ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ಮತ್ತೆ ತಲೆ ಎತ್ತುತ್ತಿರುವ ಜೂಜು ಅಡ್ಡೆಗಳು : ಪರವಾಣಿಗೆ ನೀಡಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಶ್ರೀ ರಾಮ ಸೇನೆ ಖಂಡನೆ

Pinterest LinkedIn Tumblr

Srirama_sene-manavi

ಮಂಗಳೂರು: ಮಂಗಳೂರಿನ ಯವ ಜನತೆಗೆ ಮಾರಕವಾಗಿರುವ ವಿಡೀಯೋ ಗೇಮ್ಸ್, ಸ್ಕಿಲ್ ಗೇಮ್, ಲೂಡ, ಇಸ್ಪಿಟ್ ಮುಂತಾದ ಜೂಜು ಅಡ್ಡೆಗಳು ನಗರದಲ್ಲಿ ಮತ್ತೆ ತಲೆ ಎತ್ತಿರುವುದರ ವಿರುದ್ಧ ಶ್ರೀ ರಾಮ ಸೇನೆ ಆಕ್ರೋಷ ವ್ಯಕ್ತಪಡಿಸಿದೆ. ಮಾತ್ರವಲ್ಲದೇ ಇಂತಹ ಅಪಯಕಾರಿ ಜೂಜಾಟಗಳ ಅಡ್ಡೆಗೆ ಜಿಲ್ಲಾಡಳಿತ ಮತ್ತೆ ಪರವಾಣಿಗೆ ನೀಡಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಶ್ರೀ ರಾಮ ಸೇನೆ ದ.ಕ. ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ.

ರಿಕ್ರೇಷಿಯನ್ ಕ್ಲಬ್ ಗಳ ಹೆಸರಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪಿಟ್, ವಿಡೀಯೋ ಗೇಮ್ಸ್, ಸ್ಕಿಲ್ ಗೇಮ್, ಲೂಡ, ಮುಂತಾದ ಜೂಜಾಟಗಳಿಂದ ಹಲವಾರ ಮನೆಗಳಲ್ಲಿ ಅಶಾಂತಿ ನೆಲೆಸಿತ್ತು. ಆದರೆ ಮಂಗಳೂರಿನಲ್ಲಿ ಅವ್ಯಾಹುತವಾಗಿ ನಡೆಯುತ್ತಿದ್ದ ಈ ಅಕ್ರಮ ಜೂಜಟಾಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಈ ಹಿಂದೆ ಯಶಸ್ವಿಯಾಗಿತ್ತು. ಕಳೆದ ಹಲವು ವರ್ಷಗಳಿಂದ ಕ್ಲಬ್ ಹೆಸರಿನಲ್ಲಿ ಮಂಗಳೂರು ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ನಡೆಯುತ್ತಿದ್ದ ಇಂತಹ ಜೂಜಾಟಗಳನ್ನು ಜಿಲ್ಲಾಡಳಿತ ಬಂದ್ ಮಾಡುವ ಮೂಲಕ ಯುವಜನತೆ ದಾರಿ ತಪ್ಪದಂತೆ ಎಚ್ಚರಿಕೆ ವಹಿಸಿತ್ತು. ಮಾತ್ರವಲ್ಲದೇ ಇಂತಹ ಅಕ್ರಮ ಜೂಜಾಟಗಳ ನಿಯಂತ್ರಣದಿಂದ ಯುವಕರು ದುಡಿಯುವ ಕಡೆ ಗಮನ ಕೊಡುತ್ತಿದ್ದುದ್ದರಿಂದ ಹೆಚ್ಚಿನ ಮನೆಗಳಲ್ಲಿ ಶಾಂತಿ ನೆಲೆಸುವಂತೆ ಮಾಡಿತ್ತು.

ಆದರೆ ಇದೀಗ ನಗರದ ಹೆಚ್ಚಿನ ಕಡೆಗಳಲ್ಲಿ ಇಂತಹ ಜೂಜಾಟಗಳ ಅಡ್ಡೆಗಳು ಮತ್ತೆ ಪುನರಾರಂಭವಾಗಿವೆ. ಈಗಾಗಲೇ ಮಂಗಳೂರಿನ ಪುರಭವನದ ಮುಂಭಾಗದಲ್ಲಿರುವ ಲಿಂಕ್ಕಿಂಗ್ ಟವರ್ ಕಟ್ಟಡ ಸೇರಿದಂತೆ ಇನ್ನೂ ಹಲವು ಇಸ್ಪಿಟ್ ಕ್ಲಬ್ ಗಳಲ್ಲಿ ಕೇರಂ, ಲೂಡ, ವಿಡೀಯೋ ಗೇಮ್ಸ್ ಗಳು ಆರಂಭವಾಗಿವೆ. ಇದೀಗ ಕ್ಲಬ್ ಮಾಲಕರು ಪ್ರಭಾವಿ ವ್ಯಕ್ತಿಗಳ ಮೂಲಕ ಲಾಬಿ ನಡೆಸಿರುವುದರಿಂದ ಜಿಲ್ಲಾಡಳಿತ ಮತ್ತೆ ಇಂತಹ ಕ್ಲಬ್ ಗಳಿಗೆ ಪರವಾನಿಗೆ ನೀಡಲು ಮುಂದಾಗಿವೆ ಎಂದು ಶ್ರೀ ರಾಮ ಸೇನೆಯ ಮುಖಂಡರು ಆರೋಪಿಸಿದ್ದಾರೆ.

ಒಂದುವೇಳೆ ಇಂತಹ ಕ್ಲಬ್ ಗಳಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮತ್ತೆ ಪರವಾನಿಗೆ ನೀಡಿದ್ದೇ ಆದಲ್ಲಿ ಶ್ರೀ ರಾಮ ಸೇನೆ ಜಿಲ್ಲಾದ್ಯಂತ ಉಗ್ರವಾಗಿ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಶ್ರೀ ರಾಮ ಸೇನೆ ವಿಭಾಗ ಅಧ್ಯಕ್ಷರಾದ ಆನಂದ್ ಶೆಟ್ಟಿ ಅಡ್ಯಾರ್, ಜಿಲ್ಲಾದ್ಯಕ್ಷ ಜೀವನ್ ನೀರುಮಾರ್ಗ, ಉಪಾಧ್ಯಕ್ಷರಾದ ಗಣೇಶ್ ಅತ್ತಾವರ, ಸಂಘಟನಾ ಕಾರ್ಯದರ್ಶಿ ಕೆ.ಆರ್.ಶೆಟ್ಟಿ ಅಡ್ಯಾರ್ ಪದವು ಮುಂತಾದವರು ಉಪಸ್ತಿತರಿದ್ದರು.

Write A Comment