ಕನ್ನಡ ವಾರ್ತೆಗಳು

ಕುಂದಾಪುರ ತಾಲೂಕು ಗ್ರಾ.ಪಂ. ಚುನಾವಣೆ 29 ಕಾಂಗ್ರೆಸ್, 24 ಬಿಜೆಪಿಗೆ ಜಯ 5 ಗ್ರಾ.ಪಂ.ಗಳಲ್ಲಿ ತ್ರಿಶಂಕು ಸ್ಥಿತಿ

Pinterest LinkedIn Tumblr

ಕುಂದಾಪುರ: ತಾಲೂಕಿನ ಎರಡು ವಿಧಾನಸಭಾ ವ್ಯಾಪ್ತಿಯ ಬೈಂದೂರು ಒಟ್ಟು ೫೮ ಗ್ರಾ.ಪಂ.ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಶುಕ್ರವಾರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದಿದ್ದು, 29 ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಹಾಗೂ 24 ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕ ಸ್ಥಾನಗಳನ್ನು ಪಡೆದಿದ್ದಾರೆ.

Kndpr_Panchayt_Result Kndpr_Panchayt_Result (1) Kndpr_Panchayt_Result (2) Kndpr_Panchayt_Result (3) Kndpr_Panchayt_Result (4) Kndpr_Panchayt_Result (5) Kndpr_Panchayt_Result (6) Kndpr_Panchayt_Result (7) Kndpr_Panchayt_Result (8) Kndpr_Panchayt_Result (9) Kndpr_Panchayt_Result (10) Kndpr_Panchayt_Result (11) Kndpr_Panchayt_Result (12) Kndpr_Panchayt_Result (13) Kndpr_Panchayt_Result (14) Kndpr_Panchayt_Result (15)

ಕಾಂಗ್ರೆಸ್ ಬೆಂಬಲಿತ ಅಧಿಕ ಸ್ಥಾನ ಪಡೆದ ಪಂಚಾಯಿತಿಗಳು: ತೆಕ್ಕಟ್ಟೆ, ಬೇಳೂರು, ಹೆಂಗವಳ್ಳಿ, ಶಿರೂರು, ಉಪ್ಪುಂದ, ಹೇರೂರು, ಕೊಲ್ಲೂರು, ವಂಡ್ಸೆ, ಯೆಡಮೊಗೆ, ಇಡೂರು ಕುಂಜ್ಞಾಡಿ ಕಟ್ ಬೆಲ್ತೂರು, ಹೆಮ್ಮಾಡಿ, ತ್ರಾಸಿ, ಹೊಸಾಡು, ಶಂಕರನಾರಾಯಣ, ಅಂಪಾರು, ಕಾವ್ರಾಡಿ, ನಾವುಂದ, ಕೆರ್ಗಾಲು, ಉಳ್ಲೂರು -74, ಆಲೂರು, ಕಂಬದಕೋಣೆ, ಕರ್ಕುಂಜೆ, ಕಾಲ್ತೋಡು, ತಲ್ಲೂರು, ನಾಡಾ, ಆಲೂರು, ಹಕ್ಲಾಡಿ, ಹಾಗೂ ಗುಲ್ವಾಡಿ, ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕ ಸ್ಥಾನ ಪಡೆದುಕೊಂಡಿದ್ದಾರೆ.

ಬಿಜೆಪಿ ಬೆಂಬಲಿತ ಪಂಚಾಯತಿಗಳು: ಕುಂಭಾಸಿ, ಗೋಪಾಡಿ, ಕೋಟೇಶ್ವರ, ಹಂಗಳೂರು, ಕೋಣಿ, ಹಾಲಾಡಿ, ಹೊಂಬಾಡಿ-ಮಂಡಾಡಿ, ಪಡುವರಿ, ಅಮಾಸೆಬೈಲು, ಮಡಾಮಕ್ಕಿ, ಜಡ್ಕಲ್, ಹೊಸಂಗಡಿ, ಹಳ್ಲಿಹೊಳೆ, ಆಜ್ರಿ, ಕೆರಾಡಿ-ಬೆಳ್ಳಾಲ, ಗೋಳಿಹೊಳೆ, ಕಿರಿಮಂಜೇಶ್ವರ, ಮರವಂತೆ, ಬಸ್ರೂರು, ಬಳ್ಕೂರು, ಗುಜ್ಜಾಡಿ, ಹಟ್ಟಿಯಂಗಡಿ, ಕಂದಾವರ, ಬೆಳ್ವೆ ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚು ಸ್ಥಾನ ಪಡೆದಿದ್ದಾರೆ.

