ಕನ್ನಡ ವಾರ್ತೆಗಳು

ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ವಿದೇಶಿ ಕಾರಿನ ಬೆಲೆ ಬರೋಬ್ಬರಿ 5.80 ಕೋಟಿ..!

Pinterest LinkedIn Tumblr

ಉಡುಪಿ: ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ವಿದೇಶದಿಂದ ಖರೀದಿಸಿದ ಹೊಸ ಕಾರಿನ ಬಗ್ಗೆ ಸುದ್ದಿಯೋ ಸುದ್ದಿ. ಕೆಲವು ಲೋಕಲ್ ಚಾನಲ್ಗಳಲ್ಲೂ ಇದರದ್ದೇ ಹವ. ಇನ್ನು ವಾಟ್ಸಾಪ್ ಇದರದ್ದೇ ಸುದ್ದಿಯ ಸುಗ್ಗಿ.

ಮಲ್ಪೆಯ ಮೆ. ರಾಜ್ ಫಿಶ್‌ಮೀಲ್ ಆ್ಯಂಡ್ ಆಯಿಲ್ ಕಂಪನಿ ಹೆಸರಿಗೆ ಬಂದ ರೋಲ್ಸ್ ರಾಯ್ಸ್ ಘೋಸ್ಟ್ ಎಸ್‌ಡಬ್ಲ್ಯುಬಿ ಕಾರಿನ ಮೌಲ್ಯ 5.80 ಕೋಟಿ ರೂ. ಗಳಂದರೇ ನೀವೂ ನಂಬಲೇಬೇಕು…

Udupi_MLA_Car (2) Udupi_MLA_Car (4) Udupi_MLA_Car (1) Udupi_MLA_Car Udupi_MLA_Car (3)

ವಿದೇಶದಲ್ಲಿ ಈ ಕಾರಿನ ಬೆಲೆ 1.66ಕೋಟಿ ರೂ., ಆಮದು ಸುಂಕ ಬರೋಬ್ಬರಿ 2.89ಕೋಟಿ ರೂ., ಸರಬರಾಜು ವಿಮೆ 10 ಲಕ್ಷ ರೂ., ನೋಂದಣಿಗೆ 90 ಲಕ್ಷ ರೂ., ಸೇವಾ ಶುಲ್ಕ 19 ಲಕ್ಷ ರೂ., ಸೇವಾ ತೆರಿಗೆ 2.66 ಲಕ್ಷ ರೂ., ಕಸ್ಟಮ್ಸ್ ಕ್ಲಿಯರೆನ್ಸ್ 2.22 ಲಕ್ಷ ರೂ. ಮೊತ್ತವನ್ನು ಕಾರು ಒಳಗೊಂಡಿದೆ.

ಈ ಕಾರಿನ ವಿಶೇಷತೆಯೆಂದರೇ ಇದು ರಸ್ತೆಯ ವ್ಯವಸ್ಥೆಗೆ ಹೊಂದಿಕೊಂಡು ಸ್ವಯಂಚಾಲಿತವಾಗಿ ಗೇರ್ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಒಟ್ಟಿನಲ್ಲಿ ದುಬಾರಿ ಬೆಲೆ ಕಾರು ಉಡುಪಿಗೆ ಬಂದಿದ್ದು ಕೆಲವರಿಗೆ ಹೆಮ್ಮೆಯೆಂದೆನಿಸಿದರೇ ಇನ್ನು ಕೆಲವರಿಗೆ ಠೀಕೆಯ ವಸ್ತುವಾಗಿದ್ದಂತೂ ಸುಳ್ಳಲ್ಲ..!

Write A Comment