ಕನ್ನಡ ವಾರ್ತೆಗಳು

ಉಚಿತ ವೈದ್ಯಕೀಯ ಶಿಬಿರಕ್ಕೆ ಉತ್ತಮ ಜನಸ್ಪಂದನೆ

Pinterest LinkedIn Tumblr

Lobo_free_medicekup_1

ಮಂಗಳೂರು,ಜೂನ್.29:  ಶಾಸಕ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ದಕ್ಷಿಣ ವಲಯ ಹಾಗೂ 48ನೇ ಮತ್ತು 49 ನೇ ಕಾಂಗ್ರೆಸ್ ವಾರ್ಡ್ ಸಮಿತಿಯ ಸಹಯೋಗದೊಂದಿಗೆ ಕಪಿತಾನಿಯೊ ಶಾಲೆಯಲ್ಲಿ ನಡೆದ ಮೂರನೆ ‘ಉಚಿತ ವೈದ್ಯಕೀಯ ಶಿಬಿರದಲ್ಲಿ ಎರಡು ವಾರ್ಡಿನಿಂದ ಸುಮಾರು  400ಕ್ಕು ಮಿಕ್ಕಿ ಜನರು ಭಾಗವಹಿಸಿ ಶಿಬಿರದ ಲಾಭವನ್ನು ಪಡೆದರು.ಶಿಬಿರವನ್ನು ಉದ್ಘಾಟಿಸಿ ಮಾತನಡಿದ ಶಾಸಕರು, ಜನ ಸೇವೆಯ ಮೂಲಕ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ನನ್ನ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡಿನಲ್ಲಿ ಇಂತಹ ಹಲವರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಈಗಾಗಲೇ ಮಂಗಳಾದೇವಿ ಹಾಗು ಕುದ್ರೋಳಿಯಲ್ಲಿ ನಡೆದ ಎರಡು ಉಚಿತ ವೈದ್ಯಕೀಯ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿರುವುದು ನನಗೆ ಸಂತೊಷ ತಂದ್ದಿದೆ. ಮುಂದಿನ ದಿನಗಳಲ್ಲಿ ಜನ ಸಂಪರ್ಕ ಸಭೆ ಹಾಗೂ ಉಚಿತ ವೈದ್ಯಕೀಯ ಶಿಬಿರವನ್ನು ಪ್ರತಿ ತಿಂಗಳು ಬೇರೆ ಬೇರೆ ವಾರ್ಡ್‌ಗಳಲ್ಲಿ ಅಯೋಜಿಸಲಾಗುವುದು ಎಂದು ತಿಳಿಸಿದರು.

ಈ ಶಿಬಿರದಲ್ಲಿ ಕಾಯಿಲೆಗಳ ಪರೀಕ್ಷೆ, ಉಚಿತ ಕನ್ನಡಕ, ಅಗತ್ಯವುಳ್ಳವರಿಗೆ ಔಷಧಿ, ದಂತ ತಪಸಣೆ ಹಾಗೂ ರಕ್ತದಾನ ಶಿಬಿರ ವಿವಿಧ ಅಸ್ಪತ್ರೆಯ ಸಹಯೋಗದಿಂದ ಅಯೋಜಿಸಿಲಾಗಿದೆ ಎಂದು ಹೇಳಿದರು.

Lobo_free_medicekup_2 Lobo_free_medicekup_3 Lobo_free_medicekup_4 Lobo_free_medicekup_5

ಈ ಸಂದರ್ಭದಲ್ಲಿ ಶಾಸಕ ಐವನ್ ಡಿ’ಸೊಜ, ಮೇಯರ್ ಜೆಸಿಂತಾ ಆಲ್ಪ್ರೇಡ್, ಕಾರ್ಪೋರೆಟರ್ ಪ್ರವಿಣ್ ಚಂದ್ರ ಆಳ್ವ, ಆಶಾ ಡಿ’ಸಿಲ್ವ, ಕೇಶವ್ ಮರೋಳಿ, ಪ್ರಕಾಶ್, ಶ್ಯೆಲಜಾ ಹಾಗು ದಕ್ಷಿಣ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾಗೆಂದ್ರ ಕುಮಾರ್, ಮುಖಂಡರಾದ ಬದ್ರುದ್ದೀನ್, ಪ್ರಭಾಕರ್ ಶ್ರೀಯಾನ್, ವಕೀಲರಾದ ಪದ್ಮರಾಜ್, ವಾರ್ಡ್ ಅಧಕ್ಷರಾದ ಭರತ್ ರಾಮ್, ಹೇಮಂತ್ ಗರೋಡಿ, ಸುರೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಉದಯ್ ಕುಂದರ್ ಕಾರ್ಯಕ್ರಮ ನೀರೂಪಿಸಿದರು.

Write A Comment