ಕನ್ನಡ ವಾರ್ತೆಗಳು

ಅಡಿಕೆ ಕಳ್ಳರ ಬಂಧನ  : 1.45 ಲ.ರೂ. ಮೌಲ್ಯದ ಅಡಿಕೆ ವಶ

Pinterest LinkedIn Tumblr

Adike_accesed_photo_1

ಬಂಟ್ವಾಳ,ಜೂನ್.25 : ಮಂಗಳೂರು ಸಿಸಿಬಿ ಮತ್ತು ಬಂಟ್ವಾಳ ನಗರ ಪೋಲೀಸರು ಅಡಿಕೆ ಕಳ್ಳರ ಜಾಲವೊಂದನ್ನು ಭೇದಿಸಿ ಐದು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಬಂಟ್ವಾಳದ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಕಾಟಿಪಳ್ಳ ನಿವಾಸಿಗಳಾದ ಮಹಮ್ಮದ್ ನವಾಜ್, ಮಹಮ್ಮದ್ ಶಾಪಿ, ಕುಳಾಯಿ ನಿವಾಸಿ ವಿಜಯ್, ಪೆರ್ಮನ್ನೂರಿನ ಹಬೀಬ್ ಹಸನ್, ನೀರುಮಾರ್ಗ ನಿವಾಸಿ ಮಹಮ್ಮದ್ ಅಜರುದ್ದಿನ್ ಎಂದು ಗುರುತಿಸಲಾಗಿದ್ದು ಇವರಿಂದ 1 ಐಕಾನ್ ಕಾರು, 1.45 ಲ.ರೂ. ಮೌಲ್ಯದ ಅಡಿಕೆಯನ್ನು ಪೊಲೀಸರು ವಶಪಡಿಸಿದ್ದಾರೆ.

ಮೇ 14 ರಂದು ಬಂಟ್ವಾಳ ಬಡ್ಡಕಟ್ಟೆಯಲ್ಲಿನ ಕಮಲಾಕ್ಷ ಶಣ್ಯೆ ಎಂಬವರ ಅಡಿಕೆ ಅಂಗಡಿಯಲ್ಲಿ ಸಂಗ್ರಹಿಸಿಡಲಾಗಿದ್ದ ೬೫ ಕೆ.ಜಿ. ತೂಕದ ೮ಗೋಣಿ ಚೀಲಗಳನ್ನು ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಂಗ ಬಂಧನ ವಿಧಿಸಲಾಗಿದೆ.

ಬಂಟ್ವಾಳ ಸಿ.ಐ.ಬೆಳಿಯಪ್ಪರವರ ನೇತ್ರತ್ವದಲ್ಲಿ ಎಸ್.ಐ.ನಂದಕುಮಾರ್, ಎಎಸ್ ಐ ಸಂಜೀವ ಮತ್ತವರ ಸಿಬ್ಬಂದಿಗಳು ಕಾರ್ಯಾಚರಿಸಿದ್ದರು.

Write A Comment