ಕನ್ನಡ ವಾರ್ತೆಗಳು

ತಾಜುಲ್ ಉಮಾ ರಿಲೀಫ್ ಸರ್ವಿಸ್ ವತಿಯಿಂದ ರಂಝಾನ್ ಪೂರ್ವ ಸಿದ್ದತಾ ತರಗತಿ, ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ

Pinterest LinkedIn Tumblr

Ramzn_Kit_Distribute_1

ಉಳ್ಳಾಲ ಜೂ,19: ತಾಜುಲ್ ಉಮಾ ರಿಲೀಫ್ ಸರ್ವಿಸ್ ವತಿಯಿಂದ ರಂಝಾನ್ ಪೂರ್ವ ಸಿದ್ದತಾ ತರಗತಿ ಮತ್ತು ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ರೆಂಜಾಡಿ ಎಸ್ಸೆಸ್ಸೆಫ್ ಶಾಖಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಜನಾಡಿ ಕೇಂದ್ರ ಜುಮಾ ಮಸ್ಜಿದ್ ಖತೀಬ್ ಶರೀಫ್ ಸಹದಿ ಮಂಜನಾಡಿ ಉದ್ಘಾಟಿಸಿದರು.Ramzn_Kit_Distribute_2

ಸ್ವಾಲಿಹ್ ಬಿ.ಅರ್‌ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬವಾಕ ಬಡಕಬೈಲ್ ರಂಝಾನ್ ಕಿಟ್ ವಿತರಿಸಿದರು. ಅಬ್ದುಲ್ ಲತೀಫ್ ಬಿ.ಅರ್,ಅಬ್ದುಲ್ ಲತೀಫ್ ಎಂ.ವಿ.ಎಲ್, ಅಬ್ದುಲ್ ಅಝೀಝ್ ಜಿ.ಜಿ, ಅಬ್ದುಲ್‌ರ್ರಹ್ಮಾನ್ ಬಡಕಬೈಲ್, ಶೌಕತ್ ಸಖಾಫಿ ಸ್ವಾಗತಿಸಿದರು. ತಾಜುಲ್ ಉಮಾ ರಿಲೀಫ್ ಸರ್ವಿಸ್ ಪ್ರ.ಕಾರ್ಯದರ್ಶಿ ಸಫೀರ್ ಯು.ಎ ಕಾರ್ಯಕ್ರಮ ನೀರೂಪಿಸಿದರು.

Write A Comment