ಕನ್ನಡ ವಾರ್ತೆಗಳು

ಪಿ. ಎನ್. ಪಣಿಕ್ಕರರ ಹಾದಿ ಹಿಡಿಯುವುದು ವಿದ್ಯಾರ್ಥಿಗಳಿಗೆ ಅತ್ಯಂತ ಶ್ರೇಯಸ್ಕರ – ರಾಜಾರಾಮರಾವ್

Pinterest LinkedIn Tumblr

Vachana_Sapthaha_1

ಕಾಸರಗೋಡು : ಮಹಾನ್ ಗ್ರಂಥಾಲಯ ಹರಿಕಾರಾದ, ನಾಡಿನಾದ್ಯಂತ ಸಂಚಾರ ಮಾಡಿ ಓದಿನ ಮಹತ್ವವನ್ನು ಮನದಟ್ಟು ಮಾಡಿದ ಪಿ.ಎನ್. ಪಣಿಕ್ಕರರ ಹಾದಿ ಹಿಡಿಯುವುದು ವಿದ್ಯಾರ್ಥಿಗಳಿಗೆ ಅತ್ಯಂತ ಶ್ರೇಯಸ್ಕರ ಎಂದು ಮೀಯಪದವು ವಿದ್ಯಾವರ್ಧಕ ಹಿರಿಯ ಮಾಧ್ಯಮಿಕ ಶಾಲಾ ಕನ್ನಡ ಭಾಷಾ ಅಧ್ಯಾಪಕ ಅಧ್ಯಾಪಕರ ತರಬೇತಿಯ ರಾಜ್ಯ ಮಟ್ಟದ ಸಮಿತಿ ಸದಸ್ಯ, ಪ್ರೌಢಶಾಲಾ ವಿಭಾಗದ ಪಠ್ಯಪುಸ್ತಕ ರಚನ ಸಮಿತಿಯ ಸದಸ್ಯ ರಾಜಾರಾಮ ರಾವ್ ಟಿ ಅವರು ನುಡಿದರು. ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಾಚನ ಸಪ್ತಾಹವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಸಾರ್ವಜನಿಕ ಗ್ರಂಥಾಲಯದ ಮಾದರಿಯಲ್ಲೇ ಸಾಗಲು ಪ್ರಯತ್ನಿಸುತ್ತಿರುವ ಶಾಲಾ ಮಕ್ಕಳ ಗ್ರಂಥಾಲಯದ ಈ ವರ್ಷದ ಸದಸ್ಯತನ ಕಾರ್ಡು ವಿತರಣೆಯನ್ನು ಕಾಸರಗೋಡು ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಹಿಂದಿ ಭಾಷಾ ಅಧ್ಯಾಪಕಿ, ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಗೈಡು ವಿಭಾಗದ ಜಿಲ್ಲಾ ಸಂಘಟನ ಆಯುಕ್ತೆ, ಮಾತೃಭೂಮಿ ಸೀಡ್ ಯೋಜನೆಯ ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತ ಅಧ್ಯಾಪಕಿ ಪಿಟಿ ಉಷ ಅವರು ನೆರವೇರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಲತ ಕೆ ಅಧ್ಯಕ್ಷತೆ ವಹಿಸಿದರು. ಅಧ್ಯಾಪಕರಾದ ಶೀಲ ಕೆ‌ಎಸ್, ಸುನಿಲ್ ಕುಮಾರ್ ಟಿ, ಲಲಿತಮ್ಮ ಎಂ ವಿದ್ಯಾರ್ಥಿಗಳಾದ ಪಲ್ಲವಿ ಕೆ, ಝೈನಬತ್ ಮೊದಲಾದವರು ಶುಭಹಾರೈಸಿದರು. ಮಲಯಾಳ ಭಾಷಾ ಅಧ್ಯಾಪಕ ನೌಶಾದ್ ಕೆಪಿ ಸ್ವಾಗತಿಸಿ ಕನ್ನಡ ಭಾಷಾ ಅಧ್ಯಾಪಕಿ ಸುನೀತ ಎ ವಂದಿಸಿದರು. ಅಧ್ಯಾಪಕ ಮೋಹನ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.

Write A Comment