ಕುಂದಾಪುರ: ಮನೆಯ ಸಮೀಪದ ಆವರಣವಿಲ್ಲದ ಬಾವಿಗೆ ಯುವತಿಯೋರ್ವಳು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ತಾಲೂಕಿನ ಕುಂಭಾಸಿ ಗ್ರಾಮದ ಕೊರವಡಿ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಅಮೃತಾ (20) ಬಾವಿಗೆ ಬಿದ್ದು ಮ್ರತಪಟ್ಟ ಯುವತಿಯಾಗಿದ್ದಾಳೆ.
ಸೋಮವಾರ ಬೆಳಿಗ್ಗೆ ಮನೆ ಸಮೀಪದ ಬಾವಿ ಬಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದ ಆಕೆಯನ್ನು ಕೂಡಲೇ ಕುಂದಾಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಯಿತಾದರೂ ಆಕೆ ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿದ್ಯಾಭ್ಯಾಸದ ಬಳಿಕ ಅಮ್ರತಾ ಮನೆಯಲ್ಲಿಯೇ ಇದ್ದಳು.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