ಬೀಜಾಡಿ, ಚಿತ್ತೂರು, ಬಿಜೂರು ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್-ಬಿಜೆಪಿ ಬೆಂಬಲಿತರು ಸಮಾನ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.

ಲಾಟರಿ ಜಯಭೇರಿ: ಮೂರು ಗ್ರಾ.ಪಂ.ಗಳಲ್ಲಿ ಮೂವರು ಅದೃಷ್ಟಶಾಲಿಗಳು ಲಾಟರಿ ಮೂಲಕ ವಿಜೇತರಾಗುವ ಮೂಲಕ ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ವಿಶೇಷ ಗೆಲುವು ಸಾಧಿಸಿದ್ದಾರೆ. ಕೋಟೇಶ್ವರದ ಗಣೇಶ್ ಹಾಗೂ ಬಿಜೆಪಿಯ ಚಂದ್ರ ದೇವಾಡಿಗ ತಲಾ 179 ಮತ ಪಡೆದಿದ್ದರು. ಲಾಟರಿಯಲ್ಲಿ ಗಣೇಶ್‌ಗೆ ಅದೃಷ್ಟ ಒಲಿದಿದೆ. ಕಟ್‌ಬೆಲ್ತೂರು ಗ್ರಾ.ಪಂ.ನ ಕಾಂಗ್ರೆಸ್ ಬೆಂಬಲಿತ ಶೇಖರ್ ಬಳೆಗಾರ್‌ಗೆ 280 ಹಾಗೂ ಬಿಜೆಪಿ ಬೆಂಬಲಿತ ನಾಗರಾಜ ಪುತ್ರನ್‌ಗೆ 281 ಮತಗಳು ದೊರಕಿದ್ದವು. ಮರು ಎಣಿಕೆಯಲ್ಲಿ ಇಬ್ಬರಿಗೂ ಸಮಾನ ೨೮೦ ಮತಗಳು ಲಭಿಸಿದ್ದು, ಲಾಟರಿ ಎತ್ತಲಾಗಿ ಶೇಖರ್ ಬಳೆಗಾರ್ ಅದೃಷ್ಟಶಾಲಿಯಾಗಿ ವಿಜಯಿಯಾದರು. ನಾಡಾ ಗ್ರಾ.ಪಂ.ನ ಸಿಪಿ‌ಎಂನ ನಾಗರತ್ನ ಹಾಗೂ ಬಿಜೆಪಿಯ ಯಶೋದಾ ಅವರಿಗೆ ತಲಾ 249 ಮತಗಳು ಲಭಿಸಿ ಲಾಟರಿಯಲ್ಲಿ ನಾಗರತ್ನ ವಿಜಯಶಾಲಿಯಾಗಿದ್ದಾರೆ.

ಬೆಂಬಲಿಗರ ವಿಜಯೋತ್ಸವ: ಬೆಳಿಗೆನಿಂದಲೂ ಅಬ್ಯರ್ಥಿಗಳ ಜಯದ ಬಗ್ಗೆ ಘೋಷಣೆಯಾಗುತ್ತಿದ್ದಂತೇ ಅವರವರ ಬೆಂಬಲಿಗರ ವಿಜಯೋತ್ಸವ ಮುಗಿಲುಮುಟ್ಟಿತ್ತು. ವಿಜಯರಾದ ಅಭ್ಯರ್ಥಿಗಳಿಗೆ ಹಾರ ತುರಾಯಿ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದ್ದು ಅಲ್ಲದೇ ಅಭ್ಯರ್ಥಿಗಳಿಗೆ ಜೈಕಾರ ಹಾಕುವ ಮೂಲಕ ಸಂಭ್ರಮಾಚಿಸಿದರು. ಸ್ಥಳದಲ್ಲಿ ಹಾರಗಳ ವ್ಯಾಪಾರವೂ ಭರ್ಜರಿಯಾಗಿತ್ತು.

Write A Comment