ಕುಂದಾಪುರ: ಗ್ರಾಮಪಂಚಾಯತ್ ಚುನಾವಣೆ ಹಿನ್ನೆಲೆ ಕುಂದಾಪುರದಲ್ಲಿ ಪೊಲೀಸರು ಬುಧವಾರ ಸಂಜೆ ರೋಲ್‌ಕಾಲ್ ನಡೆಸಿದರು.
ತಾಲೂಕು ಸೇರಿದಂತೆ ವಿವಿದೆಡೆಯಿಂದ ಬಂದ 450 ಕ್ಕೂ ಅಧಿಕ ಪೊಲೀಸರು ಈ ರೋಲ್‌ಕಾಲಿನಲ್ಲಿ ಪಾಲ್ಘೊಂಡರು.
ತಾಲೂಕಿನಲ್ಲಿ ಒಟ್ಟು 36 ಪಂಚಾಯತ್‌ಗಳಲ್ಲಿ ಅವಿರೋಧ ಆಯ್ಕೆಗಳಾಗಿದ್ದು, ಉಳಿದಂತೆ 25 ಪಂಚಾಯತ್‌ಗಳನ್ನು ನಕ್ಸಲ್ ಪೀಡಿತ, 16 ಅತೀ ಸೂಕ್ಷ್ಮ, 36 ಸೂಕ್ಷ್ಮ 214 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.
ಗ್ರಾಮಪಂಚಾಯತ್ ಚುನಾವಣೆ ಹಿನ್ನೆಲೆ ಕೆ.ಎಸ್.ಆರ್.ಪಿ. ತುಕಡಿಗಳು, ಡಿ.ಎ.ಆರ್. ವಾಹನ, ನಕ್ಸಲ್ ಪೀಡಿತ ಪ್ರದೇಶಕ್ಕೆ ಆರ್ಮಡ್ ಪೊಲೀಸ್ ಗಾರ್ಡ್, ಆಂಟಿ ಸಬೂಟೇಜ್ ಟೀಮ್ (ಎ.ಸಿ.) ನಿಯೋಜಿಸಲಾಗಿದೆ. ಅಲ್ಲದೇ ಒಬ್ಬರು ಡಿವೈಎಸ್ಪಿ, 6 ಇನ್ಸ್‌ಪೆಕ್ಟರ್, 20 ಸಬ್ ಇನ್ಸ್‌ಪೆಕ್ಟರ್, 32 ಎ.ಎಸ್.ಐ. ಸೇರಿದಂತೆ ಹೆಡ್‌ಕಾನ್ಸ್‌ಟೇಬಲ್, ಪೇದೆಗಳು, ಮಹಿಳಾ ಪೊಲೀಸರು ಹಾಗೂ ಹೋಂಗಾರ್ಡ್ ಸಿಬ್ಬಂದಿಗಳನ್ನು ತಾಲೂಕಿನಾದ್ಯಂತ ನಿಯೋಜಿಸಲಾಗಿದೆ.
ಬುಧವಾರ ಸಂಜೆ ಕುಂದಾಪುರದಲ್ಲಿ ನಡೆದ ರೋಲ್‌ಕಾಲ್ ಸಂದರ್ಭ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತನಿರೀಕ್ಷಕ ಸುದರ್ಶನ್, ಉಪನಿರೀಕ್ಷಕರುಗಳಾದ ನಾಸೀರ್ ಹುಸೇನ್, ರವಿ, ಸಂತೋಷ್ ಕಾಯ್ಕಿಣಿ, ದೇಜಪ್ಪ, ಜಯಂತ್, ದೇವೇಂದ್ರ, ಜಯ ಮೊದಲಾದವರಿದ್ದರು.