ಕನ್ನಡ ವಾರ್ತೆಗಳು

ಖುಷಿಯಾಗಿರುವ ಮನಸ್ಸು ಮುಖದ ಸೌಂದರ್ಯ ಹೆಚ್ಚಿಸುತ್ತೆ

Pinterest LinkedIn Tumblr

face-eairnessಸೌಂದರ್ಯ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಸಾಮಾನ್ಯ ಸಂಗತಿ. ನಾನು ಸುಂದರವಾಗಿ ಕಾಣಬೇಕು. ಏಲ್ಲರೂ ನನ್ನನ್ನು ಇಷ್ಟಪಡಬೇಕು. ಎನ್ನೋ ಖಯಾಲಿ ಪ್ರತಿಯೊಬ್ಬರಲ್ಲೂ ಇರುವ ಒಂದು ಕಾಯಿಲೆ. ಆದರೆ ಕೆಲವರು ಇದಕ್ಕೆ ತದ್ವಿರುದ್ಧ. ವಯಸ್ಸು ಇನ್ನೂ 25 ದಾಟಿರುವುದಿಲ್ಲ. ಆಗಲೇ ಜೀವನದ ಮೇಲೆ ಜಿಗುಪ್ಸೆ. ಹೆಚ್ಚಿನವರು ಜೀವನದ ಮೇಲೆ ಜಿಗುಪ್ಸೆಯಿಂದ ಬದುಕೆ ಬೇಡ ಎಂದು ಸೌಂದರ್ಯದ ಬಗ್ಗೆ ಆಸಕ್ತಿ ಕಳೆದುಕೊಂಡರೆ, ಇನ್ನು ಕೆಲವರು ಮಧ್ಯ ವಯಸ್ಸಿನಲ್ಲೆ ಮಾದಕ ಚಟಗಳಿಗೆ ಬಲಿಯಾಗಿ 25ನೇ ವಯಸ್ಸಿನಲ್ಲೇ 75 ದಾಟಿದವರಂತೆ ಕಾಣಿಸುತ್ತಿರುತ್ತಾರೆ. ಇನ್ನು ಹೆಚ್ಚಿನ ಹೆಂಗಸರಲ್ಲಿ, ಇತ್ತೀಚೆಗೆ  ಗಂಡಸರಲ್ಲೂ ಕೂಡ ಸೌಂದರ್ಯ ಪ್ರಜ್ಞೆ ಹೆಚ್ಚುತ್ತಿದೆ. ಗಂಟೆಗಟ್ಟಲೆ ಸಮಯ, ಸಾವಿರಾರುಗಟ್ಟಲೆ ಹಣವನ್ನು  ಅನಾವಶ್ಯಕವಾಗಿ ವ್ಯರ್ಥ ಮಾಡುತ್ತಿರುತ್ತಾರೆ. 40 ದಾಟಿದವರು ಹರೆಯದವರನ್ನು ಮೀರಿಸುವ ಪ್ರಯತ್ನದಲ್ಲಿ  ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.  ಆದರೆ ಅಸಲಿ ಸತ್ಯವೇ ಬೇರೆ.
ಇತ್ತೀಚೆಗೆ ಒಂದು ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಮನಸ್ಸಿಗೂ ವಯಸ್ಸಿಗೂ ನೇರ ಸಂಬಂಧವಿದೆಯೆಂತೆ. ಮನಸ್ಸು ಎಷ್ಟು ಫ್ರೆಷ್ ಆಗಿರುತ್ತೋ ಮುಖ ಕೂಡ ಅಷ್ಟೆ ಪ್ರೇಷ್ ಆಗಿ ಕಾಣಿಸುತ್ತದೆಯೆಂತೆ. ಮನಸ್ಸಿನ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡು ಹರೆಯದವರಂತೆ ಯೋಚಿಸುತ್ತಿದ್ದರೆ ದೇಹದ ಸೌಂದರ್ಯ ಕೂಡ ತಂತಾನೇ ಹೆಚ್ಚಾಗುತ್ತಿರುತ್ತಂತೆ.  ಮನುಷ್ಯನ ಜೀವನದಲ್ಲಿ ಯೌವನ ಎಷ್ಟು ಕಾಲ ಇರುತ್ತದೆ? ಇದು ತುಂಬ ಜಟಿಲ ಪ್ರಶ್ನೆ ಇದಕ್ಕೆ ಉತ್ತರ ಹೇಳಬೇಕೆಂದರೆ ನಿಜಕ್ಕೂ ಕಷ್ಟದ ವಿಷಯ. ಎರಡು ವಿಧವಾದ ಅರ್ಥಗಳಲ್ಲಿ ಇದನ್ನು ಹೇಳಬಹುದು. ಒಂದು ರೊಮ್ಯಾನ್ಸ್ ಮಾಡುವ ಯೋಗ್ಯತೆ ಮತ್ತೊಂದು  ಇತರರಿಗಾಗಲಿ ಅಥವಾ ತನಗಾಗಲಿ ಉತ್ಸಾಹದಿಂದ ಕಾಣುವ ವಿಧಾನ.

