ಅಂತರಾಷ್ಟ್ರೀಯ

‘ಟೈಟಾನಿಕ್ ‘ ಖ್ಯಾತ ಸಂಗೀತ ನಿರ್ದೇಶಕ ಜೇಮ್ಸ್ ಹಾರ್ನರ್ ವಿಮಾನ ದುರಂತದಲ್ಲಿ ಮೃತ್ಯು.

Pinterest LinkedIn Tumblr

jemes_horner_photo

ಲಾಸ್ ಎಂಜಲೀಸ್,ಜೂನ್.23 : ಟೈಟಾನಿಕ್ ನಂತಹ ಬ್ಲಾಕ್ ಬಸ್ಟರ್‌ ಚಿತ್ರಕ್ಕೆ ಸಂಗೀತ ಒದಗಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ಜೇಮ್ಸ್ ಹಾರ್ನರ್ ಸೋಮವಾರ ಸಾಂತ ಬರ್ಬಾರದ ಲಾಸ್ ಪಡ್ರೆಸ್‌ ನ್ಯಾಷನಲ್ ಫಾರೆಸ್ಟ್ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಜೇಮ್ಸ್ ಹಾರ್ನರ್ (61 )ಸಾವನ್ನಪ್ಪಿದ್ದಾರೆ.

ಜೇಮ್ಸ್‌ ಹಾರ್ನರ್‌ ಅವರು ತಮ್ಮದೇ ಆದ ಸಿಂಗಲ್ ಎಂಜಿನ್‌ವುಳ್ಳ ಚಿಕ್ಕ ವಿಮಾನ ಹೊಂದಿದ್ದು, ಎಲ್ಲಿಗಾದ್ರೂ ಹೋಗಬೇಕಾದ್ರೆ ತಾವೇ ಡ್ರೈವ್ ಮಾಡುತ್ತಾರೆ. ನಿನ್ನೆ ವಿಮಾನ ಪತನಗೊಂಡಗಾಗ ಸ್ವತಹ ಜೇಮ್ಸ್‌ ಹಾರ್ನರ್ ಅವರೇ ಪೈಲಟ್ ಕೆಲಸವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಜೇಮ್ಸ್ ಹಾರ್ನರ್‌ ಅವರ ಸಾವನ್ನು ಅವರ ಸಹಾಯಕ ಸಿಲ್ವಿಯಾ ಖಚಿತಪಡಿಸಿದ್ದಾರೆ. ಅದ್ಭುತ ಪ್ರತಿಭೆಯನ್ನು ಕಳೆದುಕೊಂಡಿದ್ದೇವೆ ಎಂದು ಫೇಸ್ ಬುಕ್‌ನಲ್ಲಿ ಕಂಬನಿ ಮಿಡಿದಿದ್ದಾರೆ.

ಟೈಟಾನಿಕ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದಕ್ಕೆ ಜೇಮ್ಸ್ ಹಾರ್ನರ್‌ ಅವರಿಗೆ ಎರಡು ಆಸ್ಕರ್ ಪ್ರಶಸ್ತಿ ಲಭಿಸಿವೆ. ಅವತಾರ್, ಬ್ರೇವ್ ಹಾರ್ಟ್‌, ಎ ಬ್ಯೂಟಿಫುಲ್ ಮೈಂಡ್‌ ನಂತಹ ಸೂಪರ್ ಹಿಟ್ ಚಿತ್ರಗಳಿಗೆ ಜೇಮ್ಸ್‌ ಹಾರ್ನರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

Write A Comment