ಕನ್ನಡ ವಾರ್ತೆಗಳು

ಪ್ರತಿಷ್ಠಿತ ಇನ್‌ಲ್ಯಾಂಡ್ ಸಂಸ್ಥೆಯ ಅತ್ಯಾಕರ್ಷಕ ಸ್ಟೈಲಿಷ್ ಅಪಾರ್ಟ್‌ಮೆಂಟ್ ‘ಇನ್‌ಲ್ಯಾಂಡ್ ಎಸ್ಪಾನ’ ನಾಳೆ ಉದ್ಘಾಟನೆ

Pinterest LinkedIn Tumblr

INLAND_ESPANA_Bejai-1

ಮಂಗಳೂರು, ಜೂ.5: ಕರ್ನಾಟಕದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ (ಪ್ರೈ.) ಲಿ. ’ ನಗರದ ಬಿಜೈ ನ್ಯೂ ರೋಡ್‌ನಲ್ಲಿ ನಿರ್ಮಿಸಿರುವ ಅತ್ಯಾಕರ್ಷಕ ಸ್ಟೈಲಿಷ್ ಅಪಾರ್ಟ್‌ಮೆಂಟ್ ‘ಇನ್‌ಲ್ಯಾಂಡ್ ಎಸ್ಪಾನ’ ವಸತಿ ಸಮುಚ್ಚಯವು ಜೂ.6 ರಂದು ಉದ್ಘಾಟನೆಗೊಳ್ಳಲಿದೆ.

ನಗರದ ಬಿಜೈ ನ್ಯೂ ರೋಡ್‌ನ ಸುಂದರ ಪರಿಸರದಲ್ಲಿ ತಲೆ ಎತ್ತಿರುವ ‘ಇನ್‌ಲ್ಯಾಂಡ್ ಎಸ್ಪಾನ’ದಲ್ಲಿ 3 ಬಿಎಚ್‌ಕೆಯ 1910, 1885, 1785 ಚ.ಅ. ಮತ್ತು 2 ಬಿಎಚ್‌ಕೆಯ 1160, 1255, 1345 ಚದರ ಅಡಿ ವಿಸ್ತೀರ್ಣದ ಫ್ಲಾಟುಗಳು ನಿರ್ಮಾಣಗೊಂಡಿವೆ. ಈ ವಸತಿ ಸಮುಚ್ಚಯವು ಮಾಲ್, ಬಸ್ ನಿಲ್ದಾಣ, ಪ್ರಾರ್ಥನಾ ಮಂದಿರ, ಮಾರುಕಟ್ಟೆಗಳಿಗೆ ಅತ್ಯಂತ ಸಮೀಪದಲ್ಲಿದೆ.

ಈ ಸಂಸ್ಥೆಯು 1986ರಲ್ಲಿ ಕಾರ್ಯ ಆರಂಭಿಸಿ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಅತ್ಯಾಕರ್ಷಕ ವಿನ್ಯಾಸ, ಅತ್ಯುತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ ‘ಇನ್‌ಲ್ಯಾಂಡ್’ ಮಂಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಹೆಸರು ವಾಸಿಯಾದ ಸಂಸ್ಥೆಯಾಗಿರುತ್ತದೆ.

‘ಇನ್‌ಲ್ಯಾಂಡ್’ ಐಖ 9001:2008 ಪ್ರಮಾಣಿತ ಸಂಸ್ಥೆಯಾಗಿದೆ. ಈ ಸಂಸ್ಥೆಯ ‘ಇನ್‌ಲ್ಯಾಂಡ್ ವಿಂಡ್ಸರ್ಸ್‌’ ಕಟ್ಟಡಕ್ಕೆ ಈಗಾಗಲೇ ಹಲವಾರು ಪ್ರಶಸ್ತಿಗಳು ಲಭಿಸಿರುವುದು ‘ಇನ್‌ಲ್ಯಾಂಡ್’ ನ ಹೆಗ್ಗಳಿಕೆಯಾಗಿದೆ. ಬೆಂಗಳೂರಿನ ‘ಇನ್‌ಲ್ಯಾಂಡ್ ಇಮಾದ್’ ಕಟ್ಟಡ ಅತೀ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ. ಅಲ್ಲದೆ ಬೆಂಗಳೂರಿನಲ್ಲಿ ಇತ್ತೀಚೆಗೆ ಶಿಲಾನ್ಯಾಸಗೊಂಡಿರುವ ‘ಇನ್‌ಲ್ಯಾಂಡ್ ಎಡಿಲಾನ್’ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಮಂಗಳೂರಿನ ಕೂಳೂರು ಮತ್ತು ಕಾವೂರು ರಸ್ತೆಯಲ್ಲಿ ‘ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್’ ಎಂಬ ಅವಳಿ ಕಟ್ಟಡಗಳ ಶಿಲಾನ್ಯಾಸ ಶೀಘ್ರದಲ್ಲೇ ನೆರವೇ ರಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪುತ್ತೂರಿನ ಹೃದಯಭಾಗದಲ್ಲಿ ‘ಇನ್‌ಲ್ಯಾಂಡ್ ಮಯೂರ’ ಪ್ರಾರಂಭ ಗೊಳ್ಳಲಿದೆ. ಅಲ್ಲದೆ ಮಂಗಳೂರಿನ ಕದ್ರಿಯಲ್ಲಿ ‘ಇನ್‌ಲ್ಯಾಂಡ್ ಎವಿನ್ಸ್’, ವೆಲೆನ್ಸಿಯಾದಲ್ಲಿ ‘ಇನ್‌ಲ್ಯಾಂಡ್ ಎಸ್ಟೋರಿಯಾ’, ಉಳ್ಳಾಲದಲ್ಲಿ ‘ಇನ್‌ಲ್ಯಾಂಡ್ ಇಂಪಾಲ’, ಫಳ್ನೀರ್‌ನಲ್ಲಿ ‘ಇನ್‌ಲ್ಯಾಂಡ್ ಸಿಯಾನ್’ ಕಟ್ಟಡಗಳ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದೆ.

ವಿಶೇಷತೆಗಳು :

30 ಫ್ಲಾಟುಗಳಿರುವ ಐದು ಅಂತಸ್ತುಗಳ ಸುಂದರ ಕಟ್ಟಡ / ವಿಶಾಲವಾದ ಎಂಟ್ರಿ ಲಾಬಿ / 8 ಪ್ರಯಾಣಿಕರ ಎರಡು ಲಿಫ್ಟ್‌ಗಳು / ಜಿಮ್ನೇಶಿಯಂ / ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ / ಮಕ್ಕಳ ಆಟದ ತಾಣ.

ಇನ್‌ಲ್ಯಾಂಡ್ ಸಂಸ್ಥೆಯಲ್ಲಿ ಬುಕ್ಕಿಂಗ್‌ಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ www.inlandbuilders.net ಸಂಪರ್ಕಿಸಬಹುದು.

Write A Comment