ಕನ್ನಡ ವಾರ್ತೆಗಳು

ಹಸಿವು ಮುಕ್ತ ರಾಜ್ಯ ಮೂಲಕ ಗ್ರಾಮೀಣ ಜನರ ಭವಿಷ್ಯ ರೂಪಿಸಿದ ಸರಕಾರ : ಐವನ್ ಡಿ’ಸೋಜಾ.

Pinterest LinkedIn Tumblr

Mlc_press_meet_1

ಮಂಗಳೂರು,ಮೇ.27: ಬಿಜೆಪಿ ಸರಕಾರ ಭೂಸ್ವಾಧೀನ ಮಸೂದೆ ಜಾರಿಗೊಳಿಸುವ ಸಂಬಂಧ ಶತಾಯಗತಾಯ ಪ್ರಯತ್ನ ನಡೆಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಇದರಿಂದ ರೈತ ಸಮುದಾಯ ಯಾಕೆ ಬಿಜೆಪಿಗೆ ಮತ ಹಾಕಬೇಕು ಎಂದು ಪ್ರಶ್ನಿಸುವಂತಾಗಿದೆ. ಹಸಿವು ಮುಕ್ತ ರಾಜ್ಯದ ಗುರಿ ಹೊಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ನೂರಾರು ಜನಪರ ಯೋಜನೆಗಳು ಗ್ರಾಮೀಣ ಜನರ ಭವಿಷ್ಯಕ್ಕೆ ಉತ್ತಮ ವೇದಿಕೆ ಒದಗಿಸಿದ್ದು, ಗ್ರಾಮೀಣ ಜನರು ಇದಕ್ಕಾಗಿ ಕಾಂಗ್ರೆಸ್‌ ಬೆಂಬಲಿತರನ್ನು ಚುನಾಯಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿ. ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಪ್ರಶ್ನಿಸಿದ್ದಾರೆ.

Mlc_press_meet_2

9/11ಗೆ ಕಾನೂನು ಸರಳೀಕರಣ ಮಾಡಿ ಈಗಾಗಲೇ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ. ಗ್ರಾಮ ಮಟ್ಟದಲ್ಲಿಯೇ ಭೂಮಿ ವಿಂಗಡನೆ ಸಂಬಂಧಿತ ವ್ಯವಸ್ಥೆ ಈ ಮೂಲಕ ನಡೆಯಲಿದೆ. ಸರಕಾರದ ಸುತ್ತೋಲೆ ಬಂದಿದ್ದರೂ ಕೂಡ ಬಿಜೆಪಿಯವರು ಈಗಲೂ 9/11 ಸಮಸ್ಯೆ ಎನ್ನುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ ಐವನ್‌ ಡಿ’ಸೋಜಾ, ಕರಾವಳಿ ಜಿಲ್ಲೆಯ ಸಂಸದರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಅವರ ಪಾಲು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜ್ಯಕ್ಕೆ ದೊರಕುವ ಅನುದಾನದಲ್ಲಿ ಕಡಿತ ಮಾಡಿರುವ ಕೇಂದ್ರ ಸರಕಾರವನ್ನು ಇವರು ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದರು.

ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌ ಹಾಗೂ ಇತರರು ಉಪಸ್ಥಿತರಿದ್ದರು.

Write A Comment