ಕನ್ನಡ ವಾರ್ತೆಗಳು

ಪೋಲಿಯೋ ಪೀಡಿತ ವಿಕಲಾಂಗ ಸುಧಾಕರ ಪೂಜಾರಿ ಹಂಗಳೂರು ಪಂಚಾಯತ್ ಚುನಾವಣಾ ಕಣದಲ್ಲಿ

Pinterest LinkedIn Tumblr

Hangaluru_Panchayt_Sudhakara

ಕುಂದಾಪುರ: ಬಾಲ್ಯದಲ್ಲೇ ಪೋಲಿಯೋ ಪೀಡಿತರಾಗಿ ಒಂದು ಕಾಲಿನ ಸಂಪೂರ್ಣ ಬಲವನ್ನು ಕಳೆದುಕೊಂಡಿರುವ ಮೂರುವರೆ ಅಡಿ ಎತ್ತರದ ಕುಂದಾಪುರದ ಹಂಗಳೂರು ನಿವಾಸಿ ಕೋಟಿಮನೆಯ ಬಾಲ ಪೂಜಾರಿಯವರ ಮಗ 42 ವರ್ಷ ಪ್ರಾಯದ ಸುಧಾಕರ ಪೂಜಾರಿ ತನ್ನದೇ ಗ್ರಾಮವಾದ ಹಂಗಳೂರಿನ ನಾಲ್ಕನೇ ವಾರ್ಡಿನಿಂದ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

ವಿವಾಹಿತರಾಗಿ ಒಂದು ಗಂಡು ಮಗುವಿನ ತಂದೆಯಾಗಿರುವ ಇವರು ಕಳೆದ 25 ವರ್ಷಗಳಿಂದಲೂ ತನ್ನ ವಿಕಲಾಂಗತೆಯನ್ನು ಮೆಟ್ಟಿ ನಿಂತು ತನ್ನ ಗ್ರಾಮದಲ್ಲಿ ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇವರು ವೃತ್ತಿಯಲ್ಲಿ ಅರ್ಜಿ ಬರಹಗಾರರಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುತ್ತಾರೆ. ತನ್ನ ಕೆಲಸದಲ್ಲಿನ ಚುರುಕುತನದಿಂದ, ಹಾಸ್ಯಭರಿತ ಮಾತುಗಾರಿಕೆಯಿಂದ ಮತ್ತು ತನ್ನ ಅಂಗವೈಕಲ್ಯತೆಯ ನಡುವೆಯೂ ಪರರಿಗೆ ಸಹಕರಿಸುವ ತನ್ನ ಉತ್ತಮ ಗುಣಗಳಿಂದ ಇಡೀ ಗ್ರಾಮ ಜನರ ಪ್ರೀತಿಗೆ ಪಾತ್ರರಾದ ವ್ಯಕ್ತಿ, ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ಬೆರಳೆಣಿಕೆಯ ಮತಗಳ ಅಂತರದಿಂದ ಸೋಲನ್ನಭವಿಸಿದ್ದರು.

ಅತ್ಯಂತ ಚುರುಕು ನಡೆನುಡಿಯ ನಗುಮುಖದ ಈ ವಿಕಲಾಂಗ ಸಮಾಜಸೇವಕನನ್ನು ಗೆಲ್ಲಿಸುವ ಮೂಲಕ ಇವರ ಸಮಾಜಸೇವೆಯನ್ನು ಗುರುತಿಸುವ ಜವಾಬ್ದಾರಿ ಗ್ರಾಮದ ನಮ್ಮೆಲ್ಲರ ಮೇಲಿದೆ ಎನ್ನುತ್ತಾರೆ ಇವರು ಸ್ಪರ್ಧಿಸಿವ ವಾರ್ಡಿನ ಮತದಾರರು.

Write A Comment