ಕನ್ನಡ ವಾರ್ತೆಗಳು

ಎಸೆಸೆಲ್ಸಿ ಮರುವೌಲ್ಯಮಾಪನದಲ್ಲಿ ಸಿಕ್ಕಿತ್ತು ಹೆಚ್ಚುವರಿ 3 ಅಂಕ : ರಾಜ್ಯಕ್ಕೆ 4ನೆ ಸ್ಥಾನ ಗಳಿಸಿದ ಸಮೀಹಾ ಶಾದ್

Pinterest LinkedIn Tumblr

Shameeha_sslc_toper

ಮಂಗಳೂರು, ಜೂನ್.23: ಪೆರ್ಮನ್ನೂರು ಗ್ರಾಮದ ಬಬ್ಬುಕಟ್ಟೆಯ ಹಿರಾ ಗರ್ಲ್ಸ್ ಹೈಸ್ಕೂಲ್‌ನ ವಿದ್ಯಾರ್ಥಿನಿ ಸಮೀಹಾ ಶಾದ್ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಮರು ವೌಲ್ಯಮಾಪನದಲ್ಲಿ 3 ಅಂಕ ಹೆಚ್ಚು ಗಳಿಸಿದ್ದು, ಈ ಮೂಲಕ ರಾಜ್ಯ ಮಟ್ಟದಲ್ಲಿ 4ನೆ ಸ್ಥಾನಕ್ಕೆ ಪಾತ್ರರಾಗಿದ್ದಾರೆ. ಪ್ರಸ್ತುತ ಅವರು ಶೇ.99.2 ಫಲಿತಾಂಶ ದಾಖಲಿಸಿದ್ದಾರೆ.
ಸಮೀಹಾ ಶಾದ್ ಈ ಹಿಂದೆ ಸಮಾಜ ವಿಜ್ಞಾನದಲ್ಲಿ 96, ಕನ್ನಡದಲ್ಲಿ 100, ಇಂಗ್ಲಿಷ್‌ನಲ್ಲಿ 124, ಹಿಂದಿಯಲ್ಲಿ 100, ಗಣಿತದಲ್ಲಿ 98 ಹಾಗೂ ವಿಜ್ಞಾನ ವಿಷಯದಲ್ಲಿ 99 ಸಹಿತ 617 ಅಂಕಗಳೊಂದಿಗೆ ಶೇ.98.7 ಫಲಿತಾಂಶ ದಾಖಲಿಸಿದ್ದರು. ಇದೀಗ ಮರುವೌಲ್ಯಮಾಪನದಿಂದ ಸಮಾಜ ವಿಜ್ಞಾನದಲ್ಲಿ ಈಕೆ ಗಳಿಸಿದ ಅಂಕ 99 ಆಗಿದ್ದು, ಒಟ್ಟು ಅಂಕ 620ಕ್ಕೇರಿದೆ.
ಸನ್ಮಾರ್ಗ ವಾರಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದ ದಿ.ಇಬ್ರಾಹೀಂ ಸಈದ್‌ರ ಮೊಮ್ಮಗಳಾಗಿರುವ ಈಕೆ ಬಜಾಲ್ ಪಕ್ಕಲಡ್ಕದ ಮುಹಮ್ಮದ್ ಸಮೀರ್ ಮತ್ತು ಪತ್ರಕರ್ತೆ ಸಬೀಹಾ ಫಾತಿಮಾರ ಪುತ್ರಿ

Write A Comment