ಮೊದಲನೆಯದು ಆರೋಗ್ಯ ಮತ್ತು ಆಸಕ್ತಿಯನ್ನು ಆಧರಿಸಿರುತ್ತದೆ. ಎರಡನೆಯದೇ ಮುಖ್ಯ ಕೆಲವರ ಜೀವನದಲ್ಲಿ ನಿಜಕ್ಕೂ ಯೌವನ ಇರುವುದಿಲ್ಲ. ಕೆಲವರ ಜೀವನದಲ್ಲಿ ಅದು ನೆಂಟರಂತೆ ಬಂದು ಹೋಗಿಬಿಡುತ್ತದೆ. ಸದಾ ನೀರಸವಾಗಿ ಯಾಕೆ ಬಂತಪ್ಪಾ ಅಂತ ಬದುಕುವವರು ಕೆಲವರಾದರೆ. 40 ದಾಟಿದ ಕೂಡಲೆ ತಾವು ಮುದುಕರಾಗಿಹೋದೆವು ಅನ್ನೋ ಉದ್ದೇಶದಿಂದ ತಮ್ಮನ್ನು ತಾವು ಗಮನಿಸಿಕೊಳ್ಳದೆ  ಇರುವವರು ಕೆಲವರು. ಶರೀರವನ್ನು ಹಿಡಿತದಲ್ಲಿ ಟ್ಟುಕೊಳ್ಳಲಾಗದವರು  ಲವರಾದರೆ, ಶರೀರ ಭಾಷೆಯ ಮೇಲೆ ಶ್ರದ್ಧೆ ವಹಿಸುವವರು ಕೆಲವರು.  ತಮ್ಮನ್ನು ತಾವು ಅಂದವಾಗಿ ಪ್ರದರ್ಶಿಸಿಕೊಳ್ಳಬೇಕೆಂದರೆ ಎಲ್ಲದಕ್ಕಿಂತ ಮೊದಲು ಮನಸ್ಸನ್ನು ಫ್ರೆಷ್ ಆಗಿ,  ಉತ್ಸಾಹದಿಂದಿಟ್ಟುಕೊಳ್ಳಬೇಕು. ಕೆಲವರು 80ರ ವಯಸ್ಸಿನಲ್ಲೂ ಕೂಡ ತುಂಬ ಉತ್ಸಾಹದಿಂದ ಇರುವುದಕ್ಕೆ ಕಾರಣ ತಮಗೆ ಜೀವನದ ಮೇಲೆ ಇರುವ ಉತ್ಸಾಹ ಹಾಗೂ ರೊಮ್ಯಾಂಟಿಕ್ ಯೋಚನೆಗಳು ಎನ್ನಲಾಗುತ್ತಿದೆ. ಜೀವನದ ಮೇಲಿನ ಉತ್ಸಾಹ ಹೋದ ಮರುಕ್ಷಣ ಮುದಿತನ ಆವರಿಸಿಕೊಳ್ಳುವುದು ಸತ್ಯ. ಅದಕ್ಕೆ ಪ್ರತಿನಿತ್ಯ ನಿಮ್ಮ ಮುಖಕ್ಕೆ ಬದಲು ನಿಮ್ಮ ಮನಸ್ಸಿನಲ್ಲಿನ  ಯೋಚನೆಗಳಿಗೆ ಮೇಕಪ್ ಮಾಡಿ. ಮನಸ್ಸನ್ನು ಆ್ಯಕ್ಟಿವ್ ಹಾಗೂ ಫ್ರೆಷ್ ಆಗಿ ಇಟ್ಟುಕೊಂಡಿರಿ. ಆಗ ಮುದಿತನ ನಿಮ್ಮನ್ನು ಕಾಡುವುದಿಲ್ಲ.  ಎಂದು ಸಮೀಕ್ಷೆಯ ಆಧಾರದ ಮೇಲೆ ತಯಾರಿಸಿದ ವರದಿಯಲ್ಲಿ ಹೇಳಲಾಗಿದೆ.

Write A Comment