ಮುಂಬಯಿ: ಬೈಂದೂರು ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿಧ್ಯಾಥಿನಿ, ಕಳೆದ ಬುಧವಾರ ಹಾಡುಹಗಲೇ ಒತ್ತಿನೆಣೆ ಗುಡ್ಡದಲ್ಲಿ ಸಂಶಯಾತ್ಮಕವಾಗಿ ಸಾವೀಗಿಡಾದ ಕು| ಅಕ್ಷತಾ ದೇವಾಡಿಗಳ ಸಾವಿನ ಬಗ್ಗೆ ಕೂಲಂಕುಷ ತನಿಖೆ ನಡೆಯಲಿ ಎಂದು ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಕಾಪು ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಓರ್ವ ಪ್ರತಿಭಾನ್ವಿತೆ ವಿದ್ಯಾಥಿನಿಯಾಗಿದ್ದು ಅಕಸ್ಮಿಕ ಮರಣಕ್ಕೆ ಇಹಲೋಕ ತ್ಯಜಿಸಿದ ಕು| ಅಕ್ಷತಾ ದೇವಾಡಿಗಳ ಸಾವಿನ ಬಗ್ಗೆ ಜಿಲ್ಲಾ ಉಸ್ತುವರಿ ಸಚಿವ ವಿನಯಕುಮಾರ್ ಸೊರಕೆ, ಸ್ಥಾನೀಯ ಶಾಸಕ ಕೆ. ಗೋಪಾಲ ಪೂಜಾರಿ ಮತ್ತಿತರ ಸ್ಥಳೀಯ ಮುಖಂಡರು ತಕ್ಷಣವೇ ಎಚ್ಚೆತ್ತು ಸಾವೀಗಿಡಾದ ಮುಗ್ಧಬಾಲೆಗೆ ನ್ಯಾಯ ಒದಗಿಸಿ ಕೊಡುವಂತೆ ಆಗ್ರಹಿಸಿದ್ದಾರೆ.
ಅಕ್ಷತಾಳ ಮಾತಾಪಿತರಾದ ಬಾಬು ಮತ್ತು ರಾಧಾ ದೇವಾಡಿಗ ದಂಪತಿ ಮತ್ತು ಪರಿವಾರಕ್ಕೆ ಈ ದುಃಖ ಸಹಿಸುವ ಶಕ್ತಿ ಶ್ರೀ ದೇವರು, ಸೇನೇಶ್ವರ ದೇವರು, ಮಾತೆ ಕೊಲ್ಲೂರು ಶ್ರೀ ಮುಕಾಂಬಿಕೆ ದಯಪಾಲಿಸಲಿ ಎಂದೂ ಧರ್ಮಪಾಲ್ ಸಾಂತ್ವನ ಹೇಳಿದ್ದು ಈ ಬಗ್ಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ಕೆ.ಜೆ ಜಾರ್ಜ್ ಅವರಿಗೂ ಪತ್ರ ಬರೆದು ಸೂಕ್ತ ಕ್ರಮಕ್ಕೆ ಆಗ್ರಹಿಸಿರುವುದಾಗಿ ಧರ್ಮಪಾಲ್ ದೇವಾಡಿಗ ತಿಳಿಸಿದ್ದಾರೆ.
