ಕನ್ನಡ ವಾರ್ತೆಗಳು

ಬೈಕ್‌ಗಳ ಪರಸ್ಪರ ಡಿಕ್ಕಿ : ಓರ್ವ ಸಾವು – ಇಬ್ಬರು ಗಂಭೀರ

Pinterest LinkedIn Tumblr

bike_accident_photoa

ಕಾಸರಗೋಡು, ಜೂನ್.29 : ಎರಡು ಬೈಕ್ ಗಳು ಪರಸ್ಪರ ಡಿಕ್ಕಿ ಹೊಡೆದು ಕೊಂಡ ಪರಿಣಾಮ ಒಂದು ಬೈಕಿನ ಸವಾರ ಸಾವನ್ನಪ್ಪಿದ್ದು, ಇತರ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ತಡರಾತ್ರಿ ಬಂದ್ಯೋಡು – ಪೆರ್ಮುದೆ ರಸ್ತೆಯ ಅಡ್ಕದಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿ ಯುವಕನನ್ನು ಕಯ್ಯಾರ ನಿವಾಸಿ ಥಾಮಸ್ ರಾಡ್ರಿಗಸ್ ರವರ ಪುತ್ರ ಜೀವನ ರಾಡ್ರಿಗಸ್ (23) ಎಂದು ಗುರಿತಿಸಲಾಗಿದೆ. ಇವರು ಗಾರೆ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.
ರವಿವಾರ ತಡರಾತ್ರಿ ಜೀವನ ರಾಡ್ರಿಗಸ್ ತನ್ನ ಬೈಕ್ ನಲ್ಲಿ ಜೋಯೆಲ್ (22) ಎನ್ನುವವರ ಜೊತೆ ಕಯ್ಯಾರಿಗೆ ಪ್ರಯಾಣಿಸುತ್ತಿದ್ದರು. ಇವರು ಅಡ್ಕ ತಲುಪುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಕಮಲಾಕ್ಷ ಎಂಬವರು ಚಲಾಯಿಸುತ್ತಿದ್ದ ಬೈಕ್ ಇವರ ಬೈಕಿಗೆ  ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಈ ಮೂವರೂ ಬೈಕ್ ಗಳ ಸಹಿತ ರಸ್ತೆಗೆಸೆಯಲ್ಪಟ್ಟಿದ್ದರು.
ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣ  ಸ್ಥಳೀಯರು ಉಪ್ಪಳ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಂತಾಜನಕ ಸ್ಥಿತಿಯಲ್ಲಿದ್ದ ಜೀವನ್ ರಾಡ್ರಿಗಸ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಇತರ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Write A Comment