ಕನ್ನಡ ವಾರ್ತೆಗಳು

ಮಣಿಪಾಲ ವಿ.ವಿ.ಗೆ ಮೋಸ ಮಾಡ ಹೊರಟ ಖದೀಮ: ಆನ್‌ಲೈನಿನಲ್ಲಿ ಪರೀಕ್ಷೆ ಬರೆದವನೊಬ್ಬ..ಕೌನ್ಸೆಲಿಂಗ್ ಹಾಜರಾದವ ಮತ್ತೊಬ್ಬ..!

Pinterest LinkedIn Tumblr

download

ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ಪ್ರವೇಶಕ್ಕೆ ಆನ್‌ಲೈನಿನಲ್ಲಿ ಪರೀಕ್ಷೆ ಬರೆದವನೊಬ್ಬನಾದರೇ ಇಲ್ಲಿಗೆ ಕೌನ್ಸೆಲಿಂಗ್‌ಗೆ ಬಂದವನು ಮತ್ತೊಬ್ಬನಾಗಿದ್ದ. ನೂತನ ತಂತ್ರಜ್ನಾನವಿದ್ದ ಕಾರಣ ಈ ಮೋಸ ಗಮನಕ್ಕೆ ಬಂದಿದೆ. ಬಯೋಮೆಟ್ರಿಕ್/ ಬೆರಳಚ್ಚು ಮತ್ತು ಪೋಟೋನಿಂದಾಗಿ ವಂಚನೆ ನಡೆದಿರುವ ಬಗ್ಗೆ ಮಣಿಪಾಲ ವಿ.ವಿ. ವಂಚಕರ ವಿರುದ್ಧ ಮಣಿಪಾಲ ಪೊಲೀಸರಿಗೆ ದೂರಿನಲ್ಲಿ ತಿಳಿಸಲಾಗಿದೆ.

ಹರಿಯಾಣ ಕುರುಕ್ಷೇತ್ರದ ಅಂಶುಲ್ ಗ್ರೋವರ್ ಎನ್ನುವವನೇ ಆಪಾಧಿತನಾಗಿದ್ದು, ಈತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಮಣಿಪಾಲ ವಿವಿಯ ಗ್ರೂಪ್ 14 ರಡಿ ಬರುವ ಕೋರ್ಸ್‌ಗಳ ಪ್ರವೇಶಕ್ಕೆ ಅಂಶುಲ್ ಗ್ರೋವರ್ ಅರ್ಜಿಯನ್ನು ಸಲ್ಲಿಸಿ 2015ರ -. 19ರಂದು ಆನ್‌ಲೈನಿನಲ್ಲಿ ಪರೀಕ್ಷೆ ಬರೆದಿದ್ದ. ಅಲ್ಲದೇ ಮಾ. 10ರಂದು ಕೌನ್ಸೆಲಿಂಗ್‌ಗೆ ಹಾಜರಾಗಿ ಎಮ್.ಡಿ. ಸೀಟನ್ನು ಆಯ್ಕೆ ಮಾಡಿದ್ದು, ಮೇ 20 ರಂದು ಮೂಲ ದಾಖಲಾತಿ ನೀಡಿದ್ದ. ಬೆರಳಚ್ಚು ಫೋಟೋ ಬೇರೆ ಬೇರೆ ದಾಖಲಾತಿ ಆದ ವಿದ್ಯಾರ್ಥಿಗಳ ಬಯೋ ಮೆಟ್ರಿಕ್/ಬೆರಳಚ್ಚು ಮತ್ತು ಫೋಟೋಗಳನ್ನು ತಾಳೆ ಹಾಕಿದಾಗ ಮೇ 30 ರಂದು ಪ್ರೊವಿಷನಲ್ ದಾಖಲಾತಿ ಪಡೆದ ಅಂಶುಲ್ ಎನ್ನುವ ಅಭ್ಯರ್ಥಿಯ ಹಾಗೂ ಮಾ. 10 ರಂದು ಕೌನ್ಸೆಲಿಂಗ್‌ಗೆ ಹಾಜರಾದ ಅಭ್ಯರ್ಥಿಯ ಬೆರಳಚ್ಚು ಹಾಗೂ ಫೋಟೋಗಳು ತಾಳೆಯಾಗಿಲ್ಲ. ವಿಚಾರಕ್ಕೆ ಗಮನಕ್ಕೆ ಬಂದ ತಕ್ಷಣವೇ ಮಣಿಪಾಲ ವಿ.ವಿ.ಯವರಿಗೆ ಕೌನ್ಸೆಲಿಂಗ್‌ಗೆ ಹಾಜರಾದ ವ್ಯಕ್ತಿ ಬೇರೆ ಬೇರೆಯಾಗಿರುವುದು ತಿಳಿದುಬಂದಿದೆ.

ಅಂಶುಲ್ ಗ್ರೋವರ್ ಹೆಸರಿನಲ್ಲಿ ನಕಲಿ ವ್ಯಕ್ತಿಗಳು ಪರೀಕ್ಷೆ ಬರೆದು ಕೌನ್ಸೆಲಿಂಗ್‌ಗೆ ಹಾಜರಾಗಿ ಮಣಿಪಾಲ ಯೂನಿವರ್ಸಿಟಿಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಕಿಸಲಾಗಿದೆ. ಕರ್ನಾಟಕ ಎಜ್ಯುಕೇಶನ್‌ ಕಾಯಿದೆಯಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment