ಕನ್ನಡ ವಾರ್ತೆಗಳು

ನಾಪತ್ತೆಯಾಗಿದ್ದ ಯುವತಿ ವಿವಾಹವಾಗಿ ಪತಿಯೊಂದಿಗೆ ಪತ್ತೆ .

Pinterest LinkedIn Tumblr

jodi_margege_photo

ಮಂಗಳೂರು,ಜೂನ್.20  : ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ನಾಲೋಡಿ ನಿವಾಸಿ ಡೊಂಬಯ ಪೂಜಾರಿ ಅವರ ಪುತ್ರಿ ಗೀತಾ(18) ಜೂ.12ರಂದು ಗೇರುಬೀಜ ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳಿದ್ದು ಬಳಿಕ ನಾಪತ್ತೆಯಾಗಿದ್ದಳು. ಈ ಬಗ್ಗೆ ಅವಳ ತಾಯಿ ಡೀಕಮ್ಮ ಅವರು ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ನೀಡಿದ್ದರು.

ಆಕೆ ಮಣಿಹಳ್ಳ ದಡ್ಡಲಕಾಡು ನಿವಾಸಿ ಯೋಗೀಶ ಎಂಬಾತನ ಪ್ರೀತಿಸುತ್ತಿದ್ದು ಅತನೊಂದಿಗೆ ವಿವಾಹವಾಗಿ ಪತ್ತೆಯಾಗಿದ್ದಾಳೆ. ಆಕೆಯ ಮೊಬೈಲ್ ನೆಟ್‌ವರ್ಕ್ ನ ಆಧಾರದ ಮೇಲೆ ಪೊಲೀಸರು ಯುವ ಜೋಡಿಗಳನ್ನು ಬೆಳ್ತಂಗಡಿ ಲಾೈಲ ಬಳಿ ಪತ್ತೆ ಮಾಡಿದ್ದರು. ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು ತಾವಿಬ್ಬರೂ ಪರಸ್ಪರ ಸಮ್ಮತಿಯಿಂದ ವಿವಾಹವಾಗಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ

Write A Comment