ಕನ್ನಡ ವಾರ್ತೆಗಳು

ತಾಲೂಕ್ ಪಂಚಾಯತ್ ಕಚೇರಿ ಅವರಣದಲ್ಲಿ ಹಾಡುಹಗಲೇ ಯುವಕನ ಹತೈ

Pinterest LinkedIn Tumblr

Ranjith_murder_photo_1

ಮಂಗಳೂರು,ಜೂನ್.03: ಪಿಕ್ ಪಾಕೆಟರ್ ಎನ್ನಲಾದ ವ್ಯಕ್ತಿಯೋರ್ವನನ್ನು ಇರಿದು ಕೊಲೆ ಮಾಡಿರುವ ಘಟನೆ ಬುಧವಾರ ನಗರದ ಪುರಭವನದ ಎದುರಿನ ತಾಲೂಕ್ ಪಂಚಾಯತ್ ಕಚೇರಿ ಅವರಣದಲ್ಲಿ ನಡೆದಿದ್ದು, ಹತ್ಯೆಗೀಡಾದ ವ್ಯಕ್ತಿಯನ್ನು ಉಳ್ಳಾದ ರಂಜಿತ್ (22) ಎಂದು ಗುರುತಿಸಲಾಗಿದೆ.

ಈತ ನಗರದಲ್ಲಿ ಪಿಕ್ ಪಾಕೆಟ್ ನಡೆಸುವ ತಂಡದಲ್ಲಿ ಗುರುತಿಸಿಕೊಂಡಿದ್ದ್, ಜೊತೆಗೆ ಗಾಂಜಾ ಮಾರಾಟ ಮಾಡುವ ವ್ಯವಹಾರದಲ್ಲಿ ಕೂಡ ಭಾಗಿಯಾದ್ದಾನೆ ಎಂದು ತಿಳಿದು ಬಂದಿದೆ. ಈ ವ್ಯವಹಾರದ ಹಿನ್ನೆಲೆಯಲ್ಲಿ ಯಾರೋ ಈತನ ಜೊತೆಗಿದ್ದ ವ್ಯಕ್ತಿಗಳೇ ಈ ಕೃತ್ಯ ನಡೆಸಿ ಪರಾರಿಯಾಗಿರ ಬಹುದೆಂದು ಶಂಕೀಸಲಾಗಿದೆ.

Ranjith_murder_photo_2 Ranjith_murder_photo_3 Ranjith_murder_photo_4 Ranjith_murder_photo_5 Ranjith_murder_photo_6 Ranjith_murder_photo_7 Ranjith_murder_photo_8 Ranjith_murder_photo_9 Ranjith_murder_photo_10 Ranjith_murder_photo_11 Ranjith_murder_photo_12

ಇಂದು ಸಂಜೆ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿದ್ದ ರಂಜಿತ್ ನನ್ನು ನೋಡಿದ ಸ್ಥಳೀಯರು ಅಲ್ಲೆ ಪಕ್ಕದಲ್ಲಿರುವ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರೆ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ರಂಜಿತ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್ ಮುರುಗನ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪಾಂಡೇಶ್ವರ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ : ರಂಜಿತ್ ಬುಧವಾರ ನೆಹರೂ ಮೈದಾನದ ಬಳಿಯಿದ್ದ ವೇಳೆ ಆರೋಪಿ ಧನು ಬೆನ್ನಟ್ಟಿಕೊಂಡು ಬಂದಿದ್ದು, ಪ್ರಾಣ ಭಯದಿಂದ ರಂಜಿತ್ ಮಂಗಳೂರು ತಾಲೂಕು ಪಂಚಾಯತ್ ಕಚೇರಿಯ ಆವರಣದತ್ತ ಓಡಿದ್ದ. ಈ ವೇಳೆ ಧನು ಚೂರಿಯಿಂದ ಇರಿದ ಪರಿಣಾಮ ಸಮೀಪದ ಕ್ಯಾಂಟೀನ್ ಬಳಿ ಕುಸಿದು ಬಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದ ಎಂದು ತಿಳಿದುಬಂದಿದೆ. ಈ ಸಂದರ್ಭ ಧನು ಎಂಬಾತನ ಹೆಸರನ್ನು ರಂಜಿತ್ ಉಲ್ಲೇಖಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು. ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ.

ಗಾಂಜಾ ವ್ಯಸನಿ:
ಕೊಲೆಯಾದ ರಂಜಿತ್ ಗಾಂಜಾ ವ್ಯಸನಿಯಾಗಿದ್ದು, ಸೇವನೆಯ ಜೊತೆಗೆ ಮಾರಾಟದಲ್ಲೂ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಧನು ಜೊತೆ ಗಾಂಜಾ ವಿಷಯದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಕೊನೆಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Write A Comment