ಕನ್ನಡ ವಾರ್ತೆಗಳು

ಪ್ರತಿಷ್ಠಿತ ಇನ್‌ಲ್ಯಾಂಡ್ ಸಂಸ್ಥೆಯ ನೂತನ ವಸತಿ ಸಮುಚ್ಚಯ, ಅತ್ಯಾಕರ್ಷಕ ಸ್ಟೈಲಿಷ್ ಅಪಾರ್ಟ್‌ಮೆಂಟ್ ‘ಇನ್‌ಲ್ಯಾಂಡ್ ಎಸ್ಪಾನ’ ಉದ್ಘಾಟನೆ

Pinterest LinkedIn Tumblr

InLand_Espana_Open_1

ಮಂಗಳೂರು, ಜೂ. 7: ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ (ಪ್ರೈ.) ಲಿ. ನಗರದ ಬಿಜೈ ನ್ಯೂರೋಡ್‌ನಲ್ಲಿ ನಿರ್ಮಿಸಿರುವ ನೂತನ ಅತ್ಯಾಕರ್ಷಕ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಎಸ್ಪಾನ’ದ ಉದ್ಘಾಟನ ಸಮಾರಂಭ ಶನಿವಾರ ನೆರವೇರಿತು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ರಿಬ್ಬನ್ ಕತ್ತರಿಸುವ ಮೂಲಕ ವಸತಿ ಸಮುಚ್ಚಯದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್, ನಿರ್ದೇಶಕರಾದ ಮೆರಾಜ್ ಅಹ್ಮದ್, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಹಾಬಲೇಶ್ವರ ಬಿಲ್ಡರ್ಸ್‌ನ ಅಧ್ಯಕ್ಷ ಕೆ.ಸಿ.ನಾಯ್ಕ್, ಕ್ರೆಡೈ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಶ್ರೀದೇವಿ ಸಮೂಹ ಸಂಸ್ಧೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

ಆನಂತರ ನಡೆದ ಸರಳ ಸಮಾರಂಭದಲ್ಲಿ ಐವನ್ ಡಿಸೋಜ ಮಾತನಾಡಿ, ಕಟ್ಟಡದ ಗುಣಮಟ್ಟ ಹಾಗೂ ವಿನ್ಯಾಸದಲ್ಲಿ ಹೆಸರುವಾಸಿಯಾಗಿರುವ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ (ಪ್ರೈ.) ಲಿ. ಮಂಗಳೂರು ನಗರಕ್ಕೆ ಅನೇಕ ವಸತಿ ಸಮುಚ್ಚಯವನ್ನು ನೀಡುವ ಮೂಲಕ ನಗರದ ಸೌಂದರ್ಯಕ್ಕೆ ಕಾರಣೀಭೂತರಾಗಿದ್ದಾರೆ ಎಂದರು. ಅಲ್ಲದೆ ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರು ವಾಸದ ಮನೆಯಿದ್ದ ಸ್ಥಳದಲ್ಲೇ ಈ ನೂತನ ವಸತಿ ಸಮುಚ್ಚಯ ತಲೆ ಎತ್ತಿದೆ. ಈ ಹಿನ್ನೆಲೆಯಲ್ಲಿ ಈ ಫ್ಲಾಟ್‌ಗಳಲ್ಲಿ ವಾಸಿಸುತ್ತಿರುವವರೆಲ್ಲರೂ ಅದೃಷ್ಟವಂತರು ಎಂದರು.

InLand_Espana_Open_11

InLand_Espana_Open_3 InLand_Espana_Open_4 InLand_Espana_Open_5 InLand_Espana_Open_6 InLand_Espana_Open_7 InLand_Espana_Open_8 InLand_Espana_Open_9 InLand_Espana_Open_10

