ಕುಂದಾಪುರ: ಕುಂದಾಪುರ ನಗರದಲ್ಲಿ ಯುವತಿಯ ರೇಪ್ ಅಂಡ್ ಮರ್ಡರ್..!, ನಗರದಲ್ಲಿ ಪೆಟ್ರೋಲ್ ಬಂಕ್ಗೆ ಬೆಂಕಿ-ಬಂಕ್ ಬ್ಲಾಸ್ಟ್, ಒತ್ತಿನೆಣೆಯ ಕಂದಕಕ್ಕೆ ಬಸ್ಸು ಉರುಳಿ ಹತ್ತಾರು ಜನರ ದುರ್ಮರಣ, ಕುಂದಾಪುರ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿನಿ ಅನ್ಯಕೋಮಿನ ಯುವಕನೊಂದಿಗೆ ಲವಿ-ಡವ್ವಿ, ಕಾಲೇಜು ಅಧ್ಯಾಪಕಿ ಹಾಗೂ ವಿದ್ಯಾರ್ಥಿಯ ಲವ್ವಿ-ಡವ್ವಿ… ಇತ್ತೀಚೆಗೆ ಒಂದೆರಡು ತಿಂಗಳುಗಳಿಂದ ಹೀಗೆ ಇಲ್ಲಸಲ್ಲದ ಬ್ರೇಕಿಂಗ್ ನ್ಯೂಸುಗಳನ್ನು ಫೋಟೋ ಸಮೇತ ವಾಟ್ಸಾಪ್ನಲ್ಲಿ ಹರಿಯಬಿಟ್ಟು ತಮಾಷೆ ನೋಡುತ್ತಿದ್ದಾರೆ ವಿಕೃತ ಮನಸ್ಸಿನ ಕಿಡಿಗೇಡಿಗಳು. ಈ ಬಗ್ಗೆ ಒಂದು ವರದಿಯಿಲ್ಲಿದೆ ನೋಡಿ.
ಆಂಡ್ರಾಯ್ಡ್ ಮೊಬೈಲ್ ಫೋನು ಈಗ ಎಲ್ಲರ ಕೈಯಲ್ಲೂ ಇದೆ. ಮೊಬೈಲ್ನಲ್ಲಂತೂ ವಾಟ್ಸಾಪ್ ಇಲದವರೇ ಇಲ್ಲ. ಹೀಗೆ ವಾಟ್ಸಾಪ್ ಸುಲಭ ಶೀಘ್ರ ಮಾಹಿತಿ ರವಾನೆಗೆ ಎಷ್ಟು ಉಪಕಾರ ಮಾಡುತ್ತೋ ಅಷ್ಟೇ ಸುಳ್ಳು ಸುದ್ದಿಯನ್ನು ಪಸರಿಸಿ ಪ್ರಾಬ್ಲಮ್ ಮಾಡುತ್ತಿದೆ. ಅಟಕ್ಕೂ ಇದು ವಾಟ್ಸಾಪ್ ತ್ಪಲ್ಲ. ಬದಲಿಗೆ ವಾಟ್ಸಾಪ್ ಉಪಯೋಗಿಸುವ ಕೆಲವು ವಿಕೃತ ಮನಸ್ಸಿನ ಪೋಲಿಗಳ ಪುಂಡಾಟ. ಒಂದೆರಡು ತಿಂಗಳುಗಳಿಂದ ಕುಂದಾಪುರವನ್ನು ಟಾರ್ಗೇಟ್ ಮಾಡಿಕೊಂಡು ಕೆಲವು ಸುಳ್ಳು ಸುದ್ದಿಗಳು ಹರಿಯ ಬಿಡುತ್ತಿದ್ದಾರೆ. ಘಟನೆ ಸತ್ಯಾಸತ್ಯೆ ತಿಳಿಯುವ ಮೊದಲೇ ಒಂದು