲ್ಲೋ ಮುಂತಾದವರು ಉಪಸ್ಥಿತರಿದ್ದರು.

Write A Comment