ಕನ್ನಡ ವಾರ್ತೆಗಳು

ಮೂಲ್ಕಿ ಬೈಕ್ ಚೋರನ ಬಂಧನ .

Pinterest LinkedIn Tumblr

SurfRaj_bike_thef

ಮೂಲ್ಕಿ,ಜೂ.05 : ಕೇರಳದ ಮೂಲದ ಬೈಕ್‌ನ್ನು ಕದ್ದು ಮೂಲ್ಕಿಯತ್ತ ಬರುತ್ತಿದ್ದ ಬೈಕ್ ಚೋರನನ್ನು ಮೂಲ್ಕಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ ಘಟನೆ ಗುರುವಾರ ನಡೆದಿದೆ. ಬಂಧಿತನಾಗಿರುವ ಬೈಕ್ ಕಳ್ಳನನ್ನು ಬೆಂಗ್ರೆ ಕೂಳೂರಿನ ನಿವಾಸಿ ರಫೀಕ್ ಎಂಬುವರ ಪುತ್ರ ಸರ್ಫ್‌ರಾಜ್(23) ಎಂದು ಗುರುತಿಸಲಾಗಿದೆ. ಈತ ಎರಡು ದಿನದ ಹಿಂದೆ ಕೊಟ್ಟಾರದಿಂದ ಬೈಕನ್ನು ಕದ್ದು ಮೂಲ್ಕಿಯಲ್ಲಿ ಮಾರಾಟ ಮಾಡಲು ಪ್ರಯಾಣಿಸುತ್ತಿದ್ದಾಗ ಬಿದ್ದು ಗಾಯಗೊಂಡಿದ್ದನು ಎಂದು ತನಿಖೆಯ ವೇಳೆಯಲ್ಲಿ ಬೆಳಕಿಗೆ ಬಂದಿದೆ.

ಅದೇ ರೀತಿ ಗುರುವಾರ ಮಧ್ಯಾಹ್ನ ಹಳೆಯಂಗಡಿಯಿಂದ ಎಸ್.ಕೋಡಿ ಮಾರ್ಗವಾಗಿ ಕಿನ್ನಿಗೋಳಿಯತ್ತ ಕೇರಳ ಮೂಲದ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ಮಾಹಿತಿ ನೀಡಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸರ್ಫ್‌ರಾಜ್ ಕೇರಳ ರಿಜಿಸ್ಟ್ರೇಶನ್‌ನ ಬೈಕ್ ಹಾಗೂ ಕೊಟ್ಟಾರದಲ್ಲಿ ಕದ್ದ ಎರಡೂ ಬೈಕನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ್ದಾನೆ ಎಂದು ಪ್ರಕರಣ ದಾಖಲಾಗಿದೆ. ಪೊಲೀಸರು ಎರಡೂ ಬೈಕನ್ನು ವಶಪಡಿಸಿಕೊಂಡಿದ್ದು ಆರೋಪಿ ಸರ್ಫ್‌ರಾಜ್‌ನನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮೂಲ್ಕಿ ಪೊಲೀಸರು ತಿಳಿಸಿದ್ದಾರೆ.

ವರದಿ/ ಚಿತ್ರ : ನರೇಂದ್ರ ಕೆರೆಕಾಡು.

Write A Comment