ಕನ್ನಡ ವಾರ್ತೆಗಳು

ರಾಮಕೃಷ್ಣ ಮಿಷನ್‌ ವತಿಯಿಂದ “ಸ್ವಚ್ಚ ಮಂಗಳೂರು ಅಭಿಯಾನ” ಸ್ವಚ್ಚತಾ ಕಾರ್ಯಕ್ರಮ.

Pinterest LinkedIn Tumblr

ramkrshn_clean_city

ಮಂಗಳೂರು.ಜೂನ್.15 : ರಾಮಕೃಷ್ಣ ಮಿಷನ್‌ ಆಯೋಜಿಸುತ್ತಿರುವ 40 ವಾರಗಳ ಸ್ವಚ್ಛ ಮಂಗಳೂರು ಅಭಿಯಾನದ 20 ನೇ ಭಾನುವಾರದ ಸ್ವಚ್ಚತಾ ಕಾರ್ಯವನ್ನು ಭಾನುವಾರ ನಗರದ ಮಂಗಳಾದೇವಿ ದೇವಸ್ಥಾನ ಹಾಗೂ ದೇವಸ್ಥಾನದ ರಥಬೀದಿಯಲ್ಲಿ ಕೈಗೊಳ್ಳಲಾಯಿತು. ಸ್ವಾಮಿಜಿತಕಾಮಾನಂದಜಿ ಹಾಗೂ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್ ಉಪಸ್ಥಿತಿಯಲ್ಲಿ ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಶ್ರೀ ರಮಾನಾಥ ಹೆಗ್ಡೆ ಹಾಗೂ ಶ್ರೀರಾಮ ಟ್ರಾನಪೋರ್‍ಟ್ ಫೈನಾನ್ಸ್‌ ಕಂಪೆನಿಯ‌ ಅಧಿಕಾರಿ ಶ್ರೀ ಶರತ್‌ಚಂದ್ರಜಂಟಿಯಾಗಿ ‌ಅಭಿಯಾನಕ್ಕೆ ಚಾಲನೆ ನೀಡಿದರು.

ಬೆಳಿಗ್ಗೆ 7.30ರಿಂದ 10 ಗಂಟೆಯವರೆಗೆ ಮಂಗಳಾದೇವಿ ಪರಿಸರವನ್ನು ಶುಚಿಗೊಳಿಸಲಾಯಿತು. ಮೊದಲಿಗೆ ದೇವಸ್ಥಾನದ‌ ಆವರಣವನ್ನುಗುಡಿಸಿ ಸ್ವಚ್ಛಗೊಳಿಸಲಾಯಿತು. ತದನಂತರ ಶ್ರೀ ಕೆ ವಿ ಸತ್ಯನಾರಾಯಣ ನೇತೃತ್ವದಲ್ಲಿ ಶ್ರೀರಾಮ ಟ್ರಾನಪೋರ್‍ಟ್ ಫೈನಾನ್ಸ್‌ ಕಂಪೆನಿಯ ಸಿಬ್ಬಂದಿ ರಥಬೀದಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಅನೇಕ ದಿನಗಳಿಂದ ದೇವಸ್ಥಾನದ ಮೂಲೆಯೊಂದರಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಯನ್ನು ಯುವಾಬ್ರಿಗೇಡ್ ಸದಸ್ಯರು ತೆರವುಗೊಳಿದ್ದು ಅವರಲ್ಲಿಯೇ ಸಾರ್ಥಕ್ಯ ಭಾವ ಮೂಡಿಸಿತ್ತು. ಕಾರ್ಯಕರ್ತರ‌ ಒಂದು ತಂಡ ರಸ್ತೆ ಬದಿ ಹರಡಿಕೊಂಡಿದ್ದ ತ್ಯಾಜ್ಯವನ್ನುತೆಗೆದು ಶುಚಿಗೊಳಿಸಿದ್ದಾರೆ. ಹಾಗೇ ಕಳೆ ಕೊಚ್ಚುವ ಯಂತ್ರವನ್ನು ಬಳಸಿ ಇಡೀರಥಬೀದಿ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲದೇ ಮಂಗಳಾದೇವಿ ಬಸ್ ನಿಲ್ದಾಣ ಹಾಗು ಅದರ ಹಿಂಭಾಗದ ತೋಡುಗಳನ್ನು ಶುಚಿಗೊಳಿಸಲಾಗಿದೆ.

rama_krshna_swchata_2 rama_krshna_swchata_3 rama_krshna_swchata_4 rama_krshna_swchata_5 rama_krshna_swchata_6 rama_krshna_swchata_7 rama_krshna_swchata_8 rama_krshna_swchata_9 rama_krshna_swchata_10

