ರಾಷ್ಟ್ರೀಯ

ಗೂಗಲ್ ಸರ್ಚ್ ನ ಪ್ರಮುಖ ಹತ್ತು ಕ್ರಿಮಿನಲ್ಸ್ ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೋ! ಟ್ವಿಟರ್ ನಲ್ಲಿ ಮೋದಿ ಪರ, ವಿರೋಧ ಅಭಿಮಾನಿಗಳು ಕಚ್ಚಾಟ

Pinterest LinkedIn Tumblr

modi cr

ನವದೆಹಲಿ: ಗೂಗಲ್ ಸರ್ಚ್ ನ ಪ್ರಮುಖ ಹತ್ತು ಕ್ರಿಮಿನಲ್ಸ್ ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಕಂಡುಬಂದಿದ್ದು, ಇದಕ್ಕೆ ಮೋದಿ ಅಭಿಮಾನಿಗಳು ಗೂಗಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೂಗಲ್ ಸರ್ಚ್ ಮಾಡಿದಾಗ ಬರುವ ಮೊದಲ ಹತ್ತು ಫೋಟೋಗಳಲ್ಲಿ ಮೂರು ಬಾರಿ ಮೋದಿ ಫೋಟೋ ಕಾಣಿಸಿಕೊಂಡಿದೆ. ಗೂಗಲ್ ಇಮೇಜ್ ಸರ್ಚ್‍ ನಲ್ಲಿ ಮೋದಿ ಫೋಟೋ ಕಾಣಿಸಿದ್ದಕ್ಕೆ ಮೋದಿ ಅಭಿಮಾನಿಗಳು ಗೂಗಲ್ ವಿರುದ್ಧ ಕಿಡಿಕಾರಿದ್ದಾರೆ. ಇದೀಗ ಟ್ವಿಟರ್ ನಲ್ಲಿ ಮೋದಿ ಪರ, ವಿರೋಧ ಅಭಿಮಾನಿಗಳು ಕಚ್ಚಾಡುತ್ತಿದ್ದಾರೆ. ಈ ಸುದ್ದಿ ಪ್ರಕಟಗೊಂಡ ಬಳಿಕ ಟ್ವಿಟ್ಟರ್’ನಲ್ಲಿ ಟಾಪ್ ಹತ್ತು ಕ್ರಿಮಿನಲ್ ಹ್ಯಾಶ್ ಟ್ಯಾಗ್ ಟ್ರೆಡಿಂಗ್ ಟಾಪಿಕ್ ಆಗಿದೆ.

Write A Comment