ಜಗದೀಶ್ ಅಧಿಕಾರಿ ಮಾತನಾಡಿ, ಸಿರಾಜ್ ಅಹ್ಮದ್ ದ.ಕ. ಜಿಲ್ಲೆಗೆ ಅನೇಕ ಹೊಸ ಯೋಜನೆಗಳನ್ನು ನೀಡಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಅವರು ಅಳವಡಿಸಿಕೊಳ್ಳುವ ಗುಣಮಟ್ಟ, ವಿನ್ಯಾಸ, ಸೌಲಭ್ಯಗಳು ಮೆಚ್ಚುವಂತದ್ದು ಎಂದರು. ಸಿರಾಜ್ ಅಹ್ಮದ್ ಮಾತನಾಡಿ, ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್‌ರನ್ನು ಗೌರವ ಸೂಚಿಸುವ ನಿಟ್ಟಿನಲ್ಲಿ ಈ ವಸತಿ ಸಮುಚ್ಚಯಕ್ಕೆ ‘ಎಸ್ಪಾನ’ ಎಂದು ಹೆಸರಿಡಲಾಗಿದೆ ಎಂದರು.

ಇದಕ್ಕೂ ಮುನ್ನ ಬೆಳಗ್ಗೆ ನಡೆದ ಸೌಹಾರ್ದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ನಗರದ ರಾಧಕೃಷ್ಣ ದೇವಸ್ಥಾನ ಅರ್ಚಕರಾದ ವೇದಮೂರ್ತಿ ಗಿರಿಧರ್ ಭಟ್ ಪೂಜೆ ನೆರವೇರಿಸಿದರು. ಅರ್ಕುಳ ಕೊಪ್ಪಳ ಮಸೀದಿಯ ಖತೀಬರಾದ ಮುಸ್ಲಿಂ ಧರ್ಮಗುರು ಟಿ.ಎಸ್. ಮುಹಮ್ಮದ್ ಕಾಮಿಲ್ ಸಖಾಫಿ ಹಾಗೂ ಬಿಜೈ ಚರ್ಚ್‌ನ ಫಾ.ವಿಲ್ಸನ್ ಡಿಸೋಜ ಅವರಿಂದ ಪ್ರಾರ್ಥನೆ ನೆರವೇರಿತು.

INLAND_ESPANA_Bejai-1

ಇನ್‌ಲ್ಯಾಂಡ್ ಎಸ್ಪಾನದ ವಿಶೇಷತೆಗಳು :

30 ಫ್ಲಾಟುಗಳಿರುವ ಐದು ಅಂತಸ್ತುಗಳ ಸುಂದರ ಕಟ್ಟಡ / ವಿಶಾಲವಾದ ಎಂಟ್ರಿ ಲಾಬಿ / 8 ಪ್ರಯಾಣಿಕರ ಎರಡು ಲಿಫ್ಟ್‌ಗಳು / ಜಿಮ್ನೇಶಿಯಂ / ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ / ಮಕ್ಕಳ ಆಟದ ತಾಣ.

ನಗರದ ಬಿಜೈ ನ್ಯೂ ರೋಡ್‌ನ ಸುಂದರ ಪರಿಸರದಲ್ಲಿ ತಲೆ ಎತ್ತಿರುವ ‘ಇನ್‌ಲ್ಯಾಂಡ್ ಎಸ್ಪಾನ’ದಲ್ಲಿ 3 ಬಿ‌ಎಚ್‌ಕೆಯ 1910, 1885, 1785 ಚ.ಅ. ಮತ್ತು 2 ಬಿ‌ಎಚ್‌ಕೆಯ 1160, 1255, 1345 ಚದರ ಅಡಿ ವಿಸ್ತೀರ್ಣದ ಫ್ಲಾಟುಗಳು ನಿರ್ಮಾಣಗೊಂಡಿವೆ. ಈ ವಸತಿ ಸಮುಚ್ಚಯವು ಮಾಲ್, ಬಸ್ ನಿಲ್ದಾಣ, ಪ್ರಾರ್ಥನಾ ಮಂದಿರ, ಮಾರುಕಟ್ಟೆಗಳಿಗೆ ಅತ್ಯಂತ ಸಮೀಪದಲ್ಲಿದೆ.

