ಕನ್ನಡ ವಾರ್ತೆಗಳು

ಎಸ್.ಸಿಡಿ.ಸಿಸಿ ಬ್ಯಾಂಕ್ ನ ನೂತನ “ಡಾಟಾ ಸೆಂಟರ್” ಉದ್ಘಾಟನೆ –  ಹುಲಿ ದಾಳಿಗೆ ತುತ್ತಾದ ಕುಶಾಲಪ್ಪ ಕುಟುಂಬಕ್ಕೆ   ಅರ್ಥಿಕ ನೆರವು

Pinterest LinkedIn Tumblr

Scdc_bank_photo_1

ಮಂಗಳೂರು,ಜೂನ್.11 : ಇತ್ತೀಚಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನೂತನ ಅಧುನಿಕ ಶೈಲಿಯ “ಡಾಟಾ ಸೆಂಟರ್”ನ ಉದ್ಘಾಟನೆ ಗುರುವಾರ ನೆರವೇರಿತು. ಬ್ಯಾಂಕ್ ನ ಅಧ್ಯಕ್ಷರಾದ ಡಾ.ಎಮ್.ಎನ್ ರಾಜೇಂದ್ರ ಕುಮಾರ್ ಅವರು ನೂತನ ಡಾಟಾ ಸೆಂಟರ್ ಅನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅನ್ ಲೈನ್ ಮೂಲಕ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿರುವ ಎಸ್.ಸಿಡಿ.ಸಿಸಿ ಬ್ಯಾಂಕ್ ಸಂಪೂರ್ಣವಾಗಿ ಅಧುನಿಕತೆಯನ್ನು ಕೂಡಿದ್ದು, ಕೇಂದ್ರ ಕಛೇರಿ ಮತ್ತು ಬ್ಯಾಂಕಿನ 99 ಶಾಖೆಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹ ಮಾಡಲು “ಡಾಟಾ ಸೆಂಟರ್ ”ನ ಅತಿ ಅಗತ್ಯವಿದೆ, ಈ ಹಿನ್ನೆಲೆಯಲ್ಲಿ ಸರ್ವಸುರ್ಸಜ್ಜಿತ ಡಾಟಾ ಸೆಂಟರ್ ನ್ನು  ನೂತನ ಕಟ್ಟಡದಲ್ಲಿ ನಿರ್ಮಿಸಿಲಾಗಿದೆ ಎಂದು ಹೇಳಿದರು.

Scdc_bank_photo_4 Scdc_bank_photo_2 Scdc_bank_photo_3

ಡಾಟಾ ಸೆಂಟರ್ ದಿನದ 24ಗಂಟೆ, ವಾರದ 7 ದಿನವೂ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಬ್ಯಾಂಕ್ 99  ಶಾಖೆಗಳಲ್ಲಿ ಇಂಟರ್ ನೆಟ್ಟ್ , ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ಸೇವೆಯನ್ನು ನೀಡಲು ಈ ಡಾಟಾ ಸೆಂಟರ್ ಪೂರಕವಾಗಿದೆ. ಹೊಸ ಹೊಸ ತಂತ್ರಜ್ಞಾನದ ಮೂಲಕ ಎಸ್.ಸಿಡಿಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಹೆಚ್ಚು ಹತ್ತಿರವಾಗಿದ್ದು ಮುಂದಿನ ದಿನಗಳಲ್ಲಿ ಇಂಟರ್ ಬ್ಯಾಂಕಿಂಗ್, ಮೋಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆಯನ್ನು ರೂಪಿಸಲು ಮುಂದಾಗಿದೆ ಎಂದು  ರಾಜೇಂದ್ರ ಕುಮಾರ್ ತಿಳಿಸಿದರು.

Scdc_bank_photo_7 Scdc_bank_photo_5

ಕುಶಾಲಪ್ಪ ಕುಟುಂಬಕ್ಕೆ ಅರ್ಥಿಕ ಸ್ಪಂದನೆ:

ಇದೇ ಸಂದರ್ಭದಲ್ಲಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಪ್ರಾಣಿ ಪರಿಚಾರಕ, ಬಂಟ್ವಾಳ ತಾಲೂಕಿನ ವೀರಕಂಬ ಕೆಲಿಂಜದ ಕುಶಾಲಪ್ಪ ಗೌಡ ಹುಲಿಯ ದಾಳಿಗೆ ಕರ್ತವ್ಯ ನಿರತರಾಗಿದ್ದ ಸಂಧರ್ಭದಲ್ಲಿ ಬಲಿಯಾಗಿದ್ದು ಇವರ ಕುಟುಂಬಕ್ಕೆ ಎಸ್.ಸಿ.ಡಿ.ಸಿಸಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ತಲಾ ಒಂದು ಲಕ್ಷ ಒಟ್ಟು 2 ಲಕ್ಷ ಆರ್ಥಿಕ ನೆರೆವಿನ ಚೆಕ್ ನ್ನು  ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

 

Write A Comment