ಕನ್ನಡ ವಾರ್ತೆಗಳು

ಇಂದಿನಿಂದ ಮುಸ್ಲಿಮರ ಪವಿತ್ರ ಹಬ್ಬ “ರಂಜಾನ್” ಆರಂಭ.

Pinterest LinkedIn Tumblr

ramzan_photo

ಎಲ್ಲಾ ಮುಸ್ಲಿಂ ಬಾಂಧವರಿಗೆ ಕನ್ನಡಿಗ ವರ್ಲ್ಡ್ ನ ಪರವಾಗಿ ರಂಜಾನ್ ಹಬ್ಬದ ಶುಭಾಶಯಗಳು

ಮಂಗಳೂರು,ಜೂನ್.18: ಕಲ್ಲಿಕೋಟೆಯಲ್ಲಿ ಬುಧವಾರ ಚಂದ್ರದರ್ಶನ ಆದ ಪ್ರಯುಕ್ತ ಜೂ.18ರಿಂದ ರಮ್ಜಾನ್ ಉಪವಾಸ ಆರಂಭಿಸಲಾಗುವುದು ಎಂದು ಮಂಗಳೂರಿನ ಖಾಝಿ ತ್ವಾಕಾ ಅಹಮ್ಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲಾ ಖಾಝಿ ಅಲ್ ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ತಿಳಿಸಿದ್ದಾರೆ. ಬುಧವಾರ ಚಂದ್ರದರ್ಶನ ಆದ ಹಿನ್ನೆಲೆಯಲ್ಲಿ ಶಿಸ್ತು, ಅತ್ಮಶುದ್ದಿ, ಇಂದ್ರಿಯ ನಿಗ್ರಹ ಮತ್ತು ಮಾನವೀಯತೆ ಒಳಗೊಂಡ ಮುಸ್ಲಿಮರ ಪವಿತ್ರ ರಂಜಾನ್ ವೃತಾಚರಣೆ  ಇಂದಿನಿಂದ ಪ್ರಾಂಭವಾಗುತ್ತದೆ.

 
ರಂಜಾನ್ – ರಮಿದ್ :
ವ್ಯಕ್ತಿ ಮತ್ತು ಸಮುದಾಯ ಬೆಸೆಯುವ ಆಚರಣೆಯೇ ಈ ರಂಜಾನ್ , ರಂಜಾನ್ ಈ ಪದಕ್ಕೆ ಮೂಲ ಅರ್ಥ ರಮಿದ್ ಎಂಬುದು, ಒಂದು ತಿಂಗಳು ಉಪವಾಸ ದಾನ ಧರ್ಮ ಮಾಡುವುದರ ಮೂಲಕ ನಿರಸನ ಹೊಂದುವುದು, ಅಹಂ, ಅರಿಷಡ್ವರ್ಗಗಳನ್ನು ಸುಟ್ಟು ಪಾವನಗೊಳ್ಳುವುದನ್ನು ಈ ಪದ ಸೂಚಿಸುತ್ತದೆ.
 
ಹಲವು ಗಂಟೆಗಳ ಉಪವಾಸದ ನಂತರ ತಿಂದರೂ ಆರೋಗ್ಯವನ್ನು ಏರುಪೇರು ಮಾಡದ ದೇಹಕ್ಕೆ ಅಗತ್ಯವಿರುವ ಜೀವಸತ್ವ ಕೊರತೆ ಅಗದಂತೆ ನೋಡಿಕೊಳ್ಳುವ ಈ ಪದ್ಧತಿಯನ್ನು ವಿಶ್ವದೇಲ್ಲೆಡೆ ಮುಸ್ಲಿಮರು ಆಚರಿಸುತ್ತಾರೆ. ದೇಹ ದಂಡೆನೆಯಂತೆ ನಡೆಯುವ ಈ ಹಬ್ಬ ಚಂದ್ರ ದರ್ಶನದಂತೆ 29 ಅಥವಾ 30 ದಿನಗಳ ಉಪವಾಸದ ಬಳಿಕ ಈದ್ ಉಲ್ ಫಿತರ ಕೊನೆಗೊಳ್ಳುವುದು. ಅಂದು ಬಡವರಿಗೆ ಅಕ್ಕಿ ಅಹಾರ ಬಟ್ಟೆ ಸಾಮಾಗ್ರಿಗಳನ್ನು ದಾನ ಮಾಡುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಕೊಡುವುದು , ನೀಗಿಕೊಳ್ಳುವುದು, ಕಳೆದುಕೊಳ್ಳುವುದು, ಈ ಹಬ್ಬದ ಆಶಯ.
 
ಉಪವಾಸ: 
ಇದು ಮುಸ್ಲಿಮವೆನಿಕೊಳ್ಳ ಬೇಕಾದರೆ ಪಾಲಿಸಬೇಕಾದ ಐದು ಕರ್ತವ್ಯಗಳಲ್ಲಿ ಒಂದು. ಉಪವಾಸವನ್ನು ಅರಬಿಕ್ ಬಾಷೆಯಲ್ಲಿ ಸೌಮ ಎಂದು ಕರೆಯುತ್ತಾರೆ, ಪರ್ಷಿಯನ್ ಮತ್ತು ಉರ್ದು ಭಾಷೆಯಲ್ಲಿ ರೋಜಾ ಎಂದು ಕರೆಯಲಾಗುತ್ತದೆ. ಕರ್ನಾಟಕದ ಕರಾವಳಿಯ ಬ್ಯಾರಿ ಮುಸ್ಲಿಮರು ನೋಂಬು ಎನ್ನುತ್ತಾರೆ, ಇಸ್ಲಾಮ ಧರ್ಮದ ಅನುಯಾಯಿಗಳು ಕಡ್ಡಾಯವಾಗಿ ರಂಜಾನ್ ತಿಂಗಳು ಪೂರ್ತಿ ಹಗಲು ಉಪವಾಸವನ್ನು ಆಚರಿಸಬೇಕಾಗುತ್ತದೆ.
 
ಉಪವಾಸದ 30 ದಿನಗಳಲ್ಲೂ ರಾತ್ರಿ ಮಸೀದಿಯಲ್ಲಿ ಒಂದೆರಡು ಗಂಟೆಗಳ ಕಾಲ “ತರಾವೀಹ” ಎಂಬ ವಿಶೇಷ ನಮಾಜ್ ಇರುತ್ತದೆ.

 

Write A Comment