InLand_Espana_Open_12 InLand_Espana_Open_13 InLand_Espana_Open_14 InLand_Espana_Open_15 InLand_Espana_Open_16 InLand_Espana_Open_17 InLand_Espana_Open_18 InLand_Espana_Open_19 InLand_Espana_Open_20 InLand_Espana_Open_21 InLand_Espana_Open_22 InLand_Espana_Open_23 InLand_Espana_Open_24 InLand_Espana_Open_25 InLand_Espana_Open_26 InLand_Espana_Open_27 InLand_Espana_Open_28 InLand_Espana_Open_29 InLand_Espana_Open_30 InLand_Espana_Open_31 InLand_Espana_Open_32 InLand_Espana_Open_33 InLand_Espana_Open_34 InLand_Espana_Open_35 InLand_Espana_Open_36 InLand_Espana_Open_37

ನಿರ್ಮಾಣ ಹಂತದಲ್ಲಿರುವ ಯೋಜನೆಗಳು :

ಈ ಸಂಸ್ಥೆಯು 1986ರಲ್ಲಿ ಕಾರ್ಯ ಆರಂಭಿಸಿ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಅತ್ಯಾಕರ್ಷಕ ವಿನ್ಯಾಸ, ಅತ್ಯುತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ ‘ಇನ್‌ಲ್ಯಾಂಡ್’ ಮಂಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಹೆಸರು ವಾಸಿಯಾದ ಸಂಸ್ಥೆಯಾಗಿರುತ್ತದೆ. ‘ಇನ್‌ಲ್ಯಾಂಡ್’ ಐಖ 9001:2008 ಪ್ರಮಾಣಿತ ಸಂಸ್ಥೆಯಾಗಿದೆ. ಈ ಸಂಸ್ಥೆಯ ‘ಇನ್‌ಲ್ಯಾಂಡ್ ವಿಂಡ್ಸರ್ಸ್‌’ ಕಟ್ಟಡಕ್ಕೆ ಈಗಾಗಲೇ ಹಲವಾರು ಪ್ರಶಸ್ತಿಗಳು ಲಭಿಸಿರುವುದು ‘ಇನ್‌ಲ್ಯಾಂಡ್’ ನ ಹೆಗ್ಗಳಿಕೆಯಾಗಿದೆ. ಬೆಂಗಳೂರಿನ ‘ಇನ್‌ಲ್ಯಾಂಡ್ ಇಮಾದ್’ ಕಟ್ಟಡ ಅತೀ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ. ಅಲ್ಲದೆ ಬೆಂಗಳೂರಿನಲ್ಲಿ ಇತ್ತೀಚೆಗೆ ಶಿಲಾನ್ಯಾಸಗೊಂಡಿರುವ ‘ಇನ್‌ಲ್ಯಾಂಡ್ ಎಡಿಲಾನ್’ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಮಂಗಳೂರಿನ ಕೂಳೂರು ಮತ್ತು ಕಾವೂರು ರಸ್ತೆಯಲ್ಲಿ ‘ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್’ ಎಂಬ ಅವಳಿ ಕಟ್ಟಡಗಳ ಶಿಲಾನ್ಯಾಸ ಶೀಘ್ರದಲ್ಲೇ ನೆರವೇ ರಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪುತ್ತೂರಿನ ಹೃದಯಭಾಗದಲ್ಲಿ ‘ಇನ್‌ಲ್ಯಾಂಡ್ ಮಯೂರ’ ಪ್ರಾರಂಭ ಗೊಳ್ಳಲಿದೆ. ಅಲ್ಲದೆ ಮಂಗಳೂರಿನ ಕದ್ರಿಯಲ್ಲಿ ‘ಇನ್‌ಲ್ಯಾಂಡ್ ಎವಿನ್ಸ್’, ವೆಲೆನ್ಸಿಯಾದಲ್ಲಿ ‘ಇನ್‌ಲ್ಯಾಂಡ್ ಎಸ್ಟೋರಿಯಾ’, ಉಳ್ಳಾಲದಲ್ಲಿ ‘ಇನ್‌ಲ್ಯಾಂಡ್ ಇಂಪಾಲ’, ಫಳ್ನೀರ್‌ನಲ್ಲಿ ‘ಇನ್‌ಲ್ಯಾಂಡ್ ಸಿಯಾನ್’ ಕಟ್ಟಡಗಳ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದೆ.

ಇನ್‌ಲ್ಯಾಂಡ್ ಸಂಸ್ಥೆಯಲ್ಲಿ ಬುಕ್ಕಿಂಗ್‌ಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ www.inlandbuilders.net ಸಂಪರ್ಕಿಸಬಹುದು.

Write A Comment