ಸುದ್ದಿ ಹಾಗೂ ಅದಕ್ಕೆ ಸಂಬಂಧಿಸಿದ ಫೋಟೋಸು, ವಿಡಿಯೋಗಳು ಒಬ್ಬರಿಂದ್ದೊಬ್ಬರಿಗೆ ರವಾನೆಯಾಗಿ ಹಲವರ್ನು ತಲುಪತ್ತಲಿದೆ. ಘಟನೆ ಬಗ್ಗೆ , ವಸ್ತುಸ್ಥಿತಿ ಬಗ್ಗೆ ಯಾರಿಗೂ ಮಾಹಿತಿಯಿರೊಲ್ಲ, ಆದರೂ ಅದನ್ನು ಬೇರೊಬ್ಬರಿಗೆ ಡಿ ಅವರ ತಲೆಗೂ ಹುಳ ಬಿಡುತ್ತಿದ್ದಾರೆ. ಅದರಲ್ಲೂ ತಲೆಕೆಡಿಸಿಕೊಳ್ಳುವ ಕೆಲವರು ಸ್ಥಳೀಯ ಪತ್ರಕರ್ತರು, ಪೊಲೀಸರುಗಳಿಗೆ ಪೋನಾಯಿಸಿ ಮಾಹಿತಿ ಪಡೆಯುವುದೂ ಅಲ್ಲದೇ ಘಟನೆ ಹೇಗಾಯಿತೂ, ಯಾಕಾಯಿತು ಎಂಬ ಬಗ್ಗೆ ಕುತೂಹಲಭರಿತರಾಗಿ ಕೇಳುವರಿದ್ದಾರೆ. ಕೊನೆಗೆ ಅದು ಕುಂದಾಪುರದಲ್ಲಿ ನಡೆದ ಪ್ರಕರಣವಲ್ಲ ಎಂದು ಮನವರಿಕೆಯಾದ ಬಳಿಕ ನಿಟ್ಟುಸಿರು ಬಿಡುತತಾರೆ.
ಇತ್ತೀಚೆಗೆ ಹರಿದಾಡುತ್ತಿರುವ ವಾಟ್ಸಾಪ್ನ ಈ ಸುಳ್ಳು ಸಂದೇಶ ಕುಂದಾಪುರಿಗರನ್ನು ಗೊಂದಲಕ್ಕೀಡು ಮಾಡುತ್ತಿರುವುದು ಒಂದೆಡೆಯಾದರೇ, ಎಲ್ಲೋ ನಡೆದ ಕೊಲೆ, ಅತ್ಯಾಚಾರ, ಕೋಮು ಪ್ರಕರಣಗಳು ಕುಂದಾಪುರದಲ್ಲಿ ನಡೆದಿದೆ ಎನ್ನುವ ರೀತಿಯಲ್ಲಿ ಮರುಸೃಷ್ಟಿಸಿ ಅದನ್ನು ಒಬ್ಬರಿಂದ ಮತ್ತೋಬ್ಬರಿಗೆ, ಒಂದು ಗ್ರೂಫ್ ನಿಂದ ಮತ್ತೊಂದು ಗ್ರೂಫಿಗೆ ಕ್ಷಣ ಮಾತ್ರದಲ್ಲಿ ಶೇರ್ ಮಾಡುವ ಮೂಲಕ ಕುಂದಾಪುರದ ಹೆಸರನ್ನು ಇತರೆಡೆಗಳಲ್ಲಿ ಮೂರಾಬಟ್ಟೆ ಮಾಡುತ್ತಿರುವದು ಕಂಡುಬರುತ್ತಿದೆ. ಹಲವರು ಇದನ್ನೇ ನಿಜಾ ಅಂದುಕೊಂಡು ಕುಂದಾಪುರದ ಬಗ್ಗೆ ಎಗ್ಗಿಲ್ಲದೇ ಕಮೆಂಟ್ ಮಾಡುತ್ತಿರುವುದು ಸುಳ್ಳಲ್ಲ.