ನಿರುಪಯುಕ್ತ ಕಾಲುದಾರಿ: ಇಡೀ ಮಂಗಳಾದೇವಿ ರಥಬೀದಿಯಲ್ಲಿ‌ ಉತ್ತಮ ಮಟ್ಟದ ಕಾಲುದಾರಿ ನಿರ್ಮಿಸಿದ್ದಾರೆ. ಆದರೆ‌ ಅಲ್ಲಲ್ಲಿ ಬೃಹತ್ ಮರದ ದಿಮ್ಮಿಗಳು, ಸ್ಲಾಬ್ ಗಳು ಕಾಲುದಾರಿಯನ್ನು ಆಕ್ರಮಿಸಿಕೊಂಡಿದ್ದವು. ಸ್ವಚ್ಛ ಮಂಗಳೂರು ಕಾರ್ಯಕರ್ತರು‌ ಅವನ್ನೆಲ್ಲ ಜೆಸಿಬಿ ಸಹಾಯದಿಂದ ತೆರವುಗೊಳಿಸಿ ಶುಚಿಗೊಳಿಸಿದರು.  ಐದು ಮಾರ್ಗಸೂಚಿ ಫಲಕಗಳ ನವೀಕರಣ- ಹಲವಾರು ವರುಷಗಳಿಂದ ನಿರ್ಲಕ್ಷಕ್ಕೊಳಗಾದ ಹಲವಾರು ಮಾರ್ಗಸೂಚಿ ಫಲಕಗಳು ನಗರದಲ್ಲಿ‌ ಅಲ್ಲಲ್ಲಿ ಕಾಣಸಿಗುವುದು ಸಾಮಾನ್ಯ. ಸ್ವಚ್ಚ ಮಂಗಳೂರು ಅಭಿಯಾನದಲ್ಲಿ ಈ ಫಲಕಗಳನ್ನು ನವೀಕರಿಸುವ ಕಾರ್ಯ ನಡೆಯುತ್ತಿದೆ. ಅದರಂತೆ‌  ಐದು ಬೋರ್ಡಗಳನ್ನು ಹೊಸದಾಗಿ ಬರೆಸಲಾಗಿದೆ.

ನವೀಕರಣಗೊಂಡ ಫಲಕಗಳು : 1) ಮಂಗಳಾದೇವಿ ದೇವಸ್ಥಾನದ‌ಎದುರುಗಡೆ 2) ಕಾರ್ಪೋರೇಶನ್ ಬ್ಯಾಂಕ್ ಮುಖ್ಯಕಚೇರಿಯ‌ಎದುರುಗಡೆ 3) ಅಮರ ಆಳ್ವ ರಸ್ತೆಯಲ್ಲಿ 4) ಮಂಗಳಾ ನಗರದಲ್ಲಿ 5) ಮಂಗಳಾದೇವಿ ರಸ್ತೆಯಲ್ಲಿ.
ಜಾಗೃತಿಕಾರ್ಯ : ಸ್ವಯಂ ಸೇವಕರು ಮಂಗಳಾದೇವಿ ಪರಿಸರ, ಮಂಗಳಾ ನಗರ, ಜೆಪ್ಪುಮಾರ್ಕೆಟ್ ಮುಂತಾದಕಡೆ ಮನೆಮನೆಗೆ ತೆರಳಿ ಸ್ವಚ್ಚ ಪರಿಸರಕುರಿತಕರಪತ್ರ ಹಂಚಿದರು.

rama_krshna_swchata_11 rama_krshna_swchata_12 rama_krshna_swchata_15 rama_krshna_swchata_16 rama_krshna_swchata_18 rama_krshna_swchata_19 rama_krshna_swchata_20 rama_krshna_swchata_21 rama_krshna_swchata_22 rama_krshna_swchata_24 rama_krshna_swchata_25 rama_krshna_swchata_26

ಸಹಕಾರ :20 ನೇ ಅಭಿಯಾನಕ್ಕೆಂದೇ ವಿಶೇಷವಾಗಿ ಬಿಳಿ ಟೀ ಶರ್ಟ್ ಮಾಡಿಸಿ ಸ್ವಯಂ ಪ್ರೇರಿತರಾಗಿ ಸುಮಾರು 80  ಜನ ಶ್ರೀರಾಮ್ ಟ್ರಾನ್ಸಫೋರ್ಟ್ ಫೈನಾನ್ಸ್ ಅಧಿಕಾರಿಗಳು ಹಾಗು ಸಿಬ್ಬಂದಿ 20 ನೇ ಭಾನುವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಸ್ತೆಯ ಇಕ್ಕೆಲಗಳಲ್ಲೆಲ್ಲ ಅತ್ಯಾಸಕ್ತಿಯಿಂದ ರಸ್ತೆ ತೋಡುಗಳನ್ನು ಶುಚಿಗೊಳಿಸುತ್ತಿದ್ದುದು ದಾರಿಹೋಕರ ಗಮನ ಸೆಳೆಯುತ್ತಿದ್ದುದು ವಿಶೇಷವಾಗಿತ್ತು. ಸಹಕಾರ ಯೂನಿಯನ್‌ ಅಧ್ಯಕ್ಷ ಶ್ರೀ ಹರೀಶ್‌ಆಚಾರ ಹಾಗೂ ಅವರ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ಅಭಿಯಾನದ ಹಿರಿಯ ಕಾರ್ಯಕರ್ತರಾದ ಶ್ರೀ ರಾಘವೇಂದ್ರ‌ಅಮೀನ್, ಶ್ರೀ ಸುರೇಶ್ ಶೆಟ್ಟಿ, ಶುಭೋದಯ ಆಳ್ವ, ಶ್ರಿ ರವಿರಾಜ್ ಶೆಟ್ಟಿ, ಶ್ರೀಮತಿ ರತ್ನಾ ಆಳ್ವ, ಶ್ರೀಮತಿ ಮಣಿರೈ, ಶ್ರೀ ಶಿಶಿರ್ ಅಮೀನ್ ಹಾಗೂ ಅಭಿಯಾನದ ಸಂಚಾಲಕ ದಿಲ್ ರಾಜ್ ಆಳ್ವ ಮತ್ತಿತರರು ಸಕ್ರಿಯವಾಗಿ‌ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಎಂಆರ್‌ಪಿಲ್ ಈ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

Write A Comment