ಕನ್ನಡ ವಾರ್ತೆಗಳು

ಮುಂಬೈ ಮಹಾನಗರಿಯಲ್ಲಿ ಮಳೆಯ ಆರ್ಭಟ : ವಿವಿಧ ಪ್ರದೇಶಗಳು ಜಲಾವೃತ : ರೈಲು ಸಂಚಾರ ಸ್ಥಗಿತ : ವಾಹನ ಸಂಚಾರಕ್ಕೆ ತಡೆ : ಜನಜೀವನ ಅಸ್ತವ್ಯಸ್ತ

Pinterest LinkedIn Tumblr

Mumbai_Havy_Rain_1

ಚಿತ್ರ : ರೋನ್ಸ್ ಬಂಟ್ವಾಳ್

ಮುಂಬೈ: ಮುಂಬಾಯಿಯಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಮುಂಬೈ ಮಹಾನಗರಿಯ ವಿವಿಧ ಪ್ರದೇಶಗಳು ಜಲಾವೃತಗೊಂಡಿದೆ. ರೈಲು ಸಂಚಾರ ಸ್ಥಗಿತಗೊಂಡಿದೆ. ರಸ್ತೆ ಮಧ್ಯೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

Mumbai_Havy_Rain_1a Mumbai_Havy_Rain_3 Mumbai_Havy_Rain_4 Mumbai_Havy_Rain_5 Mumbai_Havy_Rain_6 Mumbai_Havy_Rain_6a Mumbai_Havy_Rain_7

Mumbai_Havy_Rain_2 Mumbai_Havy_Rain_8 Mumbai_Havy_Rain_9 Mumbai_Havy_Rain_10

ಎಡೆಬಿಡದೆ ಸುರಿದ ಮಳೆಯಿಂದಾಗಿ ರೈಲು ನಿಲ್ದಾಣಗಳೆಲ್ಲಾ ಸಂಪೂರ್ಣ ಜಲಾವೃತಗೊಂಡಿದ್ದು, ರೈಲು ಹಳಿಗಳು ನೀರಿನಿಂದ ಸಂಪೂರ್ಣ ಮುಳುಗಿ ಹೋಗಿದೆ. ರಸ್ತೆ, ಚರಂಡಿ ನೀರೆಲ್ಲಾ ಹರಿದು ಪ್ರವಾಹದಂತಹ ಸ್ಥಿತಿ ಉಂಟಾಗಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತೀವ್ರ ವಿರೋಧವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Mumbai_Havy_Rain_11 Mumbai_Havy_Rain_12 Mumbai_Havy_Rain_14 Mumbai_Havy_Rain_15 Mumbai_Havy_Rain_16 Mumbai_Havy_Rain_17 Mumbai_Havy_Rain_18 Mumbai_Havy_Rain_19 Mumbai_Havy_Rain_20 Mumbai_Havy_Rain_21 Mumbai_Havy_Rain_13

ಇದೇ ಸಂದರ್ಭದಲ್ಲಿ ಸದಾ ಬಿಡುವಿಲ್ಲದ ಜನಸಂಚಾರ ಹೊಂದಿರುವ ಛತ್ರಪತಿ ಶಿವಾಜಿ ಟರ್ಮಿನಸ್(ಸಿಎಸ್ಟಿ) ಮತ್ತು ಕುರ್ಲಾ, ಸೆಂಟ್ರಲ್ ಪ್ರದೇಶದ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಮುಂಬೈ ನಿವಾಸಿಗಳ ಜೀವನಾಡಿಯಾಗಿರುವ ಲೋಕಲ್ ರೈಲಿನಲ್ಲಿ ದಿನಂಪ್ರತಿ 70ರಿಂದ 80 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಮಳೆಯಿಂದಾಗಿ ಜನರು ಪ್ರಯಾಣಿಸಲು ಪರದಾಡುವಂತಾಗಿದೆ.

Write A Comment