ಎರಡು ತಿಂಗಳಲ್ಲಿ 8 ಕ್ಕೂ ಹೆಚ್ಚು ಪ್ರಕರಣಗಳು ಕುಂದಾಪುರಕ್ಕೆ ಥಳಕು ಹಾಕಿಕೊಂಡು ಎಲ್ಲರಿಗೂ ಪಾರ್ವರ್ಡ್ ಆಗಿದೆ. ಇದರಲ್ಲಿ ಕೋಮು ಗಲಭೆ ಸೃಷ್ಟಿಸುವ ಒಂದೆರಡು ಸಂದೇಶಗಳು ಇತ್ತು. ಅದಲ್ಲದೇ ಕುಂದಾಪುರದ ಯುವತಿಯನ್ನು ಯಾರೊ ದುಷ್ಕರ್ಮಿಗಳು ಅತ್ಯಚಾರ ಮಾಡಿ ರಸ್ತೆ ಬದಿಯಲ್ಲಿ ಅವಳ ಕುತ್ತಿಗೆಗೆ ಕತ್ತಿ ಹಾಕಿದ ಘಟನೆ ನಡೆದಿದೆ ಮತ್ತು ಯುವತಿಯ ಹೆಸರು ವಿಳಾಸ ಇನ್ನು ಯಾವುದೇ ಮಾಹಿತಿ ತಿಳಿದಿಲ್ಲ, ಕುಂದಾಪುರದ ಪೆಟ್ರೋಲ್ ಬಂಕ್ಗೆ ಬೆಂಕಿ ಬಿದ್ದು ಸ್ಫೋಟಗೊಂಡಿದೆ ಎಂಬ ಸುದ್ದಿಯಂತೂ ಹಲವೆಡೆ ಸುದ್ದಿ ಮಾಡಿದ್ದಲ್ಲದೇ ಪತ್ರಿಕಾ ಹಾಗೂ ಟಿವಿ ಮಾಧ್ಯಮದ ಡೆಸ್ಕ್ನವರೂ ಸ್ಥಳೀಯ ವರದಿಗಾರರಿಗೆ ಕರೆ ಮಾಡುವಷ್ಟು ಪ್ರಕರಣ ಗಂಭೀರತೆ ಪಡೆದಿತ್ತು. ಇನ್ನು ಹಲವು ಸಂದೇಶಗಳಲ್ಲಿ ದ್ಯಾವುದೋ ರಾಜ್ಯಗಳಲ್ಲಿ ತೆಗೆಯಲಾದ ಯುವಕ-ಯುವತಿಯರ ನಗ್ನ ಚಿತ್ರಗಳು, ಅಶ್ಲೀಲ ಚಿತ್ರಗಳನ್ನು ಕುಂದಾಪುರದ ಯುವಕ-ಯುವತಿಯರೆಂದು ಸೃಷ್ಟಿಸಿ ವಾಟ್ಸಾಪ್ನಲ್ಲಿ ಹರಿಯ ಬಿಟ್ಟಿದ್ದಾರೆ.
ವ್ಯಾಟ್ಸ್ಪ್ನಲ್ಲಿ ತಪ್ಪು ಸಂದೇಶದ ವಿರುದ್ಧ ಕ್ರಮ:
ವಾಟ್ಸಾಪ್ನಲ್ಲಿ ಕಳಿಸುವ ಸಂದೇಶಗಳನ್ನು ಕಂಡು ಹಿಡಿಯಲಾಗುವುದಿಲ್ಲ ಎಂದುಕೊಂಡು ಕಿಡಿಗೇಡಿಗಳು ಇತ್ತೀಚೆಗಿನ ದಿನಗಳಲ್ಲಿ ವಿಳಾಸವಿಲ್ಲದ ಅನೇಕ ರೀತಿಯ ತಪ್ಪು ಸಂದೇಶಗಳನ್ನು ವ್ಯಾಟ್ಸ್ಪ್ನಲ್ಲಿ ರವಾನಿಸುವುದು ನಡೆಯುತ್ತಿದೆ. ಈ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸಲಿದೆ. ಇಲಾಖೆ ಬಳಿ ಆಧುನಿಕ ತಂತರಜ್ಞಾನಗಳು ಇದೆ. ಸಾಮಾಜಿಕ ಜಾಲತಾಣದ ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಇಂತಹ ಪ್ರಚೋಧನಕಾರಿ ಸಂದೇಶಗಳು ಹಾಗೂ ಮಾನಹರಣ ಮಾಡುವ ಸಂದೇಶಗಳನನ್ನು ರವಾನಿಸುವ ಸಂದರ್ಭಗಳಲ್ಲಿ ಸ್ವಯಂಪ್ರೇರಿತರಾಗಿ ತಪ್ಪು ಸಂದೇಶಗಳ ವಿರುದ್ಧ ದೂರು ನೀಡಬಹುದು ಎಂದು ಉಡುಪಿ ಎಸ್ಪಿ ಅಣ್ಣಾಮಲೈ ಅವರು ಕುಂದಾಪುರದಲ್ಲಿ ತಿಳಿಸಿದ್ದಾರೆ.
ವರದಿ- ಯೋಗೀಶ್ ಕುಂಭಾಸಿ







