ಕನ್ನಡ ವಾರ್ತೆಗಳು

ಮತ ಎಣಿಕೆ ಕೇಂದ್ರದಿಂದ ಐವನ್ ಡಿಸೋಜರಿಗೆ ಗೇಟ್ ಪಾಸ್ ನೀಡಿದ ಪೊಲೀಸರು

Pinterest LinkedIn Tumblr

Ivan_Visit_Counting

ಮಂಗಳೂರು: ವಿಧಾನ ಪರಿಷತ್ತು ಸದಸ್ಯ ಐವನ್ ಡಿಸೋಜ ಅವರು ಗ್ರಾಮ ಪಂಚಾಯತ್ ಚುನಾವಣೆ ಮತೆ ಎಣಿಕೆ ನಡೆಯುತ್ತಿರುವ ಪದುವ ಶಾಲೆಗೆ ಆಗಮಿಸಿದ ಸಂದರ್ಭ ಅವರನ್ನು ಪೊಲೀಸರು ಹೊರಗೆ ಕಳುಹಿಸಿದ ವಿದ್ಯಮಾನ ಶುಕ್ರವಾರ ನಡೆದಿದೆ.

ಇಂದು ಮಧ್ಯಾಹ್ನ ಮತ ಎಣಿಕೆ ನಡೆಯುತ್ತಿದ್ದ ಸಂದರ್ಭ ಪದುವ ಶಾಲೆಯ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಐವನ್ ಡಿಸೋಜ ಅವರು ವರಾಂಡದಲ್ಲಿ ಸಚಿವ ಅಭಯಚಂದ್ರ ಜೈನ್‍ರ ಆಪ್ತ ಸಹಾಯಕ ನೇಮಿರಾಜ್ ಜತೆ ಮಾತನಾಡುತ್ತಿದ್ದರು. ಅದರ ಮೊದಲು ಸಚಿವರ ಸಹಾಯಕರನ್ನು ಚುನಾವಣಾ ಗುರುತು ಚೀಟಿ ಇಲ್ಲದೆ ಪೊಲೀಸರು ಒಳಗೆ ಬಿಡುವ ಮೂಲಕ ಭದ್ರತೆಯಲ್ಲಿ ಲೋಪ ಮಾಡಿದ್ದರು.

ಐವನ್ ಡಿಸೋಜ ಅವರು ಅಭಯಚಂದ್ರ ಜೈನ್‍ರ ಆಪ್ತ ಸಹಾಯಕ ನೇಮಿರಾಜ್ ಜತೆ ಮಾತನಾಡುತ್ತಿದ್ದ ಸಂದರ್ಭ ಮಾಧ್ಯಮ ಮಂದಿ ಮಾತುಕತೆಯನ್ನು ಚಿತ್ರೀಕರಿಸಿದರು. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಮತ ಎಣಿಕೆ ಕೇಂದ್ರಕ್ಕೆ ಜನಪ್ರತಿನಿಧಿಗಳಿಗೆ ಪ್ರವೇಶವಿಲ್ಲ. ಆದ್ದರಿಂದ ದಯವಿಟ್ಟು ವಾಪಾಸ್ ಹೋಗಿ ಎಂದು ಐವನ್ ಅವರಿಗೆ ಮನವರಿಕೆ ಮಾಡಿದರು. ಕೂಡಲೇ ಐವನ್ ಡಿಸೋಜ ಅವರು ತಮ್ಮ ಸಹಚರರೊಡನೆ ಅಲ್ಲಿಂದ ಜಾಗ ಖಾಲಿ ಮಾಡಿದರು.

ಮಂಗಳೂರಲ್ಲಿ ಇತ್ತೀಚೆಗೆ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್‍ನಲ್ಲಿ ಐವನ್ ಡಿಸೋಜ ಮೊಬೈಲ್‍ನಲ್ಲಿ ಮಾತನಾಡುತ್ತಾ ಟ್ರ್ಯಾಕ್ ಇಳಿದಿದ್ದರು. ಆಗ ಸಂಘಟಕರು ರಿಲೇ ಸ್ಪರ್ಧೆಯನ್ನು ಸ್ಥಗಿತಗೊಳಿಸಿ, ಟ್ರ್ಯಾಕ್‍ನಿಂದ ಹಿಂದೆ ಸರಿಯುವಂತೆ ಸೂಚಿಸಿದ್ದರು. ಆ ಬಳಿಕ ಪದವಿ ಪ್ರದಾನ ಸಮಾರಂಭದಲ್ಲಿ ಪುರಸ್ಕರಿಸುವಂತೆ ಕೋರಿದಾಗ, ಪಿ.ಟಿ.ಉಷಾ ಅಂದರೆ ಯಾರು ಎಂದು ಪ್ರಶ್ನಿಸಿ ಸಂಘಟಕರು ಅವಕ್ಕಾಗುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸ ಬಹುದು.

Write A Comment