ಕನ್ನಡ ವಾರ್ತೆಗಳು

ಕಮ್ಮಿ ಬೆಲೆಗೆ ಮಟನ್ ಸಿಕ್ಕರೇ ಹುಷಾರ್..! ನಾಯಿ ಮಾಂಸ ಮಿಕ್ಸ್ ಮಾಡ್ತಾರಂತೆ, ಹುಷಾರ್.!

Pinterest LinkedIn Tumblr

dog_meat_Story

 (ಸಾಂದರ್ಭಿಕ ಚಿತ್ರ)

ವಿಶೇಷ ವರದಿ:

ನೀವು ಅದ್ಯಾವುದೋ ಒಂದು ಕನ್ನಡ ಚಿತ್ರ ನೋಡಿರಬಹುದು…ಅದ್ರಲ್ಲಿ ಒಂದು ಹಾಸ್ಯ ಸನ್ನಿವೇಷ ಬರುತ್ತೆ.. ಚಿತ್ರದ ನಾಯಕ ಹೋಟೇಲಿನಲ್ಲಿ ಮಾಂಸದೂಟ ಉಣ್ಣಲು ಹೋದಾಗ ಅತೀ ಕಡಿಮೆ ಬೆಲೆಯಲ್ಲಿ ಸಿಕ್ಕೋ “ಬೌ..ಬೌ.. ಬಿರಿಯಾನಿ” ತಿನ್ನುತ್ತಾನೆ. ಆಮೇಲೆ ಅದು ಅದೇ ಬೌ..ಬೌ.. ಮಾಂಸ  ಎಂದು ತಿಳಿದಾಗ  ಆತ ತೆರೆ ಮೇಲೆ ಪಡುವ ಪಾಡು ನೋಡಿ ನಕ್ಕವರು ಹಲವರಿದ್ದಾರೆ. ಆದರೇ ಇಲ್ಲೊಂದು ಊರಲ್ಲಿ ಮಟನ್ ಮಾಂಸಕ್ಕೆ ಅದೇ ನಾಯಿ ಮಾಂಸ (ಬೌ..ಬೌ.. ಮಾಂಸ) ಮಿಕ್ಸ್ ಮಾಡಿ ಮಾಡ್ತಾರಂತೆ..! ಈ ಮಟನ್ ಮಾಂಸವನ್ನು ಕಮ್ಮಿ ಬೆಲೆಗೆ ಮಾರುತ್ತಾರಂತೆ. ಎಸ್… ಇತ್ತೀಚೆಗೆ ಕೆಲವು ದಿನಗಳಿಂದ ಈ ಸುದ್ದಿ ಎಲ್ಲರನ್ನೂ ಕಂಗಾಲಾಗಿಸಿದೆ.

ಹೌದು.. ಭಟ್ಕಳದ ಕೆಲವೆಡೆ ಇತ್ತೀಚೆಗೆ ಇಂತಹ ಮಾತುಗಳು ಕೇಳಿಬರುತ್ತಿದೆಯಂತೆ. ಇದೇ ತಾಲೂಕಿನ ಗ್ರಾಮೀಣ ಪ್ರದೇಶದ ವ್ಯಕ್ತಿಯೊಬ್ಬ ಆಹಾರಕ್ಕೆ ಅರಸಿ ಬರುವ ನಾಯಿಗಳನ್ನು ಕೊಂದು ತನ್ನ ಚೀಲಕ್ಕೆ ತುಂಬಿಸುವಾಗ ಅವನದೇ ಗ್ರಾಹಕನ ಬಳಿ ಸಿಕ್ಕಿಕೊಂಡಿದ್ದಾನೆ. ಅದೇ ಗ್ರಾಹಕ ಆವನನ್ನು ಒದ್ದು ಈ ಮಾಂಸ ಮಾರುವ ಖದೀಮನಲ್ಲಿ ವಿಚಾರಿಸಿದಾಗ  ಈತ ತಾನು ಮಾಡುತ್ತಿದ್ದ ಖತರ್ನಾಕ್ ವಿಚಾರದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನಂತೆ.

ಆದರೇ ಈತನ ಬಳಿ ಮಾಂಸ ಖರೀದಿಸಿದೋರು ಇವನನ್ನು “ವಿಚಾರಿಸಲು” ಇಂದಿಗೂ ಆತನನ್ನು ಟಾರ್ಚ್ ಹಾಕಿ ಹುಡುಕಾಡುತ್ತಿದ್ದರೂ ಆತ ಮಾತ್ರ ನಾಪತ್ತೆಯಾಗಿದ್ದಾನಂತೆ.!

ಒಟ್ಟಿನಲ್ಲಿ ಈತನ್ಯಾರೋ? ಈತ ಮಾಡಿದ್ದೇನೋ..? ಆದ್ರೇ ಕಮ್ಮಿ ದರಕ್ಕೆ ಸಿಕ್ಕಿತೆಂದು ಮಾಂಸ ಕೊಳ್ಳುವ ಮೊದಲು ಸ್ವಲ್ಪ ಆಲೋಚಿಸಿದರೇ ಮಾತ್ರ ಎಲ್ಲರೂ ಸೇಫ್..!

Write A Comment