ಕುಂದಾಪುರ, ಜೂ.03: ತಾಲೂಕಿನ ಶಿರೂರು ಗ್ರಾಮದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಪದೇಪದೇ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿ ರುವ ಭಟ್ಕಳದ ಯುವಕನೋರ್ವನ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ವಯಸ್ಕ ಬಾಲಕಿ ಶಿರೂರು ಸಮೀಪದ ಮೈದಿನಪುರ ನಿವಾಸಿಯಾಗಿದ್ದಾಳೆ. ಭಟ್ಕಳ ತಾಲೂಕು ಮುಂಡಳ್ಳಿ ನಿವಾಸಿ ಅಬ್ದುಲ್ ಫೌಜ್ ಎಂಬಾತನನ್ನು ಆರೋಪಿಯೆಂದು ಹೆಸರಿಸಲಾಗಿದೆ.
ತನ್ನದೇ ಕೋಮಿಗೆ ಸೇರಿದ ಬಾಲಕಿಯ ಮನೆಯವರಿಗೆ ಅಬ್ದುಲ್ ಫೌಜ್ ಪರಿಚಿತನಾಗಿದ್ದು, ಅದೇ ನೆಪದಲ್ಲಿ ಆಗಾಗ್ಗೆ ಅವರ ಮನೆಗೆ ಬರುತ್ತಿದ್ದ. ಹೀಗೆ ಬಂದು ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಆತ ಸಮಯ ಸಾಧಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಪರಿಣಾಮ ಬಾಲಕಿ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ವಿಷಯ ತಡವಾಗಿ ಮನೆಯವರ ಗಮನಕ್ಕೆ ಬಂದಿದ್ದು, ಇದೀಗ ಬಾಲಕಿಯ ಮೂಲಕ ಆರೋಪಿಯ ವಿರುದ್ಧ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಬೈಂದೂರು ಠಾಣಾ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಶ್ರಮಿಸುತ್ತಿದ್ದಾರೆ.